'ಸಿದ್ದರಾಮಯ್ಯ ವಿರುದ್ಧ ಗುಂಡೂರಾವ್‌ ಕುತಂತ್ರ'

By Web DeskFirst Published Oct 21, 2019, 7:43 AM IST
Highlights

ಬಿಜೆಪಿಯಿಂದ ಸಿದ್ದರಾಮಯ್ಯ ಮೇಲೆ ಐಟಿ ರೇಡ್‌ ಸಂಚು ಹೇಳಿಕೆಗೆ ಸಚಿವ ಜಗದೀಶ ಶೆಟ್ಟರ್‌ ತಿರುಗೇಟು|  ಸಿದ್ದರಾಮಯ್ಯ ಅವರ ಮಾಹಿತಿಯನ್ನು ಐಟಿ ಇಲಾಖೆಗೆ ದಿನೇಶ ಗುಂಡೂರಾವ್‌ ಅವರೆ ನೀಡಿ ರೇಡ್‌ ಆಗುವಂತೆ ಕುತಂತ್ರ ನಡೆಸುತ್ತಿರಬಹುದು ಎಂದ ಜಗದೀಶ ಶೆಟ್ಟರ್‌| ದಿನೇಶ ಗುಂಡೂರಾವ್‌ ಅವರಿಗೆ ಐಟಿಯವರೇನು ಕರೆ ಮಾಡಿದ್ದರೆ?| ಐಟಿ ಹಾಗೂ ಇಡಿಯವರು ತಮ್ಮದೆ ಆದ ಮಾಹಿತಿ ಪಡೆದು ಕಾರ್ಯೋನ್ಮುಖರಾಗುತ್ತಾರೆ| ಇದು ಇಲಾಖೆಯವರಿಗೆ ಮಾತ್ರ ತಿಳಿದಿರುತ್ತದೆ| 

ಹುಬ್ಬಳ್ಳಿ[ಅ.21]: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಹಿತಿಯನ್ನು ಐಟಿ ಇಲಾಖೆಗೆ ದಿನೇಶ ಗುಂಡೂರಾವ್‌ ಅವರೆ ನೀಡಿ ರೇಡ್‌ ಆಗುವಂತೆ ಕುತಂತ್ರ ನಡೆಸುತ್ತಿರಬಹುದು ಎಂಬ ಸಂಶಯ ನನಗೆ ಉಂಟಾಗುತ್ತಿದೆ ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ವಿರುದ್ಧ ಐಟಿ ದಾಳಿ ನಡೆಸಲು ಬಿಜೆಪಿ ಸಂಚು ನಡೆಸಿದೆ ಎಂದು ದಿನೇಶ ಗುಂಡೂರಾವ್‌ ನೀಡಿರುವ ಹೇಳಿಕೆಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್‌, ದಿನೇಶ ಗುಂಡೂರಾವ್‌ ಅವರಿಗೆ ಐಟಿಯವರೇನು ಕರೆ ಮಾಡಿದ್ದರೆ? ಐಟಿ ಹಾಗೂ ಇಡಿಯವರು ತಮ್ಮದೆ ಆದ ಮಾಹಿತಿ ಪಡೆದು ಕಾರ್ಯೋನ್ಮುಖರಾಗುತ್ತಾರೆ. ಇದು ಇಲಾಖೆಯವರಿಗೆ ಮಾತ್ರ ತಿಳಿದಿರುತ್ತದೆ. ಆದರೆ ಈ ವಿಷಯ ದಿನೇಶ್‌ ಅವರಿಗೆ ತಿಳಿದಿದೆ ಎಂದಾದರೆ ಅವರೇ ಒಳಗಿಂದೊಳಗೆ ಐಟಿಗೆ ದೂರು ನೀಡಿ, ಮಾಹಿತಿಯನ್ನೂ ನೀಡಿ ಸಿದ್ದರಾಮಯ್ಯ ಅವರ ಮೇಲೆ ರೇಡ್‌ ಮಾಡಿಸುತ್ತಿದ್ದಾರಾ ಎಂಬ ಸಂಶಯ ಮೂಡುತ್ತದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇನ್ನು, ಸಿದ್ದರಾಮಯ್ಯ ಕೀಳು ಮಟ್ಟದ ರಾಜಕಾರಣಕ್ಕೆ ಹೊರಟಿದ್ದಾರೆ. ಅವರು ಎಸ್‌.ಎಂ. ಕೃಷ್ಣ ಅವರನ್ನು ನೋಡಿ ಕಲಿಯುವುದು ಸಾಕಷ್ಟಿದೆ. ಕೃಷ್ಣ ಬಿಜೆಪಿಯಲ್ಲಿದ್ದಾರೆ ಎಂದು ಈ ಮಾತು ಹೇಳುತ್ತಿಲ್ಲ. ಆದರೆ, ಅವರು ನಡೆ ಹೇಗಿತ್ತು ಎಂಬುದು ಎಲ್ಲರಿಗೂ ಮಾದರಿಯಾಗಿದ್ದು, ಅದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಸ್ತುತ ಸಿದ್ದರಾಮಯ್ಯ ಕೀಳಾಗಿ ಮಾತನಾಡಿದರೆ ತಾನು ದೊಡ್ಡ ನಾಯಕನಾಗಿ ಬೆಳೆಯುತ್ತೇನೆ, ದೇಶದಲ್ಲಿ ಪ್ರಸಿದ್ಧಿಗೆ ಬರುತ್ತೇನೆ ಎಂದುಕೊಂಡಿದ್ದಾರೆ. ಆದರೆ, ಇದರ ಪರಿಣಾಮವನ್ನು ಬೇಗ ಅನುಭವಿಸಲಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್‌ ಅವರ ಬಗ್ಗೆ ಮಾತನಾಡಿರುವುದು ಸರಿಯಲ್ಲ. ನಾವು ಕೂಡ ಅವರ ವಿರುದ್ಧ ಏಕವಚನದಲ್ಲಿ ಮಾತನಾಡಬಹುದು ‘ಏ ಸಿದ್ದರಾಮಯ್ಯ ಎಲ್ಲಿದ್ದೀಯಪ್ಪಾ’ ಎಂದು ಕೇಳಬಹುದು. ಆದರೆ ಹಾಗೆ ಕೇಳಿದರೆ ನಾವೆ ಸಣ್ಣವರಾಗುತ್ತೇವೆ. ನಿಮ್ಮ ನಾಯಕರಿಗೆ ನಿಮ್ಮ ಬಗ್ಗೆ ಅಸಮಾಧಾನವಿದೆ. ಶಾಸಕರು ಬಂಡೆದಿದ್ದಾರೆ. ಅವರನ್ನು ಸಮಾಧಾನ ಪಡಿಸುವ ಕೆಲಸ ಮಾಡಿ. ಮಾಜಿ ಕೃಷಿ ಸಚಿವ ಶಿವಶಂಕರ ರೆಡ್ಡಿ ಅವರು, ನಮ್ಮ ಸುದ್ದಿಗೆ ಬಂದರೆ ಕೈ ಕತ್ತರಿಸುತ್ತೇವೆ ಎಂದು ಹೇಳಿಕೆ ನೀಡಿರುವುದು ಒಳ್ಳೆಯ ಸಂಗತಿಯಲ್ಲ. ಇದೊಂದು ಕೆಟ್ಟ ಸಂಸ್ಕೃತಿ ಶುರುವಾಗಿದೆ ಎಂದರು.

click me!