ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಸಂಚಾರ ಸ್ಥಗಿತ

Published : Nov 04, 2019, 12:30 PM ISTUpdated : Nov 04, 2019, 12:35 PM IST
ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಸಂಚಾರ ಸ್ಥಗಿತ

ಸಾರಾಂಶ

ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಂಚಾರ ನಿಷೇಧಿಸಲಾಗಿದೆ. ಕಾರಣ ಏನು ? 

ಮಂಗಳೂರು [ನ.04]:   ತಾಂತ್ರಿಕ ಸಮಸ್ಯೆಯಿಂದ ಗ್ಯಾಸ್ ಟ್ಯಾಂಕರ್ ಸೋರಿಕೆಯಾಗಿರುವ ಘಟನೆ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದಿದೆ. 

ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಕರವೇಲು ಬಳಿ ಇಂದು ಬೆಳಕ್ಕೆ ಗ್ಯಾಸ್ ಟ್ಯಾಂಕರ್ ಸೋರಿಕೆಯಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ  ವೇಳೆ ಈ ಘಟನೆಯಾಗಿದೆ

ಗ್ಯಾಸ್ ಟ್ಯಾಂಕರ್ ಸೋರಿಕೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಹಿಂದೆಯೂ ಅನೇಕ ಬಾರಿ ಗ್ಯಾಸ್ ಟ್ಯಾಂಕರ್ ಲೀಕೇಜ್‌ನಿಂದ ಹಲವು ರೀತಿಯ ಸಮಸ್ಯೆಗಳು ಉಂಟಾಗಿದ್ದು, ಈ ನಿಟ್ಟಿನಲ್ಲಿ ಇಲ್ಲಿ ಸಂಚಾರ ನಿಷೇಧ ಮಾಡಲಾಗಿದೆ. 

ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.  ಅಲ್ಲದೇ ಸ್ಥಳಕ್ಕೆ MRPL  ತಜ್ಞರೂ ಭೇಟಿ ನೀಡಿ ಪರಿಶೀಲಿಸಿದ್ದಾರೆ. 

PREV
click me!

Recommended Stories

ಮುಂಬೈಗೆ ಹೋಗೋರ ಗಮನಕ್ಕೆ ರೈಲು ಸೇವೆಯಲ್ಲಿ 1ತಿಂಗಳು ಅನಿರೀಕ್ಷಿತ ಬದಲಾವಣೆ, ಕೊಂಕಣ-ದಕ್ಷಿಣ ರೈಲ್ವೆ ಜಂಟಿ ಪ್ರಕಟಣೆ
ಅಭಿವೃದ್ಧಿಯಲ್ಲಿ ಎಂಜಿನಿರ್‌ಗಳ ಕೊಡುಗೆ ಅನನ್ಯ: ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಶ್ಲಾಘನೆ