ವರ್ಕ್ ಫ್ರಂ ಹೋಂನಲ್ಲಿದ್ದ ಪತ್ನಿ ನಡೆಸುತ್ತಿದ್ದ ಸಂವಹನವನ್ನು ಕದ್ದಾಲಿಕೆ ಮಾಡಿ ಷೇರುಪೇಟೆಯಲ್ಲಿ ಹಣ ತೊಡಗಿಸುವ ಮೂಲಕ ಪತಿ ಮಹಾಶಯನೊಬ್ಬ ಬರೋಬ್ಬರಿ 14 ಕೋಟಿ 96 ಲಕ್ಷ ರು. (1.76 ಮಿಲಿಯನ್ ಡಾಲರ್) ಲಾಭಗಳಿಸಿದ್ದಾನೆ .
ಟೆಕ್ಸಾಸ್ (ಫೆ.24): ವರ್ಕ್ ಫ್ರಂ ಹೋಂನಲ್ಲಿದ್ದ ಪತ್ನಿ ನಡೆಸುತ್ತಿದ್ದ ಸಂವಹನವನ್ನು ಕದ್ದಾಲಿಕೆ ಮಾಡಿ ಷೇರುಪೇಟೆಯಲ್ಲಿ ಹಣ ತೊಡಗಿಸುವ ಮೂಲಕ ಪತಿ ಮಹಾಶಯನೊಬ್ಬ ಬರೋಬ್ಬರಿ 14 ಕೋಟಿ 96 ಲಕ್ಷ ರು. (1.76 ಮಿಲಿಯನ್ ಡಾಲರ್) ಲಾಭಗಳಿಸಿದ್ದಾನೆ ಎಂದು ಬ್ಲೂಮ್‌ಬರ್ಗ್ ಸುದ್ದಿಸಂಸ್ಥೆ ವರದಿ ಮಾಡಿದೆ.
ನಡೆದದ್ದೇನು?: ಪತ್ನಿಯು ಕೆಲಸ ಮಾಡುತ್ತಿದ್ದ ಬಿಪಿ ಕಂಪನಿಯು ಟ್ರಾವೆಲ್ ಸೆಂಟರ್ಸ್ ಕಂಪನಿಯ ಷೇರುಗಳನ್ನು ಖರೀದಿ ಮಾಡಲಿದೆ ಎಂಬುದನ್ನು ಆಕೆಯ ಫೋನ್ ಕದ್ದಾಲಿಕೆಯ ಮೂಲಕ ಮಾಹಿತಿ ಸಂಗ್ರಹಿಸಿ ಟ್ರಾವೆಲ್ ಸೆಂಟರ್ಸ್ ಕಂಪನಿಯಲ್ಲಿ ತಕ್ಷಣ ಪತಿ 46 ಸಾವಿರ ಷೇರುಗಳನ್ನು ಖರೀದಿಸಿದ್ದಾನೆ. ಉಭಯ ಕಂಪನಿಗಳು ಖರೀದಿಯನ್ನು ಬಹಿರಂಗಗೊಳಿಸಿದ ಬಳಿಕ ತಾನು ಖರೀದಿಸಿದ್ದ ಷೇರುಗಳು ಶೇ.71ರಷ್ಟು ಮೌಲ್ಯವರ್ಧನೆಯಾಗಿದ್ದನ್ನು ದುರುಪಯೋಗಪಡಿಸಿಕೊಂಡು ಷೇರು ಖರೀದಿಸಿದ 10 ದಿನಗಳಲ್ಲೇ ಮಾರುವ ಮೂಲಕ ಬರೋಬ್ಬರಿ 15 ಕೋಟಿ ರು. ಲಾಭ ಗಳಿಸಿದ್ದಾನೆ.
ಕಲಬುರಗಿಯಲ್ಲಿ ಅಪ್ರಾಪ್ತರ ಲವ್, ಪ್ರೀತಿ ನಿರಾಕರಿಸಿದ್ದಕ್ಕೆ 10ನೇ ತರಗತಿ ಬಾಲಕಿ ಕತ್ತು ಕೊಯ್ದ 9ನೇ ಕ್ಲಾಸ್ ಹುಡುಗ!
ಬಳಿಕ ತನ್ನ ಪತ್ನಿಗೆ ಈ ವಿಚಾರ ತಿಳಿಸಿದಾಗ ಇಬ್ಬರ ನಡುವೆ ವಾಗ್ವಾದ ನಡೆದು ಆಕೆ ಡಿವೋರ್ಸ್ ನೀಡಿದ್ದಾಳೆ. ಅಲ್ಲದೆ ಅಮೆರಿಕದ ಸೆಕ್ಯುರಿಟಿ ಎಕ್ಸ್‌ಚೇಂಜ್ ಬೋರ್ಡ್ ಕಾನೂನು ಪ್ರಕಾರ ಫೋನ್ ಕದ್ದಾಲಿಕೆ ಮಾಡಿ ಷೇರುಪೇಟೆಯಲ್ಲಿ ವ್ಯವಹರಿಸುವುದು ನಿಯಮಬಾಹಿರವಾದ್ದರಿಂದ ಪತಿಯ ಮೇಲೆ ಪ್ರಕರಣ ದಾಖಲಿಸಿದೆ. ಈಗ ಪತಿಯು ದಂಡದ ಸಮೇತ ತನ್ನ ಲಾಭವನ್ನು ಮರಳಿ ಕಟ್ಟಲು ಒಪ್ಪಿಕೊಂಡಿದ್ದಾನೆ. ಈ ಕುರಿತು ಪತಿಗೆ ಶಿಕ್ಷೆಯ ಪ್ರಮಾಣವನ್ನು ಫೆಡರಲ್ ನ್ಯಾಯಾಲಯವು ಮೇ.17ರಂದು ಪ್ರಕಟಿಸಲಿದೆ.
ಅಮೆರಿಕ ಕಾನೂನಿನಲ್ಲಿ ಇಂತಹ ಅಪರಾಧಕ್ಕೆ ಗರಿಷ್ಠ 5 ವರ್ಷಗಳ ಸೆರೆವಾಸ ಮತ್ತು 2,50,000 ಡಾಲರ್ (₹2,12,50,000) ವರೆಗೆ ದಂಡ ವಿಧಿಸಬಹುದಾಗಿದೆ.
ಮತ್ತೆ ಅನ್ನದಾತ-ಪೊಲೀಸರ ಸಂಘರ್ಷ: ಇನ್ಸ್‌ಪೆಕ್ಟರ್‌ಗೆ ಗಾಯ, ರೈತರ ಸಾವಿನ ಸಂಖ್ಯೆ 4ಕ್ಕೆ ಏರಿಕೆ
ಹೇಗೆ ವಂಚನೆ?: ಪತ್ನಿಯು ವರ್ಕ್ ಫ್ರಮ್ ಹೋಮ್‌ನಲ್ಲಿ ತನ್ನ ಮನೆಯಿಂದ ಕೆಲವೇ ಮೀಟರ್ ದೂರದಲ್ಲಿ ಮತ್ತೊಂದು ಕೊಠಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಗ ಪತಿಯು ತನ್ನ ಪತ್ನಿಯ ಮೊಬೈಲ್ ಸಂಭಾಷಣೆಯನ್ನು ಕದ್ದಾಲಿಕೆ ಮಾಡುವ ಮೂಲಕ ಷೇರು ವ್ಯವಹಾರ ನಡೆಸಿ ಭರ್ಜರಿ ಲಾಭ ಗಳಿಸಿದ್ದಾನೆ.