ಟೋಲ್‌ ಬಳಿ 3 ಪೆಡ್ಲರ್‌ಗಳ ಬಂಧನ: 25 ಲಕ್ಷದ ಡ್ರಗ್ಸ್‌ ವಶ

Kannadaprabha News   | Asianet News
Published : Nov 13, 2020, 07:27 AM IST
ಟೋಲ್‌ ಬಳಿ 3 ಪೆಡ್ಲರ್‌ಗಳ ಬಂಧನ: 25 ಲಕ್ಷದ ಡ್ರಗ್ಸ್‌ ವಶ

ಸಾರಾಂಶ

ಆಂಧ್ರದಿಂದ ಕಾರಿನಲ್ಲಿ ಡ್ರಗ್ಸ್‌ ಸಾಗಾಟದ ವೇಳೆ ಬಂಧನ| ಶ್ರೀಲಂಕಾ ಹಾಗೂ ಮಾಲ್ಡಿವ್ಸ್‌ ದೇಶಗಳಿಂದ ಭದ್ರತಾ ಪಡೆಗಳ ಕಣ್ತಪ್ಪಿಸಿ ಡ್ರಗ್ಸ್‌ನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂಗೆ ಮಾದಕ ವಸ್ತು ಮಾರಾಟ ಜಾಲವು ಪೂರೈಕೆ| 

ಬೆಂಗಳೂರು(ನ.13): ಆಂಧ್ರಪ್ರದೇಶದಿಂದ ನಗರಕ್ಕೆ ಮಾದಕ ವಸ್ತು ಸಾಗಿಸುತ್ತಿದ್ದ ಮೂವರು ಪೆಡ್ಲರ್‌ಗಳು ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳ (ಎನ್‌ಸಿಬಿ)ದ ಬಲೆಗೆ ಗುರುವಾರ ಬಿದ್ದಿದ್ದಾರೆ. ಕೇರಳ ಮೂಲದ ಆರ್‌.ಎಸ್‌.ರಂಜಿತ್‌, ಕೆ.ಕೆ.ಸಾರಂಗ್‌ ಮತ್ತು ಪಿ.ಡಿ.ಅನೇಶ್‌ ಬಂಧಿತರಾಗಿದ್ದು, ಆರೋಪಿಗಳಿಂದ 25 ಲಕ್ಷ ಮೌಲ್ಯದ 3 ಕೆ.ಜಿ. ಹಶಿಶ್‌ ಮತ್ತು ಕೃತ್ಯಕ್ಕೆ ಬಳಸಿದ್ದ ಕಾರು ಜಪ್ತಿಯಾಗಿದೆ.

ಶ್ರೀಲಂಕಾ ಹಾಗೂ ಮಾಲ್ಡಿವ್ಸ್‌ ದೇಶಗಳಿಂದ ಭದ್ರತಾ ಪಡೆಗಳ ಕಣ್ತಪ್ಪಿಸಿ ಡ್ರಗ್ಸ್‌ನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂಗೆ ಮಾದಕ ವಸ್ತು ಮಾರಾಟ ಜಾಲವು ಪೂರೈಸಿದೆ. ಅಲ್ಲಿಂದ ಬೆಂಗಳೂರು ಹಾಗೂ ಕೇರಳಕ್ಕೆ ದಂಧೆಕೋರರು ಸಾಗಿಸುತ್ತಿದ್ದರು. ಮೂರು ದಿನಗಳ ಹಿಂದೆ ವಿಶಾಖಪಟ್ಟಣದಿಂದ ಪೆಡ್ಲರ್‌ಗಳು ಹೊರಟಿರುವ ಖಚಿತ ಮಾಹಿತಿ ಸಿಕ್ಕಿತು. ಅಂತೆಯೇ ಕಾರ್ಯಾಚರಣೆಗಿಳಿದ ತನಿಖಾ ತಂಡವು, ದೇವನಹಳ್ಳಿ ಟೋಲ್‌ಗೇಟ್‌ ಸಮೀಪ ಪೆಡ್ಲರ್‌ಗಳಿದ್ದ ಕಾರನ್ನು ತಡೆದು ಪರಿಶೀಲನೆ ನಡೆಸಿದಾಗ ಹೊರ ನೋಟಕ್ಕೆ ಏನು ಪತ್ತೆಯಾಗಲಿಲ್ಲ. ಶಂಕೆಗೊಂಡು ಚಾಲಕನ ಆಸನವನ್ನು ಕತ್ತರಿಸಿದಾಗ ಡ್ರಗ್ಸ್‌ ಪತ್ತೆಯಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೀಟಿನ ಕೆಳಗೆ ಹ್ಯಾಶ್ ಆಯಿಲ್, ಮಕ್ಕಳ ಆಟಿಕೆಯಲ್ಲಿ ಗಾಂಜಾ... ಬೆಂಗಳೂರಿಂದೆ ಕತೆ

ವಿಮಾನದಲ್ಲಿ ಡ್ರಗ್ಸ್‌ ಜಪ್ತಿ:

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಕ್ಕಳ ಆಟಿಕೆಯಲ್ಲಿ ಬಚ್ಚಿಟ್ಟು ಸಾಗಿಸುವಾಗ 3 ಲಕ್ಷ ರು. ಮೌಲ್ಯದ ಡ್ರಗ್ಸ್‌ ಅನ್ನು ಕಸ್ಟಮ್ಸ್‌ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕೆಐಎನಿಂದ ಅಮೇರಿಕಾಕ್ಕೆ ಸುಳ್ಳು ವಿಳಾಸ ನೀಡಿದ ಮಕ್ಕಳ ಆಟಿಕೆಯಲ್ಲಿ ಡ್ರಗ್ಸ್‌ ಸಾಗಾಣಿಕೆಗೆ ಆರೋಪಿಗಳು ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಅಧಿಕಾರಿಗಳು, ಆಟಿಕೆಗಳನ್ನು ಪರಿಶೀಲಿಸಿದಾಗ 3.68 ಲಕ್ಷ ಮೌಲ್ಯದ 230 ಗ್ರಾಂ ಗಾಂಜಾ ಪತ್ತೆಯಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!