9 ಬಿಜೆಪಿ ಮುಖಂಡರನ್ನು ಉಚ್ಛಾಟನೆ ಮಾಡಲಾಗಿದೆ. 6 ವರ್ಷಗಳ ಕಾಲ ಉಚ್ಛಾಟಿಸಿ ಆದೇಶ ನೀಡಲಾಗಿದೆ.
ದಾವಣಗೆರೆ [ನ.09]: ಮಹಾನಗರ ಪಾಲಿಕೆ ಚುನಾವಣೆಗೆ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ ಜಗಳೂರು ಮಾಜಿ ಶಾಸಕ ಟಿ. ಗುರುಸಿದ್ದನಗೌಡ ಸೊಸೆ ಪ್ರೀತಿ ಡಾ.ರವಿ ಕುಮಾರ, ಮಾಜಿ ಮೇಯರ್ ಉಮಾಪ್ರಕಾಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಎನ್.ರಾಜಶೇಖರ್ ಸೇರಿ ೯ ಜನರನ್ನು ತಕ್ಷಣವೇ ಜಾರಿಗೆ ಬರುವಂತೆ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟಿಸಿ ಬಿಜೆಪಿ ರಾಜ್ಯ ಘಟಕ ಆದೇಶ ಹೊರಡಿಸಿದೆ.
ಪಾಲಿಕೆಗೆ 12 ರಂದು ನಡೆಯುವ ಚುನಾವಣಾ ಕಣದಲ್ಲಿ ಇವರುಗಳು ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಲ್ಲದೇ, ಪಕ್ಷದ ಸೂಚನೆ ಮೀರಿ ಬಂಡಾಯ ಅಭ್ಯರ್ಥಿಗಳ ಪರವಾಗಿ ಬಹಿರಂಗವಾಗಿ ಬೆಂಬಲಿಸಿದ ಪದಾಧಿಕಾರಿಗಳನ್ನು ತಕ್ಷಣ ದಿಂದಲೇ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷ ಉಚ್ಛಾಟಿಸಿ ಆದೇಶ ಹೊರಡಿಸಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪಾಲಿಕೆಯ 15ನೇ ವಾರ್ಡ್‌ನ ಬಂಡಾಯ ಅಭ್ಯರ್ಥಿ ಶಶಿಕಲಾ ಪರಸನಗೌಡ, 18ನೇ ವಾರ್ಡ್‌ನ ಬಿಜೆಪಿ ಮಾಜಿ ಅಧ್ಯಕ್ಷ ಪರಸನ ಗೌಡ,24ನೇ ವಾರ್ಡ್‌ನ ಬಂಡಾಯ ಅಭ್ಯರ್ಥಿ, ಉತ್ತರ ವಲಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅತೀಥ್ ಅಂಬರಕರ್, 32ನೇ ವಾರ್ಡ್‌ನ ಬಂಡಾಯ ಅಭ್ಯರ್ಥಿ, ಮಾಜಿ ಮೇಯರ್ ಉಮಾ ಪ್ರಕಾಶ್, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಎ.ವೈ.ಪ್ರಕಾಶ್, 33ನೇ ವಾರ್ಡ್‌ನ ಬಂಡಾಯ ಅಭ್ಯರ್ಥಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ರಾಜಶೇಖರ, 42ನೇ ವಾರ್ಡ್‌ನ ಬಂಡಾಯ ಅಭ್ಯರ್ಥಿ ಪ್ರೀತಿ ರವಿಕುಮಾರ, 44ನೇ ವಾರ್ಡ್‌ನ ಕಾರ್ಯ ದರ್ಶಿ ಮಂಜುನಾಥ (ನಲ್ಲಿ ಮಂಜಣ್ಣ), 44ನೇ ವಾರ್ಡ್‌ನ ಬಂಡಾಯ ಅಭ್ಯರ್ಥಿ ಪದ್ಮಾವತಿ ಮಂಜು ನಾಥ್‌ರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟಿಸಲಾಗಿದೆ ಎಂದು ಬಿಜೆಪಿ ರಾಜ್ಯ ಸಹ ಸಂಚಾಲಕ ಬಿ.ಎನ್. ರಾಘವೇಂದ್ರ ತಿಳಿಸಿದ್ದಾರೆ.