ಎಸ್ಪಿ ನಾರಾಯಣ್ ಮಾರ್ಗದರ್ಶನದಲ್ಲಿ ಸಿಇಎನ್ ಪೊಲೀಸ್ ಇನ್‌ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಿರುವ ಪೊಲೀಸರು ಗಾಂಜಾ ಪೆಡ್ಲರ್‌ಗಳ ಬೆನ್ನಟ್ಟಿ ನೆರೆ ರಾಜ್ಯಕ್ಕೆ ತೆರಳಿದ ಕೋಲಾರದ ಸಿಇಎನ್ ಪೊಲೀಸರು ಗಾಂಜಾ ಬೆಳೆದ ಒಡಿಶಾ ಮೂಲದ ಮೂವರ ಬಂಧಿಸಿದ್ದಾರೆ.
ಕೋಲಾರ(ನ.16): ಪೌಲ್ಟ್ರಿ ಫಾರಂ ಆವರಣದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಒರಿಸ್ಸಾ ಮೂಲದ ಮೂವರು ಕಾರ್ಮಿಕರನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಮುಳಬಾಗಿಲು ತಾಲೂಕಿನ ಗಡ್ಡಂ ಚಿನ್ನೇಪಲ್ಲಿ ಗ್ರಾಮದ ಸಮೀಪ ಬಾಲಾಜಿ ಎಂಬುವರಿಗೆ ಸೇರಿದ ಜಮೀನನಲ್ಲಿರುವ ಸುಗುಣ ಪೌಲ್ಟ್ರಿ ಫಾರಂನ ಆವರಣದಲ್ಲಿ ೫೦ ಸಾವಿರ ರು. ಬೆಲೆಬಾಳುವ ಗಾಂಜಾ ಗಿಡಗಳು ಪತ್ತೆ ಮಾಡಿದ್ದಾರೆ.
ಬೀದರ್: ಯನಗುಂದಾ ಗ್ರಾಮದಲ್ಲಿ ಹಸಿ ಗಾಂಜಾ ಜಪ್ತಿ, ಇಬ್ಬರ ಬಂಧನ
ಎಸ್ಪಿ ನಾರಾಯಣ್ ಮಾರ್ಗದರ್ಶನದಲ್ಲಿ ಸಿಇಎನ್ ಪೊಲೀಸ್ ಇನ್‌ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ದಾಳಿ ನಡೆಸಿರುವ ಪೊಲೀಸರು ಗಾಂಜಾ ಪೆಡ್ಲರ್‌ಗಳ ಬೆನ್ನಟ್ಟಿ ನೆರೆ ರಾಜ್ಯಕ್ಕೆ ತೆರಳಿದ ಕೋಲಾರದ ಸಿಇಎನ್ ಪೊಲೀಸರು ಗಾಂಜಾ ಬೆಳೆದ ಒಡಿಶಾ ಮೂಲದ ಮೂವರ ಬಂಧನದ ನಂತರ ಪ್ರಕರಣ ಜಾಡು ಹಿಡಿಯಲು ಒಡಿಶಾ ಹಾಗೂ ಆಂಧ್ರದ ವಿಶಾಖಪಟ್ಟಣಂ ಸೇರಿದಂತೆ ಹಲವು ಕಡೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.