Bengaluru News: ವಾಹನ ಸವಾರರನ್ನು ಅನಾವಶ್ಯಕ ತಡೆದು ನಿಲ್ಲಿಸದಂತೆ ಡಿಜಿ & ಐಜಿಪಿ ಸೂಚನೆ

By Manjunath Nayak  |  First Published Jun 27, 2022, 3:34 PM IST

ಈ ಹಿಂದೆ ಪ್ರವಿಣ್ ಸೂದ್ 'ದಾಖಲೆಗಳ ಪರಿಶೀಲನೆ ಹೆಸರಿನಲ್ಲಿ ಅನಾವಶ್ಯಕವಾಗಿ ವಾಹನಗಳನ್ನ ತಡೆದು ನಿಲ್ಲಿಸುವುದಕ್ಕೆ ಬ್ರೇಕ್ ಹಾಕಿದ್ದರು.


ವರದಿ: ಮಂಜುನಾಥ್‌, ಬೆಂಗಳೂರು

ಬೆಂಗಳೂರು (ಜೂ. 27): ನಗರದಲ್ಲಿ ವಾಹನಗಳ ಡಾಕ್ಯುಮೆಂಟ್ (Documents) ಪರಿಶೀಲನೆ ಹೆಸರಿನಲ್ಲಿ ಟ್ರಾಫಿಕ್ ಪೊಲೀಸರು (Traffic Police) ವಾಹನ ಸವಾರರನ್ನ ತಡೆದು ನಿಲ್ಲಿಸದಂತೆ ರಾಜ್ಯ ಪೊಲೀಸ್ ಇಲಾಖೆಯ ಡಿಜಿ & ಐಜಿಪಿ ಪ್ರವೀಣ್ ಸೂದ್ (Praveen Sood) ಸೂಚನೆ ನೀಡಿದ್ದಾರೆ. ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನ ತಡೆದು ಪರಿಶೀಲನೆ ನಡೆಸುವ ಪೊಲೀಸರ ಕ್ರಮದ' ಬಗ್ಗೆ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್‌ರಿಗೆ   ಟ್ವಿಟರ್ ಬಳೆಕದಾರರೊಬ್ಬರು ಟ್ವೀಟ್ ಮಾಡಿದ್ದರು. ಈ ಹಿಂದೆ ಪ್ರವಿಣ್ ಸೂದ್ 'ದಾಖಲೆಗಳ ಪರಿಶೀಲನೆ ಹೆಸರಿನಲ್ಲಿ ಅನಾವಶ್ಯಕವಾಗಿ ವಾಹನಗಳನ್ನ ತಡೆದು ನಿಲ್ಲಿಸುವುದಕ್ಕೆ ಬ್ರೇಕ್ ಹಾಕಿದ್ದರು. ಈಗ ಡಿಜಿ & ಐಜಿಪಿಯಾಗಿರುವ ಅವರಿಂದ ಮತ್ತೊಮ್ಮೆ ಅದೇ ನಿಯಮ ನಿರೀಕ್ಷಿಸಬಹುದೇ' ಎಂದು ಉಲ್ಲೇಖಿಸಿದ್ದರು.

Tap to resize

Latest Videos

ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಡಿಜಿ & ಐಜಿಪಿ ಪ್ರವೀಣ್ ಸೂದ್ 'ಸಂಚಾರ ನಿಯಮಗಳನ್ನ ಉಲ್ಲಂಘಿಸಿದ ವಾಹನಗಳನ್ನ ದಾಖಲಾತಿ ಪರಿಶೀಲನೆ ಹೆಸರಿನಲ್ಲಿ ಅನಾವಶ್ಯಕ  ತಡೆಯದಂತೆ' ಸೂಚಿಸಿದ್ದು ಕೇವಲ ಡ್ರಿಂಕ್ ಆ್ಯಂಡ್ ಡ್ರೈವ್ ಪರಿಶೀಲಿಸಬಹುದು ಹಾಗೂ ಕಣ್ಣೆದುರು ಸಂಚಾರಿ ನಿಯಮವನ್ನ ಉಲ್ಲಂಘನೆ ಮಾಡಿದ್ರೆ ಆಗ ದಾಖಲೆಗಳ ಪರಿಶೀಲನೆ ಹಾಗೂ ದಂಡವನ್ನ (Fine) ವಿಧಿಸಬಹುದು  ಎಂದು ನಗರ ಪೊಲೀಸ್ ಆಯುಕ್ತರು ಹಾಗೂ ಸಂಚಾರ ವಿಭಾಗದ ಜಂಟಿ ಆಯುಕ್ತರಿಗೆ ಟ್ಯಾಗ್ ಮಾಡುವ ಮೂಲಕ ಸೂಚಿಸಿದ್ದಾರೆ.

ಇದನ್ನೂ ಓದಿ: ಸಂಚಾರಿ ಪೊಲೀಸರೊಂದಿಗೆ ಅನುಚಿತ ವರ್ತನೆ: ಭಾರಿ ದಂಡ ತೆರಬೇಕಿನ್ನು!

 

Yes I stand by it & reiterate again… no vehicle SHALL BE STOPPED only for checking documents unless it has committed a traffic violation visible to the naked eye. Only exception is drunken driving. Have instructed & for its implementation immediately. https://t.co/Ecg8y4FlGP

— Praveen Sood (@Copsview)

 

click me!