ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ : ಪ್ರಯಾಣಿಕರ ಪ್ರಾಣ ಉಳಿಸಿದ ಚಾಲಕ

Published : Oct 22, 2019, 01:22 PM ISTUpdated : Oct 22, 2019, 01:25 PM IST
ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ : ಪ್ರಯಾಣಿಕರ ಪ್ರಾಣ ಉಳಿಸಿದ ಚಾಲಕ

ಸಾರಾಂಶ

ಸಾರಿಗೆ ಬಸ್ ಚಾಲಕನ ಸಮಯ ಪ್ರಜ್ಞೆ 20 ಜನರ ಪ್ರಾಣ ಕಾಪಾಡಿದೆ. ಬಸ್ ಚಾಲಕ ಕಂದಕಕ್ಕೆ ಉರುಳುತ್ತಿದ್ದ ಬಸ್ ನಿಯಂತ್ರಿಸಿ ಜೀವ ರಕ್ಷಿಸಿದ್ದಾರೆ.

ಹುಬ್ಬಳ್ಳಿ [ಅ.22]: ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. 

ಹುಬ್ಬಳ್ಳಿ ತಾಲೂಕಿನ ಚನ್ನಾಪುರ ಗ್ರಾಮದ ಕೆರೆಯ ಪಕ್ಕದಲ್ಲಿಯೇ  ರಸ್ತೆ ಬದಿಯಲ್ಲಿ ಬಾರೀ ಕಂದಕವಾಗಿದ್ದು, ಕಂದಕಲದಲ್ಲಿ ಬಸ್ ಸಿಲು ಸಂಪೂರ್ಣ ವಾಲಿದ್ದು, ಈ ವೇಳೆ ಬಸ್ ಚಾಲಕನ ನಿಯಂತ್ರಣದಿಂದ ಅವಘಡವೊಂದು ತಪ್ಪಿದಂತಾಗಿದೆ. 

ಸಾರಿಗೆ ಇಲಾಖೆಗೆ ಸೇರಿದ ಬಸ್ ಗಿರಿಯಾಲದಿಂದ ಚನ್ನಾಪುರ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳುತ್ತಿತ್ತು. ಮಳೆಯಿಂದ ಉಂಟಾದ ಕಂದಕ ಕಾಣಿಸದೇ ಬಸ್ ವಾಲಿದ್ದು, ಈ ವೇಳೆ ಚಾಲಕ ನಾರಾಯಣ್ ತಮ್ಮ ಚಾಲಾಕಿನಿಂದ ಬಸ್ಸಿನಲ್ಲಿದ್ದ 20ಕ್ಕೂ ಅಧಿಕ ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆ ಕುಸಿದು ಕಂದಕವಾಗಿದ್ದು,  ಅದೃಷ್ಟವಶಾತ್ ಅವಘಡವೊಂದು ತಪ್ಪಿದೆ.

PREV
click me!

Recommended Stories

'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ
ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ