ಬೆಂಗಳೂರು: ವಕೀಲನ ಕಿಡ್ನಾಪ್‌ ಮಾಡಿ ಸುಲಿಗೆ, ಆಟೋ ಚಾಲಕ ಸೇರಿ ಇಬ್ಬರ ಬಂಧನ

By Kannadaprabha News  |  First Published Jul 1, 2023, 12:16 PM IST

ವಕೀಲ ಅಶೋಕ್‌ ಎಂಬುವವರನ್ನು ಆಟೋ ರಿಕ್ಷಾದಲ್ಲಿ ಅಪಹರಿಸಿ ಬಳಿಕ 20 ಸಾವಿರ ಸುಲಿಗೆ ಮಾಡಿ ಬಿಟ್ಟು ಕಳುಹಿಸಿದ್ದ ಐವರು ದುಷ್ಕರ್ಮಿಗಳು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡ ಇನ್ನುಳಿದ ಮೂವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ ಪೊಲೀಸರು. 


ಬೆಂಗಳೂರು(ಜು.01):  ಇತ್ತೀಚೆಗೆ ವಕೀಲರೊಬ್ಬರನ್ನು ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿ ಆಟೋದೊಳಗೆ ಎಳೆದುಕೊಂಡು ಅಪಹರಿಸಿ ಬಳಿಕ ಬೆದರಿಸಿ ಮೊಬೈಲ್‌, ಪರ್ಸ್‌, ಹಣ ಸುಲಿಗೆ ಮಾಡಿದ್ದ ಇಬ್ಬರು ಸುಲಿಗೆಕೋರರನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗಿರಿನಗರದ ಆಟೋ ಚಾಲಕ ಯಶವಂತ(23) ಮತ್ತು ನಂದೀಶ್‌(24) ಬಂಧಿತರು. ಜೂ.19ರಂದು ಮುಂಜಾನೆ 2ಕ್ಕೆ ರಿಂಗ್‌ ರಸ್ತೆಯ ಪಿಇಎಸ್‌ ಕಾಲೇಜು ಕಡೆಯಿಂದ ನಾಗೇಂದ್ರ ಬ್ಲಾಕ್‌ಗೆ ನಡೆದು ಹೋಗುತ್ತಿದ್ದ ವಕೀಲ ಅಶೋಕ್‌ ಎಂಬುವವರನ್ನು ಐವರು ದುಷ್ಕರ್ಮಿಗಳು ಆಟೋ ರಿಕ್ಷಾದಲ್ಲಿ ಅಪಹರಿಸಿ ಬಳಿಕ 20 ಸಾವಿರ ಸುಲಿಗೆ ಮಾಡಿ ಬಿಟ್ಟು ಕಳುಹಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮೂವರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

ಉದ್ಯಮಿ ಅಪಹರಣ: ಕೆಲವೇ ಗಂಟೆಗಳಲ್ಲಿ ಆರೋಪಿಗಳ ಬಂಧನ

ಸಿಸಿಟಿವಿ ನೀಡಿದ ಸುಳಿವು:

ಈ ಸಂಬಂಧ ಅಶೋಕ್‌ ಅವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು, ಘಟನಾ ಸ್ಥಳ ಹಾಗೂ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಆಟೋರಿಕ್ಷಾದ ಸುಳಿವು ಸಿಕ್ಕಿದೆ. ಈ ಆಟೋರಿಕ್ಷಾದ ನೋಂದಣಿ ಸಂಖ್ಯೆ ಜಾಡು ಹಿಡಿದು ಮೊದಲಿಗೆ ಆಟೋ ಚಾಲಕ ಯಶವಂತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಉಳಿದ ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ಬಳಿಕ ಆರೋಪಿ ನಂದೀಶ್‌ನನ್ನು ಬಂಧಿಸಲಾಗಿದೆ. ಇನ್ನೂ ಮೂವರು ತಲೆಮರೆಸಿಕೊಂಡಿದ್ದು, ಶೀಘ್ರದಲ್ಲೇ ಅವರನ್ನೂ ಬಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಳಾಸ ಕೇಳುವ ನೆಪದಲ್ಲಿ ಕಿಡ್ನಾಪ್‌

ನಾಗೇಂದ್ರ ಬ್ಲಾಕ್‌ ನಿವಾಸಿ ವಕೀಲ ಅಶೋಕ್‌ ಅವರು ಹಾಸನದ ಶಾಂತಿಗ್ರಾಮಕ್ಕೆ ತೆರಳಿದ್ದರು. ಜೂ.19ರ ಮುಂಜಾನೆ ನಗರಕ್ಕೆ ವಾಪಾಸಾಗಿದ್ದು, ವಾಹನವೊಂದರಲ್ಲಿ ಮೆಜೆಸ್ಟಿಕ್‌ನ ಬಸ್‌ ನಿಲ್ದಾಣದಿಂದ ರಿಂಗ್‌ ರಸ್ತೆಯ ಪಿಇಎಸ್‌ ಕಾಲೇಜುವರೆಗೆ ಡ್ರಾಪ್‌ ಪಡೆದು ನಡೆದುಕೊಂಡು ಮನೆಗೆ ಹೋಗುತ್ತಿದ್ದರು. ಈ ವೇಳೆ ಐವರು ದುಷ್ಕರ್ಮಿಗಳು ಆಟೋರಿಕ್ಷಾದಲ್ಲಿ ಬಂದು ವಿಳಾಸ ಕೇಳುಪ ನೆಪದಲ್ಲಿ ಅಶೋಕ್‌ ಅವರನ್ನು ಮಾತನಾಡಿಸಿ, ಏಕಾಏಕಿ ಅವರನ್ನು ಆಟೋರಿಕ್ಷಾದೊಳಗೆ ಎಳೆದುಕೊಂಡಿದ್ದಾರೆ.

ಬಳಿಕ ನೈಸ್‌ ರಸ್ತೆ ಮುಖಾಂತರ ಕನಕಪುರ ರಸ್ತೆಗೆ ಕರೆದೊಯ್ದು ಬೆದರಿಸಿ ಮೊಬೈಲ್‌, ಪರ್ಸ್‌, 200 ನಗದು ಕಿತ್ತುಕೊಂಡಿದ್ದಾರೆ. ಬಳಿಕ ಅಶೋಕ್‌ ಅವರಿಂದ ಸ್ನೇಹಿತರಿಗೆ ಕರೆ ಮಾಡಿಸಿ .20 ಸಾವಿರವನ್ನು ಯುಪಿಐ ಮೂಲಕ ಖಾತೆಗೆ ಹಾಕಿಸಿಕೊಂಡಿದ್ದಾರೆ. ನಂತರ ಎಟಿಎಂ ಸೆಂಟರ್‌ಗೆ ಕರೆದೊಯ್ದು ಆ ಹಣವನ್ನು ಡ್ರಾ ಮಾಡಿಸಿಕೊಂಡಿದ್ದಾರೆ. ಬಳಿಕ ಅಶೋಕ್‌ ಅವರನ್ನು ಕನಕಪುರ ರಸ್ತೆಯ ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮದ ಬಳಿ ಬಿಟ್ಟು ಪರಾರಿಯಾಗಿದ್ದರು.

click me!