ಬಯಲು ಪ್ರದೇಶದಲ್ಲೂ ಬೆಳೆಯಬಹುದು ಸೇಬು!: ಚಿಕ್ಕಮಗಳೂರಿನಲ್ಲಿ ಸೇಬು ಬೆಳೆದ ರೈತ

Published : May 11, 2017, 03:08 AM ISTUpdated : Apr 11, 2018, 12:51 PM IST
ಬಯಲು ಪ್ರದೇಶದಲ್ಲೂ ಬೆಳೆಯಬಹುದು ಸೇಬು!: ಚಿಕ್ಕಮಗಳೂರಿನಲ್ಲಿ ಸೇಬು ಬೆಳೆದ ರೈತ

ಸಾರಾಂಶ

ಸೇಬು  ಅಂದ್ರೆ ಯಾರಿಗೆ ತಾನೆೇ ಇಷ್ಟ ಇಲ್ಲ? ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಬೆಳೆಯುವ ಸೇಬು ನಮ್ಮ ನೆಲದಲ್ಲಿಯೇ  ಬೆಳೆದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ. ಇಲ್ಲೊಬ್ಬ ರೈತ ಬಯಲುಪ್ರದೇಶವಾಗಿರುವ ಚಿಕ್ಕಮಗಳೂರಿನಲ್ಲಿ ಸೇಬು ಬೆಳೆದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾನಲ್ಲದೆ ಇತರ ರೈತರಿಗೆ ಮಾದರಿಯಾಗಿದ್ದಾನೆ.

ಚಿಕ್ಕಮಗಳೂರು(ಮೇ.11): ಸೇಬು  ಅಂದ್ರೆ ಯಾರಿಗೆ ತಾನೆೇ ಇಷ್ಟ ಇಲ್ಲ? ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಬೆಳೆಯುವ ಸೇಬು ನಮ್ಮ ನೆಲದಲ್ಲಿಯೇ  ಬೆಳೆದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ. ಇಲ್ಲೊಬ್ಬ ರೈತ ಬಯಲುಪ್ರದೇಶವಾಗಿರುವ ಚಿಕ್ಕಮಗಳೂರಿನಲ್ಲಿ ಸೇಬು ಬೆಳೆದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾನಲ್ಲದೆ ಇತರ ರೈತರಿಗೆ ಮಾದರಿಯಾಗಿದ್ದಾನೆ.

ಚಿಕ್ಕಮಗಳೂರಿನ ಲಕ್ಷ್ಮೀಪುರ ನಿವಾಸಿ ಚಂದ್ರೇಗೌಡ ಎಂಬ ರೈತ ಕಾಫಿನಾಡಿನಲ್ಲಿ ಸೇಬು ಬೆಳೆದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾನೆ. ಚಂದ್ರೇಗೌಡ, ಪ್ರಾಯೋಗಿಕವಾಗಿ ತಮ್ಮ ಗದ್ದೆಯಲ್ಲಿ  ೩೦ ಗಿಡಗಳನ್ನ ಬೆಳೆದಿದ್ದು, ಒಳ್ಳೆ  ಫಸಲು ಕೂಡಾ ಬಂದಿದೆ. ಮೊದ್ಲು ಎಂಟು ತಳಿಯ ಸೇಬು ಬೆಳೆದಿದ್ದಾರೆ. ಬಳಿಕ ಉತ್ತಮವಾಗಿ ಬಂದ ತಳಿಯನ್ನೇ ಬೆಳೆಯಲು ಮುಂದುವರೆಸಿದ್ದಾರೆ. ಈ ಮೂಲಕ ದುಡಿಯೋ ಛಲವಿದ್ರೆ ಬಯಲುಸೀಮೆಯಲ್ಲೂ  ಸೇಬು ಬೆಳೆಯಬಹುದೆಂದು ನಿರೂಪಿಸಿದ್ದಾರೆ.  

ಇನ್ನು ಸೇಬು ಬೆಳೆಯಲು  ಇವರು ವಿಶೇಷ ಆತಿಥ್ಯವೇನೂ ಮಾಡಿಲ್ಲ. ದಾಳಿಂಬೆ ಗಿಡಗಳ ಮಧ್ಯದಲ್ಲಿ  ಸೇಬು ಬೆಳೆದಿದ್ದು ದಾಳಿಂಬೆಗೆ ಹಾಕುವ ಸಾವಯವ ಗೊಬ್ಬರವನ್ನೇ ಸೇಬಿಗೂ ಹಾಕಿ ಬೆಳೆದಿದ್ದಾರೆ. ಒಟ್ಟಿನಲ್ಲಿ ವಾರ್ಷಿಕ ೨೦-೩೦ ಇಂಚು ಮಳೆ ಬೀಳೋ ಈ ಅಪ್ಪಟ ಬಯಲುಸೀಮೆ ಪ್ರದೇಶದಲ್ಲಿ ಸೇಬನ್ನ ಬೆಳೆದು ಸೈ ಎನ್ನಿಸಿಕೊಂಡಿರುವ ಇವರ ಸಾಧನೆಯನ್ನು  ನಿಜಕ್ಕೂ  ಮೆಚ್ಚಲೇಬೇಕು.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ