ಬೆಂಗ್ಳೂರಲ್ಲಿ ಎಟಿಎಂನಲ್ಲಿ ಹಣ ಕಳ್ಳತನ: ಮೂವರು ಖತರ್ನಾಕ್‌ ಖದೀಮರ ಹೆಡೆಮುರಿ ಕಟ್ಟಿದ ಪೊಲೀಸರು..!

By Girish GoudarFirst Published Jun 7, 2024, 9:06 PM IST
Highlights

ಎಟಿಎಂನಲ್ಲಿ ಹಣ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾದ ವಿವೇಕನಗರ ಪೊಲೀಸರು 

ಬೆಂಗಳೂರು(ಜೂ.07): ವಿವೇಕನಗರ ಪೊಲೀಸರ ಕಾರ್ಯಾಚರಣೆ ನಡೆಸಿ ಎಟಿಎಂನಲ್ಲಿ ಹಣ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ವಿದ್ಯುತ್ ನಗರದ ಮುರಳಿ ಮೋಹನ್ ಬಿನ್ ರಾಮಾಂಜನೇಯಲು(23), ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ನರಪಾಲಮಂಡಲಮ್ ಗ್ರಾಮದ ಪೋತಾಲು ಸಾಹಿ ತೇಜ ಭಿನ್ ಪೋತಲೂ ವೆಂಕಟೇಶ ಹಾಗೂ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಎಸ್‌ಟಿ ಕಾಲೋನಿ ಇಮಾಂಪುರ ಗ್ರಾಮ ಎರೆ ಕಾಲ ವೆಂಕಟೇಶ ಬಿನ್ ಎರಿಕಾಲ್ ನಾಗಣ್ಣ(28) ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿ ಮುರುಳಿ ಎಟಿಎಂಗಳಿಗೆ ಹಣ ಹಾಕುವ ಸೆಕ್ಯೂರಿಟಿ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದನಂತೆ. 2022 ರಲ್ಲಿ ಮುರುಳಿ ಕೆಲಸ ಬಿಟ್ಟಿದ್ದ, ಸದ್ಯ ಅದೇ ಏಜೆನ್ಸಿಯಲ್ಲಿ ಮತ್ತೋರ್ವ ಅರೋಪಿ ಎರೆ ಕಾಲು ವೆಂಕಟೇಶ ಕೆಲಸ ಮಾಡುತ್ತಿದ್ದಾನೆ. ಒಟ್ಟಿಗೆ ಕೆಲಸ ಮಾಡ್ತಿದ್ದಾಗ ಇಬ್ಬರ ನಡುವೆ ಪರಿಚಯವಾಗಿತ್ತು. 

Latest Videos

ಲೈಂಗಿಕ ಕಿರುಕುಳ ನೀಡಿದ ಆರೋಪ: ಪುರಸಭೆ ಅಧ್ಯಕ್ಷೆ‌ ಪತಿಗೆ ಮಹಿಳೆಯರಿಂದ ಥಳಿತ..!

ಅಲ್ಲದೇ ಇಬ್ಬರೂ ಆಂಧ್ರದ ಅನಂತಪುರ ಜಿಲ್ಲೆಯ ಅಕ್ಕ ಪಕ್ಕದ ಹಳ್ಳಿಯವರು. ಎಟಿಎಂಗೆ ಹಣ ಹಾಕಲು 12 ಸಂಖ್ಯೆಯ ಪಿನ್ ನಂಬರ್ ಕಸ್ಟೋಡಿಯನ್ ಗಳಿಗೆ ನೀಡಲಾಗಿರುತ್ತದೆ. ಇಬ್ಬರು ವ್ಯಕ್ತಿಗಳಿಗೆ ತಲಾ ಆರು ನಂಬರ್ ಪಾಸ್ ವರ್ಡ್ ಕೊಡಲಾಗಿರುತ್ತದೆ. ಒಮ್ಮೆ ಕಸ್ಟೋಡಿಯನ್ ಬರದಿದ್ದಾಗ ಮುರುಳಿ ಮೊದಲ ಪಾಸ್ ವರ್ಡ್ ಪಡೆದಿದ್ದ, ಅದೇ ನಂಬರ್ ಅನ್ನು ಬರೆದಿಟ್ಟುಕೊಂಡಿದ್ದ. ಊರಿಗೆ ಹೋದ ಮುರುಳಿ ಮೈತುಂಬ ಸಾಲ ಮಾಡಿಕೊಂಡಿದ್ದ, ಸಾಲ ತೀರಿಸಲು ಹಣ ಮಾಡೋ ನಿರ್ಧಾರ ಮಾಡಿದ್ದನಂತೆ. 

ಕೊನೆಯ 6 ಪಾಸ್ ವರ್ಡ್ ಎರೆ ಕಾಲ ವೆಂಕಟೇಶ್ ಗೆ ಗೊತ್ತಿರುತ್ತೆ. ಹಾಗಾಗಿ ಮುರುಳಿ ವೆಂಕಟೇಶ್ ನನ್ನ ಸಂಪರ್ಕ ಮಾಡಿದ್ದ. ಆತನಿಗೂ ಹಣದ ಅವಶ್ಯಕತೆ ಇರುತ್ತೆ, ಹಾಗಾಗಿ ವೆಂಕಟೇಶ್ ಸಹ ಪಾಸ್ ವರ್ಡ್ ನೀಡಿದ್ದನಂತೆ. 
ಮುರುಳಿ ಮತ್ತು ಪೋತಾಲು ಸಾಹಿ ತೇಜ ಮೇ.31 ರಂದು ಬೆಂಗಳೂರಿಗೆ ಬಂದಿದ್ದರು. ಎರೆ ಕಾಲ ವೆಂಕಟೇಶ್ ಊರಿನಲ್ಲೇ ಉಳಿದುಕೊಂಡಿದ್ದ. ಮಧ್ಯರಾತ್ರಿ ಎಟಿಎಂಗೆ ತೆರಳಿ ಪಾಸ್ ವರ್ಡ್ ಬಳಸಿ ಹಣ ಕಳ್ಳತನ ಮಾಡಿದ್ದರು. ಬಾಕ್ಸ್‌ನಲ್ಲಿದ್ದ 20 ಲಕ್ಷ ಹಣ ಕದ್ದು ಪರಾರಿಯಾಗಿದ್ದರು. ಸದ್ಯ ಆರೋಪಿಗಳನ್ನ ವಿವೇಕನಗರ ಪೊಲೀಸರು ಬಂಧಿಸಿದ್ದಾರೆ. 

click me!