ನೋಯ್ಡಾ(ಮೇ.28): ಬೈಕ್ ಸ್ಟಂಟ್ ಮಾಡಲು ಹೋಗಿ ದಂಡ ಕಟ್ಟಿಸಿಕೊಂಡ ಹಲವು ಘಟನೆಗಳು ಕಣ್ಣ ಮುಂದಿದೆ. ಇಲ್ಲೊಬ್ಬ ಅಸಾಮಿ ತಾನು ಶಕ್ತಿಮಾನ್ ಎಂದು ಬೈಕ್‌ನಲ್ಲಿ ಸ್ಟಂಟ್ ಮಾಡುತ್ತಾ ಎಲ್ಲರ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ. ಈತನ ಶಕ್ತಿ,ಶಕ್ತಿ, ಶಕ್ತಿಮಾನ್ ಸ್ಟಂಟ್‌ಗೆ ದುಬಾರಿ ಬೆಲೆ ತೆತ್ತಿದ್ದಾರೆ. ವಿಡಿಯೋ ವೈರಲ್ ಆಗುವ ಮುನ್ನವೇ ಕಿಲಾಡಿ ಸ್ಟಂಟ್ ಮ್ಯಾನ್ ಅರೆಸ್ಟ್ ಆಗಿದ್ದಾನೆ.
ನೋಯ್ಡಾದ ಹಳ್ಳಿಯೊಂದರ ಯುವಕ ವಿಕಾಸ್ ಸಾಮಾಜಿಕ ಜಾಲತಾಣದಲ್ಲಿ ತನ್ನ ಸ್ಟಂಟ್ ವೈರಲ್ ಆಗಬೇಕು, ಜನ ತನ್ನ ಬಗ್ಗೆ ಮಾತನಾಡಬೇಕು ಎಂದು ಸ್ಟಂಟ್ ಮಾಡಿದ್ದಾನೆ. ಚಲಿಸುತ್ತಿರುವ ಬೈಕ್‌ನಲ್ಲಿ ಮಲಗಿಕೊಂಡು ಹೋಗುತ್ತಿರುವ ಸ್ಟಂಟ್ ಮಾಡಿದ್ದಾನೆ. ಇದನ್ನು ಚಿತ್ರೀಕರಿಸಲು ತನ್ನ ಇಬ್ಬರು ಗೆಳೆಯರ ಸಹಾಯ ಪಡೆದಿದ್ದಾನೆ.
ಬೈಕ್ ಏರಿ ಸ್ಟಂಟ್ ಮಾಡಿದ ಅಜ್ಜ: ವಿಡಿಯೋ ವೈರಲ್, ಕೇಸ್ ಜಡಿದ ಖಾಕಿ
ಗೆಳೆಯರ ಪ್ರೋತ್ಸಾಹದೊಂದಿದೆ ಈ ಶಕ್ತಿಮಾನ್ ವಿಕಾಸ್ ರಸ್ತೆಯಲ್ಲಿ ಸ್ಟಂಟ್ ಮಾಡಿದ್ದಾನೆ. ವಿಡಿಯೋವನ್ನು ಗೆಳೆಯರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ನಿಮಿಷ ನಿಮಿಷಕ್ಕೂ ಎಷ್ಟು ಲೈಕ್ಸ್ ಬಂದಿದೆ? ಎಷ್ಟು ಕಮೆಂಟ್ಸ್ ಬಂದಿದೆ ಎಂದು ಚೆಕ್ ಮಾಡುತ್ತಲೇ ಇದ್ದ ಈ ಸ್ಟಂಟ್ ಮಾಸ್ಟರ್‌ಗೆ ಪೊಲೀಸರು ಶಾಕ್ ನೀಡಿದ್ದಾರೆ.
ಈನತ ಸ್ಟಂಟ್ ವೀಡಿಯೋ ವೈರಲ್ ಆಗುವ ಮುನ್ನವೇ ಪೊಲೀಸರು ಈತನ ಪತ್ತೆ ಹಚ್ಚಿದ್ದಾರೆ. ಬಳಿಕ ಮೋಟಾರು ವಾಹನ ನಿಯಮ ಉಲ್ಲಂಘನೆ, ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್, ಇತರರ ಜೀವದ ಜೊತೆ ಚೆಲ್ಲಾಟವಾಡುವ ಪ್ರವೃತ್ತಿ ಸೇರಿದಂತೆ ಹಲವು ಪ್ರಕರಣ ದಾಖಲಿಸಿದ್ದಾರೆ. ಈತನ ಸ್ಟಂಟ್‌ಗೆ ನೆರವು ನೀಡಿದ ಇಬ್ಬರು ಗೆಳೆಯರನ್ನು ಪೊಲೀಸರು ಬಂಧಿಸಿದ್ದಾರೆ.
ಅಪಾಯಕಾರಿ ಬೈಕ್ ವೀಲಿಂಗ್ ಮಾಡುತ್ತಿದ್ದ ಸವಾರರ ಬಂಧನ!
ವಿಡಿಯೋ ವೈರಲ್ ಆಗುವ ಮುನ್ನವೇ ಸ್ಟಂಟ್ ಮ್ಯಾನ್ ವಿಕಾಸ್ ಸೇರಿದಂತೆ ಮೂವರು ಅರೆಸ್ಟ್ ಆಗಿದ್ದಾರೆ. ನೋಯ್ಡಾ ಪೊಲೀಸರು ಸ್ಟಂಟ್‌ಗೆ ಬಳಸಿದ ಬೈಕ್ ವಶಪಡಿಸಿಕೊಂಡಿದ್ದಾರೆ.
बाइक पर खतरनाक स्टंट करने वाले युवक विकास तथा वीडियो बनाने वाले उसके 02 साथियों (गौरव, सूरज) को थाना सेक्टर-63 नोएडा पुलिस द्वारा गिरफ्तार कर स्टंट में प्रयुक्त बाइक को सीज किया गया। pic.twitter.com/d94nvcfK01
— POLICE COMMISSIONERATE GAUTAM BUDDH NAGAR (@noidapolice)
ಬೈಕ್ ಸ್ಟಂಟ್, ವೀಲಿಂಗ್: 8 ಯುವಕರ ಬಂಧನ
ಜನ-ವಾಹನ ನಿಬಿಡ ರಸ್ತೆಗಳಲ್ಲಿ ಬೈಕ್ ಸ್ಟಂಟ್ ಮತ್ತು ವೀಲಿಂಗ್ ಮಾಡಿ, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತಿದ್ದ ಬಗ್ಗೆ ಮಂಗಳೂರಿನ ಟ್ರಾಫಿಕ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದು, ಎಂಟು ಮಂದಿ ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಇವರಲ್ಲಿ ಒಬ್ಬ ಅಪ್ರಾಪ್ತ ಆರೋಪಿಯೂ ಸೇರಿದ್ದಾನೆ.
ಸಾರ್ವಜನಿಕರ ದೂರುಗಳು ಹಾಗೂ ಜಾಲತಾಣದ ಬಗ್ಗೆ ನಿಗಾ ಇಡುವ ಪೊಲೀಸ್ ತಂಡದ ಮೂಲಕ ಈ ಪ್ರಕರಣಗಳನ್ನು ಭೇದಿಸಲಾಗಿದೆ. ಮೊಹಮ್ಮದ್ ಅನಿಝ್, ಕಿಶನ್ ಶೆಟ್ಟಿ, ತೌಸಿಫ್ ಮೊಹಮ್ಮದ್, ಮೊಹಮ್ಮದ್ ಸ್ವಾಹಿಲ್, ಮೊಹಮ್ಮದ್ ಶರೀಫ್, ಅಬೂಬಕ್ಕರ್ ಸಿದ್ದಿಕ್, ಇಲ್ಯಾಸ್ ಝಯಿನ್ ಬಂಧಿತರಾಗಿದ್ದು ಇನ್ನೊಬ್ಬ ಆರೋಪಿ ಅಪ್ರಾಪ್ತನಾಗಿದ್ದಾನೆ.
16 ದ್ವಿಚಕ್ರ ವಾಹನ ವಶಕ್ಕೆ
ತುಮಕೂರು ನಗರದ ಜಯನಗರ ಮತ್ತು ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ವಾಹನಗಳನ್ನು ಬಳಸಿಕೊಂಡು ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಹಾಗೂ ಬೈಕ್ ವೀಲಿಂಗ್ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಒಟ್ಟು 16 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಕಿಲೋ ಮೀಟರ್ ದೂರ ಪುಂಡರ ವ್ಹೀಲಿಂಗ್
ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ರಸ್ತೆಯಲ್ಲಿ ಪ್ರತಿನಿತ್ಯ ಬೆಳಗ್ಗೆ ರಾತ್ರಿಯನ್ನದೆ ಒಂದೇ ಚಕ್ರದಲ್ಲಿ ಕಿಲೋ ಮೀಟರ್ ದೂರ ಭಯಾನಕ ಬೈಕ್ ರೈಡ್ ವ್ಹೀಲಿಂಗ್ ಮಾಡುತ್ತಿರುವ ಪುಂಡರ ಹಾವಳಿ ಹೆಚ್ಚಾಗಿದ್ದು, ಪೊಲೀಸರು ಕಡಿವಾಣ ಹಾಕಬೇಕಿದೆ ಎಂದು ಸಾರ್ವಜನಿಕರು ಒತ್ತಾಹಿಸಿದ್ದಾರೆ.