ಅನಿಲ ಸೋರಿಕೆ: ಸುತ್ತಮುತ್ತಲ ಗ್ರಾಮಸ್ಥರ ಸ್ಥಳಾಂತರ 144 ಸೆಕ್ಷನ್ ಜಾರಿ

By Suvarna web DeskFirst Published Nov 16, 2016, 4:17 PM IST
Highlights

ಕೆಲ ದಿನಗಳ ಹಿಂದಷ್ಟೇ ಹಾಸನ ಮತ್ತು ಮೈಸೂರು ನಡುವೆ ಕಾರ್ಯಾರಂಭವಾಗಿದ್ದ ಎಲ್‌ಪಿಜಿ ಗ್ಯಾಸ್ ಪೈಪ್ ಲೈನ್ ಮಂಗಳವಾರ ತಡರಾತ್ರಿ ಸಡಿಲವಾಗಿ ಅನಿಲ ಸೋರಿಕೆಯಾಗಿದ್ದ ಪರಿಣಾಮ ಇಂದಿನಿಂದ ದುರಸ್ತಿ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.

ಹಾಸನ (ನ.16): ಕೆಲ ದಿನಗಳ ಹಿಂದಷ್ಟೇ ಹಾಸನ ಮತ್ತು ಮೈಸೂರು ನಡುವೆ ಕಾರ್ಯಾರಂಭವಾಗಿದ್ದ ಎಲ್‌ಪಿಜಿ ಗ್ಯಾಸ್ ಪೈಪ್ ಲೈನ್ ಮಂಗಳವಾರ ತಡರಾತ್ರಿ ಸಡಿಲವಾಗಿ ಅನಿಲ ಸೋರಿಕೆಯಾಗಿದ್ದ ಪರಿಣಾಮ ಇಂದಿನಿಂದ ದುರಸ್ತಿ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.
ತಾಲೂಕಿನ ಮೊಸಳೆಹೊಸಳ್ಳಿ ಬಳಿ ಚಾಚಪುರಕೊಪ್ಪಲಿನಲ್ಲಿ ಪೈಪ್ ಲೈನ್ ನಿಂದ ಅನಿಲ ಸೋರಿಕೆಯಾದ ಹಿನ್ನೆಲೆ ದುರಸ್ತಿ ಕಾರ್ಯಾಚರಣೆಯನ್ನು ನಡೆಸಲು ಮಂಗಳೂರಿನಿಂದ ತಜ್ಞರ ತಂಡ ಆಗಮಿಸಿ ದುರಸ್ತಿ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ.

ಮಂಗಳವಾರ ರಾತ್ರಿ ಎಲ್‌ಪಿಜಿ ಪೈಪ್ ಲೈನ್ ಸಡಿಲವಾದ ಪರಿಣಾಮ, ಗ್ಯಾಸ್ ಸೋರಿಕೆಯಾಗಿ ಸುತ್ತಮುತ್ತಲ ನಾಲ್ಕೆ‘ದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅನಿಲ ಹರಡಿರುವ ಆತಂಕಕಾರಿ ಘಟನೆ ಯಿಂದ ತಾಲೂಕಿನ ಮೊಸಳೆಹೊಸಹಳ್ಳಿಯ ಬಳಿಯ ಚಾಚಪುರಕೊಪ್ಪಲು, ತಮ್ಲಾಪುರ, ಅಂಕಪುರ, ತಿಮ್ಮನಹಳ್ಳಿ ಗ್ರಾಮಸ್ಥರು ಆತಂಕಗೊಂಡಿರುವ ನೆರೆಹೊರೆಯ ಐದಾರು ಗ್ರಾಮಗಳ ಜನರು ದಿಢೀರನೆ ಊರು ತೊರೆದು ಜಾಗರಣೆ ಮಾಡಬೇಕಾಯಿತು.
ಕಳೆದ ರಾತ್ರಿ ಗ್ಯಾಸ್‌ಪೈಪ್ ಲೈನ್ ಬಿರುಕು ಬಿಟ್ಟು ಅನಿಲ ಹೊರ ಬರಲು ಆರಂಭಿಸಿದೆ. ಸುತ್ತಮುತ್ತಲ ಗ್ರಾಮಸ್ಥರು, ಮನೆಯಲ್ಲಿದ್ದ ಸಿಲಿಂಡರ್ ಸೋರಿಕೆಯಾಗಿರಬಹುದು ಎಂದು ಮನೆಯವರನ್ನು ಎಚ್ಚರಿಸಿದ್ದಾರೆ.
ಆದರೆ ಅದೇ ವೇಳೆಗೆ ಮೊಸಳೆ ಹೊಸಳ್ಳಿ ಕಡೆಯಿಂದ ಬಂದವರು ಚಾಚಪುರಕೊಪ್ಪಲು, ಅಂಕಪುರ, ತಿಮ್ಲಾಪುರ ಮತ್ತು ತಿಮ್ಮನಹಳ್ಳಿ ಮಧ್ಯೆ  ಪೈಪ್‌ಲೈನ್ ಬಿರುಕು ಬಿಟ್ಟು, ಅನಿಲ ಸೋರಿಕೆಯಾಗುತ್ತಿದೆ ಎಂದಿದ್ದಾರೆ.
ಇದರಿಂದ ಆತಂಕಗೊಂಡ ಜನರು, ಗ್ಯಾಸ್‌ನ ವಾಸನೆ ತಾಳಲಾರದೇ ಜೀವ ಭಯದಿಂದ ಮನೆ ತೊರೆದಿದ್ದಾರೆ. ಕೂಡಲೇ ಪೊಲೀಸರು ಮತ್ತು ಸಂಬಂ‘ಪಟ್ಟ ಅಧಿಕಾರಿಗಳು ಸುದ್ದಿ ಮುಟ್ಟಿಸಿದ್ದಾರೆ. ಆದರೆ, ಪೊಲೀಸರು ವಿಳಂಬವಾಗಿ ಆಗಮಿಸಿದ್ದರಿಂದ ಸ್ಥಳೀಯರು ಪೊಲೀಸರ ವಿರುದ್ಧ ಹರಿಹಾಯ್ದರು.
ಅನಿಲ ಸೋರಿಕೆಯಿಂದ ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಆತಂಕ ಮನೆ ಮಾಡಿದೆ. ಎಂಆರ್‌ಪಿಎಲ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಅನಿಲ್ ಸೋರಿಕೆಯಾಗುವುದನ್ನು ಪತ್ತೆ ಹಚ್ಚಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮೊಸಳೆ ಹೊಸಳ್ಳಿ-ಅಂಕಪುರ ಮಾರ್ಗ ಬಂದ್ ಮಾಡಲಾಗಿದೆ. ಜಿಲ್ಲಾಧಿಕಾರಿ ವಿ.ಚೈತ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ ‘ೇಟಿ ನೀಡಿದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರೂ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.


ಪೈಲ್‌ಲೈನ್ ಸಡಿಲಗೊಂಡು ಅನಿಲ ಸೋರಿಕೆಯಾಗಿದೆ. ಹಾಗಾಗಿ ರಿಪೇರಿ ಕಾಮಗಾರಿಯನ್ನು ಮಾಡುತ್ತೇವೆ, ಮಂಗಳೂರಿನಿಂದ ತಜ್ಞರ ತಂಡ ಬಂದು ಸಂಪೂರ್ಣವಾದ ದುರಸ್ತಿ ಕಾರ್ಯಾಚರಣೆಯನ್ನು ನಡೆಸಲಾಗುತ್ತದೆ.
ರಾಮಪ್ರಸಾದ್, ಸಿಬ್ಬಂದಿ

ಮಂಗಳೂರು-ಹಾಸನ-ಮೈಸೂರು ಮತ್ತು ಸೋಲೂರು ನಡುವಿನ ಅನಿಲ್ ಪೈಪ್‌ಲೈನ್ ನ.೪ ರಿಂದಷ್ಟೇ ಕಾರ್ಯಾರಂ‘ ಮಾಡಿತ್ತು. ಇದಕ್ಕೆ ಜಮೀನು ನೀಡಿದ ರೈತರಿಗೆ ಇನ್ನೂ ಸರಿಯಾದ ರೀತಿಯಲ್ಲಿ ಪರಿಹಾರವನ್ನೇ ನೀಡಿಲ್ಲ. ಅದಕ್ಕೂ ಮೊದಲೇ ಅನಿಲ ಮಾರ್ಗ ಡ್ಯಾಮೇಜ್ ಆಗಿರುವುದಕ್ಕೆ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತದೆ.
ಶಾಂತಕುಮಾರ್, ಸ್ಥಳೀಯ

144 ನಿಷೇಧಾಜ್ಞೆ ಜಾರಿ
ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ವಿ.ಚೈತ್ರರ ಆದೇಶದ ಮೇರೆಗೆ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಆ ಮಾರ್ಗದಲ್ಲಿ ವಾಹನ ಸಂಚಾರ ನಿಷೇ‘, ಸುತ್ತಮುತ್ತಲ ಗ್ರಾಮಸ್ಥರ ಸ್ಥಳಾಂತರ, ಸ್ಪೋಟಕ ಸಾಗಣೆ, ಉರುವಲಿಗೆ ಬೆಂಕಿ ಹಚ್ಚದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

click me!