ಆಧಾರ್ ಪಡೆದುಕೊಳ್ಳಲು ಬೆಂಗಳೂರಿನಲ್ಲಿ ಮಧ್ಯವರ್ತಿಗಳ ಹಾವಳಿ

Published : Mar 19, 2018, 08:17 AM ISTUpdated : Apr 11, 2018, 12:56 PM IST
ಆಧಾರ್ ಪಡೆದುಕೊಳ್ಳಲು ಬೆಂಗಳೂರಿನಲ್ಲಿ ಮಧ್ಯವರ್ತಿಗಳ ಹಾವಳಿ

ಸಾರಾಂಶ

ಸರ್ಕಾರದ ವಿವಿಧ ಯೋಜನೆ ಹಾಗೂ ಸೌಲಭ್ಯಗಳ ಲಾಭ ಪಡೆಯಲು ಆಧಾರ್ ಕಾರ್ಡ್‌ ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ ಬೆಂಗಳೂರ್ ಒನ್ ಬಳಿ ಕಿ ಮೀಟರ್​ಗಟ್ಟಲೆ ಜನ ಕ್ಯೂ ನಿಲ್ಲುತ್ತಿದ್ದಾರೆ. ಆದರೆ ಉಚಿತವಾಗಿ ಸಿಗಬೇಕಾದ ಆಧಾರ್ ಕಾರ್ಡ್​ಗೆ ಮಧ್ಯವರ್ತಿಗಳು ಹಣ ವಸೂಲಿ ಮಾಡಿ ಬಡವರ ಹೊಟ್ಟೆ ಮೇಲೆ ಹೊಡೀತಿದ್ದಾರೆ.

ಬೆಂಗಳೂರು :  ಸರ್ಕಾರದ ವಿವಿಧ ಯೋಜನೆ ಹಾಗೂ ಸೌಲಭ್ಯಗಳ ಲಾಭ ಪಡೆಯಲು ಆಧಾರ್ ಕಾರ್ಡ್‌ ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ ಬೆಂಗಳೂರ್ ಒನ್ ಬಳಿ ಕಿ ಮೀಟರ್​ಗಟ್ಟಲೆ ಜನ ಕ್ಯೂ ನಿಲ್ಲುತ್ತಿದ್ದಾರೆ. ಆದರೆ ಉಚಿತವಾಗಿ ಸಿಗಬೇಕಾದ ಆಧಾರ್ ಕಾರ್ಡ್​ಗೆ ಮಧ್ಯವರ್ತಿಗಳು ಹಣ ವಸೂಲಿ ಮಾಡಿ ಬಡವರ ಹೊಟ್ಟೆ ಮೇಲೆ ಹೊಡೀತಿದ್ದಾರೆ. ಬಡವರ ಬೆವರಿನ ಹಣಕ್ಕೆ ಕೈ ಚಾಚುವ ಬ್ರೋಕರ್​ಗಳ ಅಸಲಿ ಮುಖ ಎಕ್ಸ್​ಕ್ಲೂಸಿವ್ ದೃಶ್ಯ ಸುವರ್ಣನ್ಯೂಸ್ನಲ್ಲಿ ಸೆರೆಯಾಗಿದೆ.

ಬೆಂಗಳೂರು ಒನ್ ಕೇಂದ್ರದಲ್ಲೇ ನಡೀತಿರೋ ಮಧ್ಯವರ್ತೀಗಳ ದಂಧೆ ಇದು. ಆಧಾರ್​ಗಾಗಿ ಬೆಳಗ್ಗೆ ಬಂದು ಸಂಜೆವರೆಗೆ ಬೆಂಗಳೂರು ಒನ್ ಕೇಂದ್ರದದ ಮುಂದೆ ಕ್ಯೂ ನಿಂತರೂ ಏನೂ ಪ್ರಯೋಜನ ಇಲ್ಲ. ಇಲ್ಲಿ ಮಧ್ಯವರ್ತಿಗಳದ್ದೇ ಎಲ್ಲಾ. ಅಷ್ಟಕ್ಕೂ ಒಮ್ಮೆ ಕೈ ಬಿಸಿ ಮಾಡಿದರೆ ಕೆಲಸ ಆಗಿಬಿಡುತ್ತೆ ಅನ್ನೋದು ಪಕ್ಕಾ ಇಲ್ಲ.

ಇಂದು, ನಾಳೆ ಅನ್ನೋದು ಇಲ್ಲೂ ಇದೆ. ಇನ್ನೂ ಶಾಸಕ ಗೋಪಾಲಯ್ಯನವರ ವಾರ್ಡ್​ ಬಸವೆಶ್ವರನಗರದ ಬೆಂಗಳೂರು ಒನ್ ​ಗೆ ಹೋದರೆ ಅಚ್ಚರಿಯಾಗಿತ್ತು. ಯಾಕಂದ್ರೆ 500 ರೂಪಾಯಿ ಕೊಟ್ಟು ಟೋಕನ್ ಪಡೆದವರಿಗೆ ಮಾತ್ರ ಅಲ್ಲಿ ಆಧಾರ್ ಕಾರ್ಡ್ ಎನ್ನುವಂತಹ ಸ್ಥಿತಿಗೆ ಇಲ್ಲಿದೆ.

ಬಸವೆಶ್ವರನಗರದ ಬೆಂಗಳೂರು ಒನ್ ​ ಕೇಂದ್ರದಲ್ಲಿ  ಆಡಿಟರ್ ಉಮಾಪತಿಯದ್ದೇ ಕಿತಾಪತಿಯಂತೆ. ಈತನ ವಿರುದ್ಧ ಶಾಪ ಹಾಕೋ ಮಂದಿಗೇನು ಕಡಿಮೆಯಿಲ್ಲ. ನಮ್ಮ ಕ್ಯಾಮರಾದಲ್ಲಿ ಇದೆಲ್ಲವೂ ಸೆರೆಯಾಗಿದೆ. ಇನ್ನು ಈತನ  ಕೃತ್ಯದ ಬಗ್ಗೆ ಬೆಂಗಳೂರು ಒನ್ ಅಧಿಕಾರಿಗಳೇ ಖುದ್ದು ದೂರು ನೀಡಿದರೂ ಕೂಡ ಪೊಲೀಸರು ಕ್ಯಾರೇ ಎನ್ನುತ್ತಿಲ್ಲವಂತೆ.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ