ದಾವಣಗೆರೆ ಮಹಾ ನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಆದರೆ ಮ್ಯಾಜಿಕ್ ಸಂಖ್ಯೆ ತಲುಪಲು ಪಕ್ಷಗಳು ವಿಫಲವಾಗಿದ್ದು ಅಧಿಕಾರಕ್ಕಾಗಿ ರಣತಂತ್ರ ನಡೆದಿದೆ.
ದಾವಣಗೆರೆ [ನ.14]: ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ವಿಧಾಸನಭಾ ಉಪ ಚುಣಾವಣೆಗೂ ಮುನ್ನ ಫಲಿತಾಂಶ ಹೊರ ಬಿದ್ದುದ್ದು, ದಾವಣಗೆರೆ ಮಹಾ ನಗರ ಪಾಲಿಕೆ ಫಲಿತಾಂಶ ಅತಂತ್ರವಾಗಿದೆ.
ಒಟ್ಟು 45 ವಾರ್ಡುಗಳಲ್ಲಿ ಅಧಿಕಾರ ಹಿಡಿಯಲು ಮ್ಯಾಜಿಕ್ ನಂಬರ್ 23 ಸ್ಥಾನ ಹೊಂದುವುದು ಅಗತ್ಯವಾಗಿದೆ. ಆದರೆ ಯಾವುದೇ ಪಕ್ಷವೂ ಕೂಡ ಮ್ಯಾಜಿಕ್ ನಂಬರ್ ತಲುಪದೇ ಪಾಲಿಕೆ ಅತಂತ್ರವಾಗಿದೆ.
undefined
ಕಾಂಗ್ರೆಸ್ 21 ವಾರ್ಡುಗಳಲ್ಲಿ ಗೆಲುವು ಪಡೆದಿದ್ದರೆ, ಬಿಜೆಪಿ 18 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಇನ್ನು ಜೆಡಿಎಸ್ ಕೇವಲ ಒಂದು ವಾರ್ಡಲ್ಲಿ ಖಾತೆ ತೆರೆದರೆ, ಪಕ್ಷೇತರರು 5 ವಾರ್ಡುಗಳಲ್ಲಿ ಗೆಲುವು ಪಡೆದಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹೆಚ್ಚು ಸ್ಥಾನ ಪಡೆದ ಕಾಂಗ್ರೆಸ್ ಹಾಗೂ ಬಿಜೆಪಿಗರಿಂದ ಪಾಲಿಕೆ ಅಧಿಕಾರ ಹಿಡಿಯಲು ರಣತಂತ್ರ ನಡೆದಿದ್ದು ಪಕ್ಷೇತರರ ಬೆಂಬಲ ಪಡೆಯಲು ಯತ್ನಿಸುತ್ತಿದ್ದಾರೆ.
ಕಾಂಗ್ರೆಸ್ ಒಟ್ಟು 21 ಸ್ಥಾನಗಳಲ್ಲಿ ಗೆಲುವು ಪಡೆದಿದ್ದು ಪಕ್ಷೇತರರು ಬೆಂಬಲ ನೀಡಿದಲ್ಲಿ 26 ಸ್ಥಾನ ಹೊಂದಲಿದೆ. ಇನ್ನು ಬಿಜೆಪಿ ಪಕ್ಷೇತರರ ಬೆಂಬಲ ಪಡೆದಲ್ಲಿ ನಿಖರವಾದ ಮ್ಯಾಜಿಕ್ ನಂಬರ್ ಪಡೆಯಲಿದೆ. ಸದ್ಯ ಯಾರಿಗೂ ಬಹುಮತವಿಲ್ಲದ ಕಾರಣ ಅತಂತ್ರವಾಗಿದೆ.
ರಾಜ್ಯದಲ್ಲಿ 14 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿದೆ. ಎರಡು ಮಹಾನಗರ ಪಾಲಿಕೆ, 6 ನಗರಸಭೆ, 3 ಪುರಸಭೆ, 3 ಪಟ್ಟಣ ಪಂಚಾಯತ್ ಗಳಿಗೆ ಚುನಾವಣೆ ನಡೆದಿದೆ.