ಬೆಳಗಾವಿ: ಮಹಿಳೆ ಮೇಲೆ ಹಲ್ಲೆ ಪ್ರಕರಣಕ್ಕೆ ತಿರುವು..!

By Kannadaprabha News  |  First Published Jan 4, 2024, 2:00 AM IST

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗ್ರಾಮದಲ್ಲಿ ಹೀನಾಯ ಕೃತ್ಯ ಎಸಗಿದ್ದಾರೆ ಎಂದು ನೊಂದ ಮಹಿಳೆ ಆರೋಪ ಮಾಡಿದ್ದು ಶುದ್ದ ಸುಳ್ಳು ಎಂದು ಗ್ರಾಮಸ್ಥರು ಮತ್ತು ಪಂಚಾಯತಿಯ ಸದಸ್ಯರು ಮಹಿಳೆಯ ವಿರುದ್ಧ ಆರೋಪ ಮಾಡುತ್ತಿದ್ದಾರೆ. 


ಬೆಳಗಾವಿ(ಜ.04):  ಬೈಲಹೊಂಗಲ ತಾಲೂಕಿನ ಗ್ರಾಮವೊಂದರಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಬುಧವಾರ ಗ್ರಾಮಕ್ಕೆ ತೆರಳಿ ಪೊಲೀಸರು ಪಂಚನಾಮೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಮಹಿಳೆ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದು, ಪೊಲೀಸರೇ ಅಕ್ಷರಶಃ ಕಂಗಾಲಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗ್ರಾಮದಲ್ಲಿ ಹೀನಾಯ ಕೃತ್ಯ ಎಸಗಿದ್ದಾರೆ ಎಂದು ನೊಂದ ಮಹಿಳೆ ಆರೋಪ ಮಾಡಿದ್ದು ಶುದ್ದ ಸುಳ್ಳು ಎಂದು ಗ್ರಾಮಸ್ಥರು ಮತ್ತು ಪಂಚಾಯತಿಯ ಸದಸ್ಯರು ಮಹಿಳೆಯ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಜಮೀನಿನ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಅರೆಬೆತ್ತಲೆಗೊಳಿಸಿದ್ದಾರೆ ಎಂದು ನೊಂದ ಮಹಿಳೆಯಿಂದ ಆರೋಪ ಈ ಆರೋಪವನ್ನು ಬೆನ್ನತ್ತಿದ ಪೊಲೀಸ್ ಇಲಾಖೆ ಸಂತ್ರಸ್ತ ಮಹಿಳೆಯನ್ನು ಗ್ರಾಮಕ್ಕೆ ಕರೆತಂದು ಸ್ಥಳ ಪಂಚನಾಮೆ ನಡೆಸಿದರು. ಈ ವೇಳೆ ಬಹುತೇಕ ಗ್ರಾಮಸ್ಥರು ಮಹಿಳೆಯ ವಿರುದ್ಧವೇ ಆರೋಪ ಮಾಡಿದ್ದರಿಂದ ಪೊಲೀಸರು ಕಂಗಾಲಾಗಿದ್ದಾರೆ. ಅಲ್ಲದೇ ಮಹಿಳೆಗೆ ಪೊಲೀಸರು ಬೀಗಿ ಭದ್ರತೆಯಲ್ಲೇ ಸ್ಥಳ ಮಹಜರು ಮಾಡಿದ್ದಾರೆ.

Tap to resize

Latest Videos

ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ: ಸಾರ್ವಜನಿಕವಾಗಿ ಬಟ್ಟೆ ಹರಿದು ಮಹಿಳೆ ಮೇಲೆ ಹಲ್ಲೆ

ಈ ವೇಳೆ ಮಾತನಾಡಿದ ಗ್ರಾಮ ಪಂಚಾಯಿತಿಯ ಸದಸ್ಯರು, ಈ ಪ್ರಕರಣವು ಶುದ್ಧ ಸುಳ್ಳು 20 ವರ್ಷಗಳ ಹಿಂದೆ ಮಾರಾಟ ಮಾಡಿದಂತಹ ಜಮೀನಿನಲ್ಲಿ ಕಟ್ಟಿರುವಂತ ಮನೆಗಳಿಗೆ ಗ್ರಾಮ ಪಂಚಾಯಿತಿಯವರು ರಸ್ತೆಯ, ನೀರು ವಿದ್ಯುತ್ ಸೌಲಭ್ಯ ಹೀಗೆ ಹಲವಾರು ಸೇವೆಗಳನ್ನು ಕಲ್ಪಿಸಲು ಮುಂದಾದಗ ಅವರ ಮೇಲೆ ಸುಳ್ಳು ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಾಳೆ. ಮಹಿಳೆ ಆರೋಪ ಮಾಡಿರುವಂತ ಯಾವುದೇ ಕೃತ್ಯ ಗ್ರಾಮದಲ್ಲಿ ನಡೆದಿಲ್ಲ. ಗ್ರಾಮವು ಮಹಿಳೆಯನ್ನು ಹೆಣ್ಣನ್ನು ಪೂಜಿಸುವಂತ ಗ್ರಾಮ. ಈ ಆರೋಪ ಮಾಡಿರುವಂತ ಮಹಿಳೆ ಕೊಟ್ಟಿರುವಂತಹ ಎಲ್ಲಾ ಆರೋಪವು ಶುದ್ದ ಸುಳ್ಳು ದುಡ್ಡಿನ ಆಸೆಯಿಂದ ಈ ತರ ಆರೋಪ ಮಾಡಿದ್ದಾಳೆ ಎಂದರು .

ಈ ಪ್ರಕರಣದ ಕುರಿತು ಗ್ರಾಮದಲ್ಲಿ ಯಾರನ್ನೇ ಕೇಳಿದರೂ ಕೂಡ ಸ್ಪಷ್ಟ ಮಾಹಿತಿ ಕೊಡಲು ಇಲ್ಲಿನ ಜನ ಸಿದ್ದರಾಗಿದ್ದಾರೆ. ಜಮೀನಿನಲ್ಲಿ ಖರೀದಿ ಮಾಡಿ ಕಟ್ಟಿರುವಂತ ಮಾಲೀಕರನ್ನು ಹೆದರಿಸಿ ಅವರ ಮೇಲೆ ದಬ್ಬಾಳಿಕೆ ಮಾಡಿ ನಿಮ್ಮ ಮೇಲೆ ಕೇಸ್ ಮಾಡಿಸುತ್ತೇನೆ ಎಂದು ಹೇಳಿ ಹೆಚ್ಚಿನ ದುಡ್ಡು ವಸೂಲಿ ಮಾಡುವ ಉದ್ದೇಶದಿಂದ ಈ ರೀತಿ ಬ್ಲ್ಯಾಕ್‌ ಮೇಲ್‌ ಮಾಡಲಾಗಿದೆ. ಇದಕ್ಕೆ ಅಡ್ಡಿಪಡಿಸಿರುವಂಥ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಸಾರ್ವಜನಿಕರ ಮೇಲೆ ಈ ರೀತಿ ಆರೋಪ ಮಾಡಿದ್ದಾಳೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾವುದೇ ರೀತಿಯ ದೂರು ಇಲ್ಲ :

ಮಹಿಳೆಯ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನಡೆಸಿದ ಸಮಯದಲ್ಲಿ ಸದ್ಯ ಆರೋಪ ಮಾಡಿದ ಮಹಿಳೆಯೇ ಬೈಲಹೊಂಗಲ ಠಾಣೆಯ ಪೊಲೀಸರಿಗೆ ಪತ್ರ ಬರೆದುಕೊಟ್ಟಿದ್ದಾಳೆ. 2023 ನ.21 ರಂದು ಮಧ್ಯಾಹ್ನ 1.30 ಗಂಟೆಯ ಸುಮಾರಿಗೆ ನಡೆದ ಗಲಾಟೆಯ ಕುರಿತು ಎರಡು ಕಡೆಯವರು ಬೈಲಹೊಂಗಲ ಠಾಣೆಯ ಮೆಟ್ಟಿಲೇರಿದ್ದಾರೆ. ಈ ವೇಳೆ ದೂರುದಾಳು ಹಾಗೂ ಮತ್ತೊಂದು ಗುಂಪಿನವರು 2023 ನ.24 ರಂದು ಪೊಲೀಸರ ಸಮ್ಮುಖದಲ್ಲೇ, ಈ ಪ್ರಕರಣದ ವಿಚಾರವಾಗಿ ಯಾವುದೇ ರೀತಿಯ ದೂರು ಇರುವುದಿಲ್ಲ ಮತ್ತು ಯಾವುದೇ ರೀತಿಯ ತಂಟೆ ಮಾಡುವುದಿಲ್ಲ ಎಂದು ಪತ್ರವನ್ನು ಬರೆದುಕೊಟ್ಟಿದ್ದಾರೆ.

click me!