ಬೆಂಗಳೂರು: ಕದ್ದ ಚಿನ್ನದ ಚಿತ್ರದ ವಾಟ್ಸಾಪ್‌ ಡಿಪಿಯಲ್ಲಿ ಹಾಕಿ ಸಿಕ್ಕಿಬಿದ್ದ ಚಾಲಾಕಿ ಕಳ್ಳಿ..!

By Kannadaprabha News  |  First Published Aug 10, 2024, 11:26 AM IST

ಮಾರತಹಳ್ಳಿಯ ಮುನೇಕೊಳಲು ನಿವಾಸಿ ರೇಣುಕಾ ಬಂಧಿತೆ. ಈಕೆಯಿಂದ ಸುಮಾರು 5 ಲಕ್ಷ ಮೌಲ್ಯದ 80 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಮಾರತಹಳ್ಳಿಯ ಅಪಾರ್ಟ್‌ ಮೆಂಟ್ ನಿವಾಸಿ ಬ್ರಿಜೇಶ್ ದಾಮಿ ಎಂಬುವವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. 


ಬೆಂಗಳೂರು(ಆ.10):  ತಾನು ಕೆಲಸ ಮಾಡುವ ಮಾಲೀಕರ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಮಹಿಳೆಯನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.  ಮಾರತಹಳ್ಳಿಯ ಮುನೇಕೊಳಲು ನಿವಾಸಿ ರೇಣುಕಾ (38) ಬಂಧಿತೆ. ಈಕೆ ಯಿಂದ ಸುಮಾರು 5 ಲಕ್ಷ ಮೌಲ್ಯದ 80 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಮಾರತಹಳ್ಳಿಯ ಅಪಾರ್ಟ್‌ ಮೆಂಟ್ ನಿವಾಸಿ ಬ್ರಿಜೇಶ್ ದಾಮಿ ಎಂಬುವವರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಗರಿಬೊಮ್ಮನಹಳ್ಳಿಮೂಲದ ಆರೋಪಿ ರೇಣುಕಾ ಕಳೆದ 2 ವರ್ಷಗಳಿಂದ ಮಾರತ ಹಳ್ಳಿಯ ಬ್ರಿಜೇಶ್ ದಾಮಿ ಎಂಬುವವರ ಮನೆಯಲ್ಲಿ ಕೆಲಸಮಾಡುತ್ತಿದ್ದಳು. ಬ್ರಜೇಶ್ ದಾಮಿ ಅವರ ಅವರ ಪತ್ನಿ ಕಳೆದ ನವೆಂಬರ್ ನಲ್ಲಿ ಚಿನ್ನಾಭರಣಗಳನ್ನು ಬ್ಯಾಗ್‌ವೊಂದಕ್ಕೆ ಹಾಕಿ ಕಬೋರ್ಡ್‌ನಲ್ಲಿ ಇರಿಸಿದ್ದರು. ಮಾರ್ಚ್ 29ರಂದು ಕಬೋರ್ಡ್ ತೆರೆದು ಬ್ಯಾಗ್ ಪರಿಶೀಲನೆ ಮಾಡಿದಾಗ ನಕ್ಸಸ್ ಸೇರಿ 65 ಗ್ರಾಂ ತೂಕದ ಚಿನ್ನಾಭರಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾ ಸೇರಿ ನಾಲ್ವರ ಕೆಲಸಗಾರರ ಮೇಲೆ ಅನುಮಾನಗೊಂಡು ವಿಚಾರಿಸಿದಾಗ ನಾವು ಕಳವು ಮಾಡಿಲ್ಲ ಎಂದು ಹೇಳಿದ್ದಾರೆ. 

Tap to resize

Latest Videos

ಬೆಂಗಳೂರು: ಬರ್ತ್‌ಡೇ ಖುಷಿಯಲ್ಲಿ ಗಾಂಜಾ ಸೇವಿಸಿ ಬೈಕ್‌ನಲ್ಲಿ ವ್ಹೀಲಿಂಗ್‌..!

ಎರಡು ಕಳ್ಳತನ ಪ್ರಕರಣ ಪತ್ತೆ:

ಬಳಿಕ ಪೊಲೀಸರು ರೇಣುಕಾಳನ್ನು ವಶಕ್ಕೆ ಪಡೆದು ಡಿಪಿ ಫೋಟೋದಲ್ಲಿ ಧರಿಸಿದ್ದ ನಕ್ಷೇಸ್ ಬಗ್ಗೆ ವಿಚಾರಣೆ ಮಾಡಿದಾಗ ದಾಮಿ ಅವರ ಮನೆ ಯಲ್ಲಿ ಕಳ್ಳತನ ಮಾಡಿದ್ದಾಗಿ ತಪ್ಪೋಪ್ಪಿಕೊಂಡಿ ದ್ದಾಳೆ. ಅಂತೆಯೆ ಅಭಿಷೇಕ್ ಸಿಂಗ್ ಎಂಬುವರರ ಮನೆಯಲ್ಲಿಯೂ ತಾನೇ ಚಿನ್ನಾಭರಣ ಕಳವು ಮಾಡಿದ್ದಾಗಿ ಬಾಯಿಟ್ಟಿದ್ದಾಳೆ. ಈಕೆ ನೀಡಿದ ಮಾಹಿತಿ ಮೇರೆಗೆ ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ 80 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಬಳಿಕ ಆಕೆಯನ್ನು ಬಂಧಿಸಿ ನ್ಯಾಯಾಂಗ ಒಪ್ಪಿಸಿದ್ದಾರೆ.

ಕೆಲಸದಿಂದ ವಜಾ ಆಗಿದ್ದ ರೇಣುಕಾ

ಮನೆಯಲ್ಲಿ ಚಿನ್ನಾಭರಣ ಕಳ್ಳತನ ವಾದ ಬಳಿಕ ದಾಮಿ 4 ಕೆಲಸಗಾರ ರನ್ನು ಕೆಲಸದಿಂದ ತೆಗೆದಿದ್ದರು. ಇದಾದ ಕೆಲ ತಿಂಗಳ ಬಳಿಕ ರೇಣುಕಾ ನಕ್ಸಸ್ ಧರಿಸಿರುವ ಫೋಟೋವನ್ನು ವಾಟ್ಸಾಪ್ ಡಿಪಿ (ಡಿಸ್‌ಪ್ಲೇ ಫೋಟೋ)ಗೆ ಹಾಕಿಕೊಂಡಿದ್ದಳು. ಇದನ್ನು ಗಮನಿಸಿದ ದಾಮಿಗೆ ರೇಣುಕಾ ಧರಿಸಿದ್ದನಕೇಸ್ ತಮ್ಮ ಪತ್ನಿಯದು ಎಂಬುದು ಗೊತ್ತಾಗಿದೆ. ಬಳಿಕ ಈ ಸಂಬಂಧ ಎಚ್‌ಎಎಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

click me!