ಗ್ರಾಮ ಪಂಚಾಯತ್‌ಗಳು, ಸದಸ್ಯರು ಹಾಗೂ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ತಜ್ಞರೊಂದಿಗೆ ಸಲಹೆ ಪಡೆದು ಪಂಚಾಯತ್‌ರಾಜ್ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಮಂಗಳೂರು(ನ.09): ಗ್ರಾಮ ಪಂಚಾಯತ್‌ಗಳು, ಸದಸ್ಯರು ಹಾಗೂ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ತಜ್ಞರೊಂದಿಗೆ ಸಲಹೆ ಪಡೆದು ಪಂಚಾಯತ್‌ರಾಜ್ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಾಗೂ ಬಂಟ್ವಾಳ ತಾ.ಪಂ. ಆಶ್ರಯದಲ್ಲಿ ಶುಕ್ರವಾರ ನಡೆದ ದ.ಕ. ಜಿಲ್ಲೆಯ ಎಲ್ಲ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಚಿಂತನ- ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾ ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಸಂದರ್ಭ ಪ್ರಸ್ತಾಪಿಸಿದ ಸಿಬ್ಬಂದಿ ಕೊರತೆ, ವೇತನ ಪರಿಷ್ಕರಣೆಗಳ ಬಗ್ಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳುವುದಾಗಿ ಈಶ್ವರಪ್ಪ ಭರವಸೆ ನೀಡಿದ್ದಾರೆ.
ಸಿಎಂ ಆಗಲು ಸಿದ್ದು ತಿರುಕನ ಕನಸು: ಸಚಿವ ಈಶ್ವರಪ್ಪ ಲೇವಡಿ
ತೆರಿಗೆ ಸಂಗ್ರಹದಲ್ಲಿ ರಾಜ್ಯದಲ್ಲಿಯೇ ಅಗ್ರಸ್ಥಾನದಲ್ಲಿರುವ ದ.ಕ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದ ಅವರು, ಆ ಮೂಲಕ ದ.ಕ. ಜಿಲ್ಲೆಯನ್ನು ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ರೂಪಿಸುವ ಜೊತೆಗೆ ಜಿಲ್ಲೆಯ ನುರಿತರ ಯಶೋಗಾಥೆಗಳನ್ನು ರಾಜ್ಯ ಮಟ್ಟದಲ್ಲಿ ಹಂಚಿಕೊಳಲ್ಳು ವೇದಿಕೆ ಒದಗಿಸಲಾಗುವುದು ಎಂದಿದ್ದಾರೆ.
ಪ್ರತಿ ಗ್ರಾಮಮಟ್ಟದಲ್ಲಿ ಸ್ಮಶಾನದ ಅವಶ್ಯವಿದ್ದು, ಸ್ಮಶಾನ ನಿರ್ಮಾಣಕ್ಕಾಗಿ ಜಮೀನು ಗುರುತಿಸುವಂತೆ, ಸರ್ಕಾರಿ ಜಮೀನು ಇಲ್ಲದೇ ಇದ್ದಲ್ಲಿ ಖಾಸಗಿ ಜಾಗವನ್ನು ಖರೀದಿಸಲು ಅವಕಾಶವಿದೆ. ಸ್ಮಶಾನ ನಿರ್ಮಾಣಕ್ಕೆ ಅಗತ್ಯ ನೆರವನ್ನು ಗ್ರಾಮ ಪಂಚಾಯಿತಿಯ ಉದ್ಯೋಗ ಖಾತ್ರಿ ಸಹಿತ ಇತರ ನಿಧಿಗಳಿಂದ ಒದಗಿಸಲಾಗುವುದು ಎಂದವರು ಹೇಳಿದರು. ರಾಜ್ಯದಲ್ಲಿ ಗ್ರಾಪಂಗಳು ಎದುರಿಸುತ್ತಿರುವ ವಿದ್ಯುತ್‌ನ ಕೊರತೆಯನ್ನು ನೀಗಿಸಲು, ರಾಜ್ಯದ ಎಲ್ಲ 6,021 ಗ್ರಾಪಂ ಕಟ್ಟಡಗಳನ್ನು ಮುಂದಿನ ಒಂದು ವರ್ಷದೊಳಗಾಗಿ ಸೋಲಾರ್ ವಿದ್ಯುತ್ ಅನ್ನು ಅಳವಡಿಸಲಾಗುವುದು ಎಂದ ಅವರು, ಘನ, ದ್ರವ್ಯ ತ್ಯಾಜ್ಯ ವಿಲೇವಾರಿಗೆ ಕ್ಲಸ್ಟರ್ ಯೋಜನೆ ರೂಪಿಸುವ ಮೂಲಕ ಶುದ್ಧೀಕರಣ ಘಟಕ ನಿರ್ಮಿಸಬೇಕು. ಒಂದೊಂದು ಗ್ರಾಪಂಗೆ 20 ಲಕ್ಷ ರುಪಾಯಿ ಒದಗಿಸಲಾಗುವುದು. ಎಲ್ಲ ಗ್ರಾಮಗಳೂ ಸಕ್ರಿಯವಾಗುವಂತೆ ಮಾಡಲು ಗ್ರಾಪಂಗಳಲ್ಲಿ ತರಬೇತಿ ಆಯೋಜಿಸಲಾಗುವುದು ಎಂದಿದ್ದಾರೆ.
ಬಂಟ್ವಾಳ ಬಹುಗ್ರಾಮಕ್ಕೆ ಹೆಚ್ಚುವರಿ 45 ಕೋಟಿ:
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಬಾಕಿ ಉಳಿದಿರುವ ಬಂಟ್ವಾಳ ತಾಲೂಕಿನ 9 ಗ್ರಾಮಗಳಿಗೆ ಬಹುಗ್ರಾಮ ಕುಡಯುವ ನೀರು ಒದಗಿಸಲು ಯೋಜನೆಗೆ 45.5 ಕೋಟಿ ರೂ. ಅನುದಾನವನ್ನು ತಕ್ಷಣ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯ್‌್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿದ್ದಾರೆ.
ಸಿದ್ದರಾಮಯ್ಯ ಹಗಲು ಕನಸು ಈಡೇರದು: ಮಟ್ಟಾರು