ಡೋನಾಲ್ಡ್ ಟ್ರಂಪ್ ಟೈಮ್ ಸರಿಯಿಲ್ಲ. ಚುನಾವಣೆಯಲ್ಲಿ ಸೋತ ಬಳಿಕ ಪಟ್ಟು ಹಿಡಿದ ಟ್ರಂಪ್ ಬಳಿಕ ಹಿಂಸಾಚಾರ ಸೇರಿದಂತೆ ಹಲವು ಘಟನೆಗಳಿಗೆ ಕಾರಣರಾದರು. ಇದೀಗ ಟ್ರಂಪ್ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಹರಾಜಿಗೆ ಇಡಲಾಗಿದೆ. ಇದೀಗ ಈ ಕಾರನ್ನು ಭಾರತೀಯ ಖರೀದಿಸಲು ಮುಂದಾಗಿದ್ದಾನೆ.
ಕೇರಳ(ಜ.12); ಭಾರತದಲ್ಲಿ ಶ್ರೀಮಂತರು, ಉದ್ಯಮಿಗಳ ಕಾರು ಕ್ರೇಝ್ ಊಹೆಗೂ ನಿಲುಕುವುದಿಲ್ಲ. ವಿಂಟೇಜ್ ಕಾರನ್ನು ಹರಾಜಿನಲ್ಲಿ ಕೋಟಿ ಕೋಟಿಗೆ ಬೆಲೆಗೆ ಖರೀದಿಸುವ ಕಾರು ಪ್ರೀಯರಿದ್ದಾರೆ. ಇದೀಗ ಕೇರಳದ ಆಭರಣ ಉದ್ಯಮಿ ಬಾಬಿ ಚೆಮ್ಮನ್ನೂರ್, ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಖರೀದಿಸಲು ಮುಂದಾಗಿದ್ದಾರೆ.
ಕಾರಿನ ನಂಬರ್ ಪ್ಲೇಟ್‌ಗೆ 60 ಕೋಟಿ ರೂ ಖರ್ಚು ಮಾಡಿದ ಭಾರತೀಯ ಉದ್ಯಮಿ!.
ಡೋನಾಲ್ಡ್ ಟ್ರಂಪ್ ಮಾಡಿದ ಯಡವಟ್ಟಿನಿಂದ ಇದೀಗ ಪದಚ್ಯುತ ಭೀತಿ ಎದುರಿಸುತ್ತಿದ್ದಾರೆ. ಇತ್ತ ಡೋನಾಲ್ಡ್ ಟ್ರಂಫ್ ಬಳಸಿದ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಹರಾಜಿಗೆ ಇಡಲಾಗಿದೆ. ಈ ಕಾರನ್ನು ಬಾಬಿ ಖರೀದಿಸಲು ಮುಂದಾಗಿದ್ದಾರೆ. ಬಾಬಿ ಬಳಿ ಚಿನ್ನದ ಬಣ್ಣ ಲೇಪಿತ ರೋಲ್ಸ್ ರಾಯ್ಸ್ ಕಾರಿದೆ. ಇದರ ಜೊತೆಗೆ ಹಲವು ರೋಲ್ಸ್ ರಾಯ್ಸ್, ಮರ್ಸಿಡೀಸ್ ಬೆಂಝ್ ಸೇರಿದಂತೆ ಐಷಾರಾಮಿ ಕಾರುಗಳಿವೆ. ಇದರ ಜೊತೆಗೆ ಟ್ರಂಪ್ ಕಾರು ಖರೀದಿಸಲು ಮುಂದಾಗಿದ್ದಾರೆ.
ಅಂಬಾನಿ ಬಳಿಯಿರುವ ದುಬಾರಿ ಕಾರು ಯಾವುದು? ಇಲ್ಲಿದೆ ವಿವರ!.
ಟ್ರಂಪ್ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರಿನ ಬಿಡ್ಡಿಂಗ್ 3 ಕೋಟಿ ರೂಪಾಯಿಂದ ಆರಂಭಗೊಳ್ಳಲಿದೆ. ಈಗಾಗಲೇ ಟ್ರಂಪ್ ಕಾರು ಖರೀದಿಸಲು ಹಲವರು ಆನ್‌ಲೈನ್ ಮೂಲಕ ನೊಂದಣಿ ಮಾಡಿಕೊಂಡಿದ್ದಾರೆ. ಹೀಗಾಗಿ ಟ್ರಂಪ್ ಕಾರು 10 ಕೋಟಿ ರೂಪಾಯಿಗೂ ಅಧಿಕ ಬೆಲೆಗೆ ಹರಾಜಾಗುವ ಸಾಧ್ಯತೆ ಇದೆ. ಇತ್ತ ಬಾಬಿ ಚೆಮ್ಮನ್ನೂರ್, ಎಷ್ಟೇ ಬೆಲೆಯಾದರೂ ಕಾರು ಖರೀದಿಸುವುದಾಗಿ ಹೇಳಿದ್ದಾರೆ.
ಡೋನಾಲ್ಟ್ ಟ್ರಂಪ್ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುವವ ವರೆಗೆ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಬಳಿಸಿದ್ದರು. 2010ರ ಫ್ಯಾಂಟಮ್ ಕಾರು ಇದಾಗಿದ್ದು, 91,249 ಕಿ.ಮೀ ಪ್ರಯಾಣ ಮಾಡಿದೆ.