‘ಅಯೋಧ್ಯೆ ತೀರ್ಪಿನಿಂದ ಎರಡು ಕೋಮುಗಳ ಮಧ್ಯದ ಆತಂಕ ದೂರವಾಗಿದೆ’

By Web DeskFirst Published Nov 10, 2019, 2:24 PM IST
Highlights

ಸುಪ್ರೀಂಕೋರ್ಟ್ ಸರ್ವ ಸಮ್ಮತ ತೀರ್ಪು ನೀಡಿದೆ| ಕೋರ್ಟ್‌ ತೀರ್ಪನ್ನು ಎಲ್ಲರೂ ಒಪ್ಪಿದ್ದಾರೆ|  ತೀರ್ಪಿನಿಂದ ಎರಡು ಕೋಮುಗಳ ಮಧ್ಯದ ಆತಂಕ ದೂರವಾಗಿದೆ‌| ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರಗೆ ಧನ್ಯವಾದಗಳು ಎಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ|

ಹುಬ್ಬಳ್ಳಿ[ನ.10]: ರಾಮ ಮಂದಿರ ವಿಚಾರದಲ್ಲಿ ಸುಪ್ರೀಂಕೋರ್ಟ್ ಸರ್ವ ಸಮ್ಮತ ತೀರ್ಪು ನೀಡಿದೆ.ಕೋರ್ಟ್‌ ತೀರ್ಪನ್ನು ಎಲ್ಲರೂ ಒಪ್ಪಿದ್ದಾರೆ. ತೀರ್ಪಿನಿಂದ ಎರಡು ಕೋಮುಗಳ ಮಧ್ಯದ ಆತಂಕ ದೂರವಾಗಿದೆ‌. ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರಗೆ ಧನ್ಯವಾದಗಳು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಭಾನುವಾರ ನಗರದಲ್ಲಿ ಔರಾಧಕರ ವರದಿ ಜಾರಿ ವಿಚಾರದ ಬಗ್ಗೆ ಮಾಹಿತಿ ನೀಡಿದ ಅವರು, ಮುಂದಿನ ತಿಂಗಳಿನಿಂದ ವರದಿ ಪ್ರಕಾರ ವೇತನ ಜಾರಿಯಾಗಲಿದೆ.ವರದಿ ಅನುಷ್ಠಾನವನ್ನು ಹಣಕಾಸು ಇಲಾಖೆ ನೋಡಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿನ ಸ್ಟೋಟ ಪ್ರಕರಣದ ಬಗ್ಗೆ ರೈಲ್ವೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಉತ್ತರ ಪ್ರದೇಶದ ಲಖನೌದಲ್ಲಿ ಹಿಂದೂ ಮುಖಂಡ ಕಮಲೇಶ್ ತಿವಾರಿ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಹುಬ್ಬಳ್ಳಿಯ ಓರ್ವನನ್ನು ಬಂಧಿಸಿದ್ದಾರೆ. ಎಲ್ಲಾ ಆಯಾಮಗಳಿಂದ ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
 

click me!