'ಸೆಕ್ಷಿ ಎನ್ನುವುದು ಮಹಿಳೆಯರ ಬಟ್ಟೆಯಲ್ಲಲ್ಲ, ಅದು ಪುರುಷರ ತಲೆಯಲ್ಲಿ ಅಡಗಿದ್ದು'

By Web DeskFirst Published Mar 9, 2019, 10:38 PM IST
Highlights

ಹೆಣ್ಣು ಮಕ್ಕಳು ಧರಿಸುವ ಬಟ್ಟೆಯಿಂದಲೇ ಪುರುಷರು ಉದ್ರೇಕವಾಗುತ್ತಾರೆ ಎನ್ನೋ ಮಾತಿಗೆ ಮಹಿಳಾ ಪರ ಹೋರಾಟಗಾರ್ತಿ ಕಲಬುರ್ಗಿಯ ಮೀನಾಕ್ಷಿ ಬಾಳಿ ಪ್ರತಿಕ್ರಿಯಿಸಿದ್ದು ಹೀಗೆ.

ಧಾರವಾಡ, [ಮಾ.09]: ಸೆಕ್ಷಿ ಎನ್ನುವುದು ಮಹಿಳೆಯರ ಬಟ್ಟೆಯಲ್ಲಲ್ಲ. ಅದು ಪುರುಷರ ತಲೆಯಲ್ಲಿ ಅಡಗಿದ್ದು, ಅದನ್ನು ಮೊದಲು ಆಸಿಡ್ ಹಾಕಿ ತೊಳೆದು ಹಾಕಿರಿ ಎಂದು ಮಹಿಳಾ ಪರ ಹೋರಾಟಗಾರ್ತಿ ಕಲಬುರ್ಗಿಯ ಮೀನಾಕ್ಷಿ ಬಾಳಿ ಹೇಳಿದ್ದಾರೆ.

ಇಲ್ಲಿನ ಕಲಾಭವನದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ ಹಮ್ಮಿಕೊಂಡ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆ ಧರಿಸುವ ಬಟ್ಟೆಯಿಂದ ಅತ್ಯಾಚಾರಗಳು ನಡೆಯುತ್ತವೆ ಎಂದು ಹೇಳುವ ವರ್ಗವೊಂದಿದೆ.

 ಈ ವರ್ಗವು ಮೊದಲು ವಿಚಾರ ಮಾಡುವುದನ್ನು ಕಲಿಯಬೇಕು. ಸಲ್ಮಾನ್‌ಖಾನ್ ತಮ್ಮ ಚಿತ್ರದಲ್ಲಿ ಬಟ್ಟೆ ತೆಗೆದು ಚಿತ್ರದಲ್ಲಿ ಪೋಸು ನೀಡುತ್ತಾನೆ. ಇದರಿಂದ ಮಹಿಳೆಗೆ ಏನು ಅನಿಸುವುದಿಲ್ಲ. ಆದರೆ ಅದೇ ಹೆಣ್ಣು ಅರ್ಧ ಮರ್ದ ಬಟ್ಟೆ ಧರಿಸಿದರೇ ಈ ಸಮಾಜ ನೋಡುವ ದೃಷ್ಠಿ ಬೇರೆಯೇ ಇರುತ್ತದೆ. 

ಹೆಣ್ಣು ಮೈತುಂಬ ಬಟ್ಟೆ ಧರಿಸಬೇಕು. ಅದೇ ಭಾರತೀಯ ಸಂಸ್ಕೃತಿ ಎನ್ನುವವರು ಮೊದಲು ರುಮಾಲು, ದೋತಿ ಉಟ್ಟು ಸಂಸ್ಕೃತಿ ರಕ್ಷಿಸಲಿ, ಹೆಣ್ಣು ಯಾವಾಗಲೂ ಸಂಸ್ಕೃತಿಯ ರಕ್ಷಣೆಗೆ ಇದ್ದಾಳೆ ಎಂದರು.

click me!