
ಬೆಂಗಳೂರು: 'ಮುಸ್ಲಿಮರನ್ನ ಅವಮಾನದಿಂದ ನೋಡಲಾಗುತ್ತಿದೆ,' ಎಂದು ಸಚಿವ ಯು.ಟಿ.ಖಾದರ್ ಬೇಸರ ವ್ಯಕ್ತಪಡಿಸಿದ ಬೆನ್ನಲ್ಲೇ, ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಪ್ರತ್ಯುತ್ತರ ನೀಡಿದ್ದು, 'ಅಷ್ಟು ಅನುಮಾನ, ಅವಮಾನವಾಗುತ್ತಿದ್ದರೆ, ಹಿಂದೂ ಧರ್ಮಕ್ಕೆ ಬಂದು ಬಿಡಿ,' ಎಂದು ಆಹ್ವಾನಿಸಿದ್ದಾರೆ.
ಫೇಸ್‌ಬುಕ್ ಸ್ಟೇಟಸ್ ಹಾಕಿರುವ ಪ್ರಥಮ್, 'ಭಾರತದಲ್ಲಿ ಯಾರು ಯಾವ ಧರ್ಮಕ್ಕೆ ಬೇಕಾದರೂ ಮತಾಂತರವಾಗಬಹುದು. ನೀವೇನಾದರೂ ಹಿಂದು ಧರ್ಮಕ್ಕೆ ಬರೋದಾದರೆ ಬನ್ನಿ. ಆದರೆ, ಕೆಲವು ಷರತ್ತುಗಳು ಅನ್ವಯವಾಗುತ್ತವೆ. ನಿಮ್ಮ ಜತೆ ಸೆಲ್ಫೀ ತೆಗೆದುಕೊಂಡ ಕೆಲವು ಆರೋಪಿಗಳಿಗೆ ಪ್ರವೇಶವಿಲ್ಲ,' ಎಂದು ಹೇಳಿದ್ದಾರೆ.
'ಯಾವ ಜಾತಿ ಆರಿಸಿಕೊಳ್ಳುತ್ತೀರೋ, ಆರಿಸಿಕೊಳ್ಳಿ. ಹಿಂದು ಧರ್ಮದಲ್ಲಿ ಯಾರೂ ನಿಮ್ಮನ್ನು ಅನುಮಾನದಿಂದ ನೋಡಲ್ಲ,' ಎಂಬ ಭರವಸೆಯನ್ನು ಪ್ರಥಮ್ ಖಾದರ್‌ಗೆ ನೀಡಿದ್ದಾರೆ.