ದಿನ ಭವಿಷ್ಯ: ಈ ರಾಶಿಯವರು ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡುವ ಕೌಶಲ ಬೆಳೆಸಿಕೊಳ್ಳಿ!

By Suvarna News  |  First Published Apr 19, 2021, 7:09 AM IST

19 ಏಪ್ರಿಲ್ 2021 ಸೋಮವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ


ಮೇಷ: ಪಕ್ಕದ ಮನೆಯವರ ಕಷ್ಟಕ್ಕೆ ನೆರವಾಗುವಿರಿ. ಮಹಿಳೆಯರು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಶುಭ ಫಲ

ವೃಷಭ: ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡುವ ಕೌಶಲ ಬೆಳೆಸಿಕೊಳ್ಳಿ. ನಿಮ್ಮಲ್ಲಿರುವ ಶಕ್ತಿಯ ಅರಿವು ನಿಮಗಾಗಲಿದೆ. ಮಕ್ಕಳಿಗೆ ಶುಭದಿನ.

Latest Videos

undefined

ಮಿಥುನ: ನಿಮ್ಮ ನಡುವಿನ ಗೆಳೆಯರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಕೈಲಾದ ಸಹಾಯ ಮಾಡಿ. ಮತ್ತೊಬ್ಬರನ್ನು ಹಗುರವಾಗಿ ಕಾಣದಿರಿ.

ಕಟಕ: ಧನಾಗಮನವಾಗಲಿದೆ. ಬಾಕಿ ಉಳಿದಿರುವ ಕೆಲಸಗಳು ಪೂರ್ಣವಾಗಲಿವೆ. ಅನಾವಶ್ಯಕ ವಿಚಾರಗಳ ಬಗ್ಗೆ ಹೆಚ್ಚು ಗಮನ ನೀಡಬೇಡಿ.

ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

 

ಸಿಂಹ - ಆರೋಗ್ಯದಲ್ಲಿ ವ್ಯತ್ಯಾಸ, ಸಂಗಾತಿಯಿಂದ ಸಹಕಾರ, ಆರೋಗ್ಯದಲ್ಲಿ ಏರುಪೇರು, ಶಿವ ಸಹಸ್ರನಾಮ ಪಠಿಸಿ

ಕನ್ಯಾ - ಮಕ್ಕಳಿಂದ ಮನಸ್ಸಿಗೆ ನೋವು, ನಿಮಗೆ ನೀವೇ ಶತ್ರುಗಳಾಗುವ ಸಾಧ್ಯತೆ, ನಾರಾಯಣ ಪ್ರಾರ್ಥನೆ ಮಾಡಿ

ತುಲಾ - ನೀರಿಗೆ ತೊಂದರೆ, ಕೃಷಿಕರಿಗೆ ಅವ್ಯವಸ್ಥೆಯ ದಿನ, ಸಾಧಾರಣ ದಿನವಾಗಿರಲಿದೆ, ಗಂಗಾ ಪ್ರಾರ್ಥನೆ ಮಾಡಿ

ವೃಶ್ಚಿಕ - ಉತ್ಸಾಹ ಶಕ್ತಿ ಕುಂದಲಿದೆ, ಇವತ್ತಿನ ಮಟ್ಟಿಗೆ ಎಚ್ಚರಿಕೆ ಬೇಕು, ಶನಿ-ಚಂದ್ರರ ಪ್ರಾರ್ಥನೆ ಮಾಡಿ

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಧನುಸ್ಸು: ಇಡೀ ದಿನ ಹೆಚ್ಚು ಕ್ರಿಯಾಶೀಲವಾಗಿ ಇರಲಿದ್ದೀರಿ. ತಾಯಿಯ ಸಹಕಾರದಿಂದ ಕೆಲಸದಲ್ಲಿ ಪ್ರಗತಿ ಸಾಧ್ಯವಾಗಲಿದೆ.

ಮಕರ: ಬೆಳಗ್ಗೆಯಿಂದಲೇ ಉತ್ಸಾಹದಿಂದ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಸಣ್ಣ ಪುಟ್ಟ ಸಮಸ್ಯೆಗಳನ್ನು ಹೆಚ್ಚು ಪರಿಗಣಿಸದಿರಿ 

ಕುಂಭ: ಸಂಬಂಧಗಳಲ್ಲಿ ಲಾಭ-ನಷ್ಟದ ಲೆಕ್ಕಾಚಾರ ಹಾಕದಿರಿ. ದಿನ ಪೂರ್ತಿ ಕಾರ್ಯ ಮಗ್ನರಾಗಲಿದ್ದೀರಿ. ಅತಿಯಾದ ಕೋಪ ಬೇಡ.

ಮೀನ: ಮತ್ತೊಬ್ಬರ ಮನಸ್ಸಿಗೆ ನೋವಾಗುತ್ತದೆ ಎನ್ನುವ ಕಾರಣಕ್ಕೆ ಸುಳ್ಳು ಹೇಳುವುದು ಬೇಡ. ನೇರ, ನಿಷ್ಠೂರವಾಗಿ ನಡೆದುಕೊಳ್ಳಿ

click me!