ದಾವಣಗೆರೆ : ಬಿಜೆಪಿ ಸೇರಿದ ಯುವ ಮುಖಂಡ

By Kannadaprabha News  |  First Published Nov 8, 2019, 1:38 PM IST

ದಾವಣಗೆರೆಯ ಯುವ ಮುಖಂಡ ಇದೀಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆದರ್ಶಗಳಿಂದ ಪ್ರಭಾವಿತರಾಗಿ ಪಕ್ಷ ಸೇರಿದ್ದಾಗಿ ಹೇಳಿದರು. 


ದಾವಣಗೆರೆ [ನ.08]:  ನಾಯಕ ಸಮಾಜದ ಯುವ ಮುಖಂಡ ವಿನೋಬ ನಗರದ ಶ್ರೀನಿವಾಸ ದಾಸಕರಿಯಪ್ಪ ನಗರದಲ್ಲಿ  ಬಿಜೆಪಿ ಸೇರ್ಪಡೆಯಾದರು. 

ಇಲ್ಲಿನ ವಿನೋಬನಗರದ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತಮ್ಮ ಅಪಾರ ಬೆಂಬಲಗರ ಸಮೇತ  ಜಿಎಂಐಟಿ ಕಾಲೇಜಿಗೆ ತೆರಳಿದ ಶ್ರೀನಿವಾಸದಾಸಕರಿ ಯಪ್ಪ ತಮ್ಮ ಹಿತೈಷಿ, ಬೆಂಬಲಿಗರೊಂದಿಗೆ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ರಾದ ಎಸ್.ಎ.ರವೀಂದ್ರ ನಾಥ, ಎಸ್. ವಿ. ರಾಮಚಂದ್ರ ಇತ ರರ ಸಮ್ಮುಖದಲ್ಲಿ ಬಿಜೆಪಿ ಬಾವುಟ ಹಿಡಿಯುವ ಮೂಲಕ ಪಕ್ಷಕ್ಕೆ ಸೇರಿದರು.

Tap to resize

Latest Videos

ಇದೇ ವೇಳೆ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನಪರ ಯೋಜನೆ, ಕಾರ್ಯಕ್ರಮ, ಜನಪರ ಚಿಂತನೆ, ಅಭಿವೃದ್ಧಯನ್ನು ಮೆಚ್ಚಿ, ಬದಲಾವಣೆಗಾಗಿ ಜನರು ಬಿಜೆಪಿ ಬೆಂಬಲಿ ಸುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಯುವ ಮುಖಂಡ ಶ್ರೀನಿವಾಸ ದಾಸಕರಿ ಯಪ್ಪ ಮತ್ತು ಬೆಂಬಲಿಗರು ಬಿಜೆಪಿಗೆ ಸೇರ್ಪಡೆಗೆ ಹರ್ಷ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಶಾಸಕ ರಾದ ಬಿ.ಪಿ.ಹರೀಶ ಗೌಡ, ಎಂ.ಬಸವರಾಜ ನಾಯ್ಕ, ಲೋಕಿಕೆರೆ ನಾಗರಾಜ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಎಚ್.ಸಿ.ಜಯಮ್ಮ, ಬಿ.ಎಸ್.ಜಗದೀಶ, ಮಾಜಿ ಮೇಯರ್ ಎಚ್.ಎನ್.ಗುರುನಾಥ ಇತರರು ಇದ್ದರು.

click me!