Bengaluru Crime: ಸ್ನೇಹಿತರ ಬೈಕ್‌ ಪಡೆದು ಮೊಬೈಲ್‌ ದೋಚುತ್ತಿದ್ದ ಬಾಲ್ಯದ ಗೆಳೆಯರು!

By Girish GoudarFirst Published May 17, 2022, 8:43 AM IST
Highlights

*   ಮೋಜು ಮಸ್ತಿಗಾಗಿ ಕೃತ್ಯ
*  ಜೈಲಿನಿಂದ ಹೊರಬಂದ ಬಳಿಕವೂ ಕಳ್ಳತನ
*  ಸ್ನೇಹಿತರ ಬೈಕ್‌ ಪಡೆದು ಕೃತ್ಯ 
 

ಬೆಂಗಳೂರು(ಮೇ.17):  ಸ್ನೇಹಿತರ ದ್ವಿಚಕ್ರ ವಾಹನ ಬಳಸಿಕೊಂಡು ಸಾರ್ವನಿಕರ ಮೊಬೈಲ್‌(Mobile) ಫೋನ್‌ಗಳನ್ನು ಸುಲಿಗೆ ಮಾಡುತ್ತಿದ್ದ ಮೂವರು ಬಾಲ್ಯದ ಗೆಳೆಯರನ್ನು ಯಲಹಂಕ ಉಪನಗರ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ವಿದ್ಯಾರಣ್ಯಪುರದ ದರ್ಶನ್‌(21), ಜಾಜ್‌ರ್‍(20) ಹಾಗೂ ದಿನೇಶ್‌ ಅಲಿಯಾಸ್‌ ಅಪ್ಪು(23) ಬಂಧಿತರು. ಇವರಿಂದ .1.5 ಲಕ್ಷ ಮೌಲ್ಯದ 9 ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಮಾ.29ರಂದು ನಾಗೇನಹಳ್ಳಿ ರೈಲ್ವೆ ಗೇಟ್‌ ಬಳಿ ಸಂಜೆ ಐದು ಗಂಟೆ ಸುಮಾರಿಗೆ ವಿದ್ಯಾರ್ಥಿನಿಯೊಬ್ಬಳು ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗುವಾಗ, ದ್ವಿಚಕ್ರ ವಾಹನದಲ್ಲಿ ಹಿಂದಿನಿಂದ ಬಂದಿರುವ ಇಬ್ಬರು ಅಪರಿಚಿತರು ಏಕಾಏಕಿ ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು(Accused) ಬಂಧಿಸಲಾಗಿದೆ(Arrest) ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪ್ರಾಪ್ತೆಯ 'ಡಿಜಿಟಲ್ ರೇಪ್', 81 ವರ್ಷದ ವರ್ಣಚಿತ್ರಕಾರ ಅರೆಸ್ಟ್‌!

ಮೂವರು ಆರೋಪಿಗಳು ಬಾಲ್ಯ ಸ್ನೇಹಿತರಾಗಿದ್ದಾರೆ. ಆರೋಪಿ ದರ್ಶನ್‌ನ ತಂದೆ-ತಾಯಿ ಮೃತಪಟ್ಟಿದ್ದಾರೆ. ಹೀಗಾಗಿ ಸ್ನೇಹಿತರ ಜತೆ ಕಳ್ಳತನ ಮಾಡಿಕೊಂಡು ಮೋಜು-ಮಸ್ತಿ ಜೀವನ ನಡೆಸುತ್ತಿದ್ದ. 2019ರಲ್ಲಿ ತನ್ನ ಸ್ನೇಹಿತ ಲಕ್ಷ್ಮಣ ಎಂಬಾತನ ಜತೆ ಸೇರಿಕೊಂಡು ದ್ವಿಚಕ್ರ ವಾಹನ ಕಳವು ಮಾಡಿ ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲು ಸೇರಿದ್ದ. ಬಳಿಕ ಜೈಲಿನಿಂದ ಹೊರಬಂದು ಬಾಲ್ಯ ಸ್ನೇಹಿತರಾದ ಜಾಚ್‌ರ್‍ ಹಾಗೂ ದಿನೇಶ್‌ ಜತೆ ಸೇರಿಕೊಂಡು ಸಾರ್ವಜನಿಕರ ಮೊಬೈಲ್‌ ಸುಲಿಗೆ ಮಾಡುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ನೇಹಿತರ ಬೈಕ್‌ ಪಡೆದು ಕೃತ್ಯ:

ಆರೋಪಿಗಳು ಮೊಬೈಲ್‌ ಸುಲಿಗೆ ಮಾಡಲು ಸ್ನೇಹಿತರ ದ್ವಿಚಕ್ರ ವಾಹನ ಬಳಸುತ್ತಿದ್ದರು. ರಸ್ತೆಗಳಲ್ಲಿ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಹೋಗುವವರನ್ನು ಟಾರ್ಗೆಟ್‌ ಮಾಡಿ ಹಿಂಬಾಲಿಸಿ ಕ್ಷಣ ಮಾತ್ರದಲ್ಲಿ ಮೊಬೈಲ್‌ ಫೋನ್‌ ಕಸಿದುಕೊಂಡು ಪರಾರಿಯಾಗುತ್ತಿದ್ದರು. ಗಿರಾಕಿಗಳನ್ನು ಹಿಡಿದು ಕದ್ದ ಮೊಬೈಲ್‌ ಫೋನ್‌ಗಳನ್ನು ಮಾರಾಟ ಮಾಡಿ ಹಣ ಪಡೆದು ಮೋಜು-ಮಸ್ತಿ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಆರೋಪಿಗಳು ಮೊಬೈಲ್‌ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಯಲಹಂಕ ಉಪನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಒಂದು ಮೊಬೈಲ್‌ ಸುಲಿಗೆ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯಕ್ಕೆ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!