ಸಲಿಂಗಿ ಕಾಟಕ್ಕೆ ಬೇಸತ್ತು ಯುವಕ ಆತ್ಮಹತ್ಯೆ

By Kannadaprabha News  |  First Published Oct 23, 2022, 10:58 AM IST
  • ಸಲಿಂಗ ಕಾಮಕ್ಕೆ ಬಲಿಯಾದ ಯುವಕ
  • ಇತ್ತೀಚೆಗೆ ಕೆಲಗೇರಿ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಯಾಸೀನ್‌
  • ಪವನ ಬ್ಯಾಳಿ ಎಂಬಾತನೊಂದಿಗೆ ಸಲಿಂಗ ಕಾಮ

ಧಾರವಾಡ (ಅ.23) : ಇತ್ತೀಚೆಗೆ ಕೆಲಗೇರಿ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕನ ಸಾವಿಗೆ ಸಲಿಂಗ ಕಾಮವೇ ಕಾರಣ ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ದಾನೂನಗರದ ಮಹಮ್ಮದ್‌ ಯಾಸಿನ್‌ (24) ಆತ್ಮಹತ್ಯೆಗೆ ಶರಣಾದ ಯುವಕ.

ಚಿಕ್ಕಪ್ಪನಿಂದಲೇ ನಾಲ್ಕು ವರ್ಷ ಅತ್ಯಾಚಾರಕ್ಕೊಳಗಾಗಿದ್ದರಂತೆ ಬಿಗ್‌ಬಾಸ್ ಸ್ಪರ್ಧಿ

Latest Videos

undefined

ಕಳೆದ ವಾರ ಈತ ಮನೆಯಿಂದ ನಾಪತ್ತೆಯಾದ ಕಾರಣ ಆತಂಕಗೊಂಡ ಮನೆಯವರು ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಅ. 14ರಂದು ಕೆಲಗೇರಿ ಕೆರೆಯಲ್ಲಿ ಆತನ ಶವ ಪತ್ತೆಯಾಗಿತ್ತು. ಆಟೋ ಓಡಿಸುತ್ತಿದ್ದ ಯಾಸಿನ್‌ ಆತ್ಮಹತ್ಯೆಗೆ ಕಾರಣ ಹುಡುಕಿದಾಗ ಈ ವಿಚಾರ ಬಯಲಾಗಿದೆ. ಆತ್ಮಹತ್ಯೆಗೂ ಮುನ್ನ ಆತ್ಮೀಯರಿಗೆ ಅನೇಕ ವಿಚಾರಗಳ ಬಗ್ಗೆ ಸಂದೇಶ ರವಾನಿಸಿದ್ದಾನೆ. ಅದರಲ್ಲಿ ಪ್ರಮುಖವಾಗಿ ಕೇಳಿ ಬಂದಿದ್ದೇ ಸಲಿಂಗ ಕಾಮಿ ಪವನ ಬ್ಯಾಳಿ ಹೆಸರು.

ಬಡ್ಡಿ ವ್ಯವಹಾರ ಮಾಡುತ್ತಿದ್ದ ಪವನ್‌ ಹಾಗೂ ಯಾಸೀನ್‌ ಸಾಕಷ್ಟುಸಮಯ ಇಬ್ಬರೂ ಜತೆಯಾಗಿ ಕಾಲ ಕಳೆಯುತ್ತಿದ್ದರು. ಕೆಲ ದಿನಗಳ ಬಳಿಕ ಇವರಿಬ್ಬರ ನಡುವೆ ಬೇರೆ ತರಹದ ಗೆಳೆತನ ಶುರುವಾಗಿದೆ. ಅವಿವಾಹಿತರನ್ನೇ ಟಾರ್ಗೆಟ್‌ ಮಾಡುತ್ತಿದ್ದ ಪವನ, ಹಣ ನೀಡಿ ಸಲುಗೆ ಬೆಳೆಸಿಕೊಳ್ಳುತ್ತಿದ್ದ. ಬಳಿಕ ಅವರೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ ಮೊಬೈಲ್‌ನಲ್ಲಿ ಸೆರೆ ಹಿಡಿದು ಖುಷಿ ಪಡುತ್ತಿದ್ದ. ಯಾಸಿನ್‌ ಕೇಳಿದಾಗಲೆಲ್ಲ ಹಣ ನೀಡಿ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಇತ್ತೀಚಿನ ದಿನಗಳಲ್ಲಿ ಬೇರೆ ಮನೆ ಮಾಡಿಕೊಂಡು ನಾವಿಬ್ಬರೂ ಇರೋಣ ಎಂದು ಯಾಸೀನ್‌ಗೆ ಬಲವಂತ ಮಾಡಿದ್ದ. ಇದರಿಂದ ಬೇಸತ್ತು ಮನೆಯವರ ಎದುರು ಪವನ ಬಗ್ಗೆ ಯಾಸೀನ್‌ ಹೇಳಿದ್ದ. ಈ ಕುರಿತು ಯಾಸೀನ್‌ ತಂದೆ ರಫೀಕ್‌ ನೀಡಿರುವ ದೂರಿನ ಆಧಾರದಲ್ಲಿ ಆತ್ಮಹತ್ಯೆಗೆ ಪ್ರಚೋಚನೆ ನೀಡಿದ ಆರೋಪದಡಿ ಉಪನಗರ ಠಾಣೆ ಪೊಲೀಸರು ಪವನ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಸಲಿಂಗಕಾಮಿ ವ್ಯಕ್ತಿಗೆ ಮಂಕಿಪಾಕ್ಸ್, ಕೋವಿಡ್ -19 ಮತ್ತು ಎಚ್ಐವಿ ಎಲ್ಲ ಒಟ್ಟಿಗೆ ಬಂದಿದೆಯಂತೆ..!

ಮೊಬೈಲ್ ಆಸೆ ತೋರಿಸಿ 92 ಸಾವಿರ ರೂ. ವಂಚನೆ

ಮೊಬೈಲ್‌ ಸೇರಿದಂತೆ ವಿವಿಧ ಖರ್ಚುಗಳ ಲೆಕ್ಕದಲ್ಲಿ ಒಟ್ಟು . 92.107 ವರ್ಗಾಯಿಸಿಕೊಂಡು ಹಣವೂ ಕೊಡದೇ ಮೊಬೈಲ್‌ ಕಳುಹಿಸದೇ ವಂಚಿಸಿದ ಪ್ರಕರಣ ಸೈಬರ್‌ ಠಾಣೆಯಲ್ಲಿ ದಾಖಲಾಗಿದೆ. ‘ಇಂಡಿಯನ್‌ ಫ್ಯಾಷನ್‌ 4ಯು’ ಕಂಪನಿ ಹೆಸರೇಳಿಕೊಂಡು ಆಸಾರ ಓಣಿಯ ಮಹ್ಮದ್‌ರಫಿ ಅಮಲಿವಾಲಿ ಅವರ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದ ವ್ಯಕ್ತಿ, ಶರ್ಚ್‌ ಖರೀದಿಸುವಂತೆ ಪುಸಲಾಯಿಸಿದ. ನಂತರ ಐಫೋನ್‌ 13 ಮೊಬೈಲ್‌ ಫೋನ್‌ ಸೆಲೆಕ್ಟ್ ಮಾಡಿಸಿ, ಇದಕ್ಕೆ ಫ್ರಿಜ್‌ ಮತ್ತು ಟಿವಿ ಲಕ್ಕಿ ಡ್ರಾ ಇದೆ ಎಂದು ನಂಬಿಸಿದ. ಇ-ಮೇಲ್‌ ಐಡಿ ಪಡೆದು ಲಿಂಕ್‌ ಕಳುಹಿಸಿ ಓಪನ್‌ ಮಾಡಲು ತಿಳಿಸಿದ. ಲಿಂಕ್‌ ಮೂಲಕ ಮೊಬೈಲ್‌ ಫೋನ್‌ ಇನ್ಶೂರೆನ್ಸ್‌ ಹಾಗೂ ಖರ್ಚುಗಳೆಂದು ಹೇಳಿ, ಒಟ್ಟು . 92,107 ಆನ್‌ಲೈನ್‌ ಮೂಲಕ ವರ್ಗಾಯಿಸಿಕೊಂಡಿದ್ದ. ಆದರೆ, ಮೊಬೈಲ್‌ ಫೋನ್‌ ಕಳಹಿಸದೇ, ಹಣವೂ ಮರಳಿಸದೇ ಮೋಸ ಮಾಡಲಾಗಿದೆ ಎಂದು ದೂರು ದಾಖಲಾಗಿದೆ.

click me!