ವಯಸ್ಸು 30 ದಾಟಿದರೂ ಕಂಕಣ ಬಲ ಕೂಡಿಲ್ವಾ? ಇಂದು ಈ ನಂಬರ್‌ನವರಿಗೆ ‘ಶಾದಿ ಭಾಗ್ಯ’..!

Published : Jul 25, 2023, 10:12 AM IST
ವಯಸ್ಸು 30 ದಾಟಿದರೂ ಕಂಕಣ ಬಲ ಕೂಡಿಲ್ವಾ? ಇಂದು ಈ ನಂಬರ್‌ನವರಿಗೆ ‘ಶಾದಿ ಭಾಗ್ಯ’..!

ಸಾರಾಂಶ

ಸಂಖ್ಯಾ ಶಾಸ್ತ್ರದ ಪ್ರಕಾರ ನಿಮ್ಮ ಈ ದಿನದ ಭವಿಷ್ಯವೇನು ಎಂಬುದನ್ನು ತಿಳಿಯಿರಿ. ನಿಮ್ಮ ಸಂಖ್ಯೆ ಯಾವುದೆಂಬುದನ್ನು ಕಂಡುಕೊಳ್ಳಲು, ನಿಮ್ಮ ಜನ್ಮ ದಿನಾಂಕದ ಅಂಕಿಗಳನ್ನು ಸೇರಿಸಿ. ಉದಾಹರಣೆಗೆ ನಿಮ್ಮ ಜನ್ಮ ದಿನಾಂಕ 23 ಆಗಿದ್ದರೆ 2 + 3 = 5. 5 ನಿಮ್ಮ ಸಂಖ್ಯೆಯಾಗಿರುತ್ತದೆ. ಈಗ ನೀವು ಸಂಖ್ಯೆ 5ರ ಮೇಲೆ ನಿಮ್ಮ ಸಂಖ್ಯಾಶಾಸ್ತ್ರ(Numerology)ದ ಮುನ್ಸೂಚನೆಯನ್ನು ಪರಿಶೀಲಿಸಬೇಕು.

ಸಂಖ್ಯೆ 1 (ಯಾವುದೇ ತಿಂಗಳ 1, 10, 19 ಮತ್ತು 28 ರಂದು ಜನಿಸಿದ ಜನರು)

ಇಂದು ಕೆಲವರು ಅಸೂಯೆಯಿಂದ ನಿಮ್ಮನ್ನು ಟೀಕಿಸಬಹುದು. ನಕಾರಾತ್ಮಕ ಜನರಿಂದ ದೂರವಿರಿ. ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ವ್ಯಾಪಾರಕ್ಕೆ ಹೆಚ್ಚು ಶ್ರಮ ಬೇಕಾಗುತ್ತದೆ. ಆರ್ಥಿಕ ಸ್ಥಿತಿ ಸಹಜವಾಗಿರಲಿದೆ. 

ಸಂಖ್ಯೆ 2 (ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದ ಜನರು)

ಕುಟುಂಬದ ಹಿರಿಯರ ಅನುಭವ ಮತ್ತು ಸಲಹೆಯನ್ನು ಅನುಸರಿಸುವುದು ನಿಮಗೆ ತುಂಬಾ ಪ್ರಯೋಜನಕಾರಿ. ಯಾವುದೇ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ದೈನಂದಿನ ಆದಾಯವು ಉತ್ತಮವಾಗಿರುತ್ತದೆ, ನೀವು ಸಾಲದಲ್ಲಿ ಮೋಸ ಹೋಗಬಹುದು.

ಸಂಖ್ಯೆ 3 (ಯಾವುದೇ ತಿಂಗಳ 3, 12, 21, 30 ರಂದು ಜನಿಸಿದ ಜನರು)

ನಿಮ್ಮ ಸಮಯವನ್ನು ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಕಳೆಯಿರಿ. ಅವಿವಾಹಿತರಿಗೆ ಮದುವೆಗೆ ಸಂಬಂಧಿಸಿದೆ ಒಳ್ಳೆಯ ಸುದ್ದಿ ಸಿಗಲಿದೆ.

ಸಂಖ್ಯೆ 4 (ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದ ಜನರು)

ಹಿರಿಯರ ಆಶೀರ್ವಾದ ಮತ್ತು ಬೆಂಬಲ ನಿಮ್ಮ ಭವಿಷ್ಯಕ್ಕೆ ಸಹಾಯ ಮಾಡುತ್ತದೆ. ಕೆಲವೊಮ್ಮೆ ನಿಮ್ಮ ಕೋಪ ಮತ್ತು ಆತುರವು ನಿಮಗೆ ತೊಂದರೆ ಉಂಟುಮಾಡುತ್ತದೆ. ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆಯುವುದರಿಂದ ಅವರ ಮನೋಬಲ ಹೆಚ್ಚುತ್ತದೆ. ಆಪ್ತ ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ಒತ್ತಡ ಕಡಿಮೆಯಾಗುತ್ತದೆ.

ಮನೆಯಲ್ಲಿ ಈ ಏಳು ವಸ್ತುಗಳಿದ್ದರೆ ಅಶುಭ; ನಿಮ್ಮ ಅವನತಿ ಗ್ಯಾರೆಂಟಿ..!

 

ಸಂಖ್ಯೆ 5 (ಯಾವುದೇ ತಿಂಗಳ 5, 14, 23 ರಂದು ಜನಿಸಿದ ಜನರು)

ಕೌಟುಂಬಿಕ ವಾತಾವರಣದಲ್ಲಿ ಸಕಾರಾತ್ಮಕ ಬದಲಾವಣೆಯಾಗಲಿದೆ. ಯುವಕರು ಸಂದರ್ಶನಗಳಲ್ಲಿ ಯಶಸ್ಸನ್ನು ಪಡೆಯದ ಕಾರಣ ಹತಾಶೆಯ ಸ್ಥಿತಿಯಲ್ಲಿರುತ್ತಾರೆ. ಗಂಡ-ಹೆಂಡತಿ ಸಂಬಂಧದಲ್ಲಿ ಸಮಸ್ಯೆಗಳು ಉಂಟಾಗಬಹುದು.

ಸಂಖ್ಯೆ 6 (ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದ ಜನರು)

ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮನೆಯಲ್ಲಿ ಪೂರ್ಣಗೊಳಿಸಬಹುದು. ಸಹೋದರರೊಂದಿಗೆ ಯಾವುದೋ ವಿಚಾರದಲ್ಲಿ ವಾಗ್ವಾದ ಉಂಟಾಗಬಹುದು. ಅನುಭವಿ ವ್ಯಕ್ತಿಯನ್ನು ಸಂಪರ್ಕಿಸುವಿರಿ

ಸಂಖ್ಯೆ 7 (ಯಾವುದೇ ತಿಂಗಳ 7, 16 ಮತ್ತು 25 ರಂದು ಜನಿಸಿದ ಜನರು)

ನಿಮ್ಮ ಆಯ್ಕೆಯ ಚಟುವಟಿಕೆಗಳಿಗೆ ಸಮಯವನ್ನು ವಿನಿಯೋಗಿಸಲು ನಿಮಗೆ ಸಾಧ್ಯವಾಗುತ್ತದೆ. ಇಂದು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವುದನ್ನು ಮುಂದೂಡಿ ಮತ್ತು ಅದರತ್ತ ಗಮನಹರಿಸಿ.

ಸಂಖ್ಯೆ 8 (ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದ ಜನರು)

ಇಂದು ಕುಟುಂಬದೊಂದಿಗೆ ಕಳೆಯುತ್ತೀರಿ, ವ್ಯಾಪಾರದಲ್ಲಿ ಹೊಸ ಯೋಜನೆಗಳು ಮತ್ತು ಚಟುವಟಿಕೆಗಳ ಮೇಲೆ ಕೇಂದ್ರೀಕರಿಸಿ. ವಿವಾಹೇತರ ಸಂಬಂಧಗಳು ತೊಂದರೆ ಉಂಟುಮಾಡಬಹುದು. ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಬೇಡಿ.

ಸಂಖ್ಯೆ 9 (ಯಾವುದೇ ತಿಂಗಳ 9, 18 ಮತ್ತು 27 ರಂದು ಜನಿಸಿದ ಜನರು)

ನಿಮ್ಮ ಸುತ್ತಲಿನ ಸಕಾರಾತ್ಮಕ ಜನರೊಂದಿಗೆ ಸಂವಹನ ನಡೆಸುವ ಮೂಲಕ ನೀವು ಆರಾಮವಾಗಿರುತ್ತೀರಿ. ವ್ಯಾಪಾರ ಪಾಲುದಾರ ಮತ್ತು ಉದ್ಯೋಗಿಗಳೊಂದಿಗೆ ಸಂಬಂಧ ಕೆಡಲಿದೆ.

ಶನಿ-ರಾಹು ಸಂಯೋಗ; ಈ 3 ರಾಶಿಯವರಿಗೆ ನರಕ ದರ್ಶನ, ಅಕ್ಟೋಬರ್‌ವರೆಗೆ ಜಾಗೃತೆ..!

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ