ಉತ್ತರಕನ್ನಡ: ದಾಂಡೇಲಿಯಲ್ಲಿ ಮನೆ ಕಳ್ಳತನ ಕೇಸ್‌, ಮೂವರ ಬಂಧನ

By Girish GoudarFirst Published Jun 9, 2024, 10:47 PM IST
Highlights

ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ವನಶ್ರೀ ನಗರದಲ್ಲಿ ಮನೆ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ದಾಂಡೇಲಿಯ ನಗರಠಾಣಾ ಪೊಲೀಸರು ಬಂಧಿಸಿದ್ದಾರೆ. 

ಉತ್ತರಕನ್ನಡ(ಜೂ.09):  ಜಿಲ್ಲೆಯ ದಾಂಡೇಲಿಯ ವನಶ್ರೀ ನಗರದಲ್ಲಿ ಮನೆ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ದಾಂಡೇಲಿಯ ನಗರಠಾಣಾ ಪೊಲೀಸರು ಬಂಧಿಸಿದ್ದಾರೆ. ದಾಂಡೇಲಿ ಮಾರುತಿ ನಗರದ ನಿವಾಸಿಗಳಾದ ಅಶೋಕ ಗುರವ, ಫೈರೋಜ್ ಅಬ್ದುಲ್ ಸತ್ತಾರ್ ದೌಲತ್ತಿ ಹಾಗೂ ಗಾಂಧಿನಗರದ ನಿವಾಸಿ ಮೈಕಲ್ ಬನ್ನಿ ಅಪ್ಪು ಕಕ್ಕೇರಿ ಬಂಧಿತ ಆರೋಪಿಗಳಾಗಿದ್ದಾರೆ. 

ಬಂಧಿತ ಆರೋಪಿಗಳಿಂದ ಕಳ್ಳತನ ಮಾಡಿದ ಬಂಗಾರದ ಉಂಗುರ -2, ಬೆಳ್ಳಿಯ ಕಾಲು ಚೈನ್ 6 ಜೊತೆ, ಬೆಳ್ಳಿಯ ಕೈಬಳೆ 4, 3 ವಾಚ್, ಬೆಳ್ಳಿಯ ದೀಪ 1, ಬೆಳ್ಳಿಯ ಸಣ್ಣ ಡಬ್ಬ 1 ಮತ್ತು 3,650ರೂ. ನಗದು ಹಾಗೂ ಈ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಳ್ಳಲಾಗಿದೆ. 

Latest Videos

Bengaluru: ಕಿಟಕಿಯ ಗ್ರಿಲ್‌ ಕತ್ತರಿಸಿ ಮನೆ ಕಳ್ಳತನ ಮಾಡುತ್ತಿದ್ದವರ ಬಂಧನ!

ವನಶ್ರೀ ನಗರದ ಶಂಶುನ್ನಿಸಾ ಅಬ್ದುಲ್ ಮುತಲಿಬ್ ಶೇಖ್ ಅವರ ಮನೆಯಲ್ಲಿ ಕಳ್ಳತನವಾದ ಬಗ್ಗೆ ಮೇ. 26ರಂದು ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಸಿಪಿಐ ಭೀಮಣ್ಣ ಎಂ. ಸೂರಿ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. 

ಪಿಎಸ್ಐ ಗಳಾದ ಐ.ಆರ್.ಗಡ್ಡೆಕರ್ ಮತ್ತು ರವೀಂದ್ರ ಬಿರಾದರ್, ಎಎಸ್ಐಗಳಾದ ಬಸವರಾಜ ಒಕ್ಕುಂದ, ನಾರಾಯಣ ರಾಥೋಡ್ ಹಾಗೂ ಸಿಬ್ಬಂದಿ ತಂಡದಲ್ಲಿದ್ದರು. ಪ್ರಕರಣದ‌ ತನಿಖೆ ನಡೆಸಿ ಕೊನೆಗೂ ಆರೋಪಿಗಳ ಹೆಡೆಮುರಿ ಕಟ್ಟಲು ಯಶಸ್ವಿಯಾಗಿದ್ದಾರೆ ಪೊಲೀಸರು. 

click me!