* ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೀವಂತ ಗುಂಡುಗಳು ಪತ್ತೆ
* ಫರೂಕ್ ಎಂಬುವವರ ಬ್ಯಾಗ್ ನಲ್ಲಿ ಎರಡು ಬುಲೆಟ್
* ಕೆಐಎನಿಂದ ದುಬೈ ವಿಮಾನವನ್ನು ಹತ್ತಲು ಮುಂದಾಗಿದ್ದ ಫಾರೂಕ್
* ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಇವರ ಬ್ಯಾಗ್ ಪರಿಶೀಲನೆ ವೇಳೆ ಗುಂಡುಗಳು ಪತ್ತೆ
ಬೆಂಗಳೂರು(ಅ. 14) ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)(Kempegowda International Airport Bengaluru) ದಲ್ಲಿ ಜೀವಂತ ಗುಂಡುಗಳು ಪತ್ತೆಯಾಗಿವೆ. ಫಾರೂಕ್ ಎಂಬುವವರ ಬ್ಯಾಗ್ ನಲ್ಲಿ ಎರಡು ಬುಲೆಟ್ ಪತ್ತೆಯಾಗಿದೆ. ಬೆಂಗಳೂರಿನಿಂದ(Bengaluru) ದುಬೈ (Dubai) ವಿಮಾನವನ್ನು ಹತ್ತಲು ಫಾರೂಕ್ ಮುಂದಾಗಿದ್ದರು.
ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಬ್ಯಾಗ್ ಪರಿಶೀಲನೆ ವೇಳೆ ಗುಂಡುಗಳು(Bullets) ಪತ್ತೆಯಾಗಿವೆ. ಭದ್ರತಾ ಪಡೆ ಹಾಗೂ ಸಿಐಎಸ್‌ಎಫ್ ಅಧಿಕಾರಿಗಳಿಂದ ಫಾರೂಕ್ ವಿಚಾರಣೆ ನಡೆಸಿದ್ದಾರೆ. ಗನ್ (Gun)ಪರವಾನಗಿಯತನ್ನು ಹೊಂದಿದ್ದ ಫಾರೂಕ್ ಹೊಂದಿದ್ದರು.
undefined
ಮಂಗಳೂರು ವಿಮಾನ ನಿಲ್ದಾಣದ ಸುತ್ತ ಹೈ ಅಲರ್ಟ್.. ಕಾರಣವೇನು?
ಅರ್ಜೆಂಟ್ ನಲ್ಲಿ ಬುಲೆಟ್ ತೆಗೆದೆಡಲು ಮರೆತೆ ಎಂದು ಫಾರೂಕ್ ಹೇಳಿದ್ದಾರೆ. ಸದ್ಯ ಬುಲೆಟ್‌ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಫಾರೂಕ್ ಶಾಸಕ ಎನ್ ಎ ಹ್ಯಾರೀಸ್ (NA Haris)ಸಂಬಂಧಿ ಎನ್ನಲಾಗಿದ್ದು ಪೊಲೀಸರು ಮಾಹಿತಿ ಕಲೆಹಾಕಿಕೊಂಡಿದ್ದಾರೆ.
70 ವರ್ಷದ ಫಾರೂಕ್ ಅವರು 9.30ರ ಸಮಯದ ದುಬೈ ವಿಮಾನದಲ್ಲಿ ಪ್ರಯಾಣಿಸಲು ತೆರಳಿದ್ದರು. ಅಧಿಕಾರಿಗಳ ತಪಾಸಣೆ ವೇಳೆ ಅವರ ಕ್ಯಾಬಿನ್ ಬ್ಯಾಗ್‌ನಲ್ಲಿ ಎರಡು ಜೀವಂತ ಬುಲೆಟ್‌ಗಳು ಪತ್ತೆಯಾಗಿದ್ದವು. ಕೂಡಲೇ ಅದನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಗಮನಕ್ಕೆ ತರಲಾಯಿತು.
ಈ ಘಟನೆಯಿಂದಾಗಿ ವಿಮಾನ ನಿಲ್ದಾಣದಲ್ಲಿ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ಹಿಂದೆ ಮಂಗಳೂರು ವಿಮಾನ ನಿಲ್ದಾಣದ ಸುತ್ತ ಪ್ರದೇಶಕ್ಕೆ ಆತಂಕ ಇದೆ ಎಂದು ಗುಪ್ತಚರ ದಳ ಮಾಹಿತಿ ನೀಡಿತ್ತು.