ಎಐ ಬಳಸಿ ದೇಶದ ಮೊದಲ ವಂಚನೆ ಕೇಸ್‌, ಎಡಿಜಿ ಡೀಪ್‌ಫೇಕ್‌ ಮೂಲಕ ವೃದ್ಧನಿಂದ 75 ಸಾವಿರ ಹಣ ವಸೂಲಿ!

By Santosh NaikFirst Published Nov 30, 2023, 4:16 PM IST
Highlights

ಎಐ ಮೂಲಕ ಮುಂದಾಗಬಹುದಾದ ಅಪಾಯಗಳ ಮುನ್ಸೂಚನೆ ಎನ್ನುವಂತೆ, ಎಐ ಬಳಸಿ ದೇಶದ ಮೊಟ್ಟಮೊದಲ ವಂಚನೆ ಕೇಸ್‌ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ವರದಿಯಾಗಿದೆ.

ನವದೆಹಲಿ (ನ.30): ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಡೀಪ್‌ಫೇಕ್ ಮೂಲಕ ವಂಚನೆ ಮಾಡಿರುವ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ. ನಿವೃತ್ತ ಎಡಿಜಿ ಪ್ರೇಮ್ ಪ್ರಕಾಶ್ ಹೆಸರಿನಲ್ಲಿ 74 ವರ್ಷದ ವ್ಯಕ್ತಿಯೊಬ್ಬರಿಗೆ ವಿಡಿಯೋ ಕರೆ ಬಂದಿದೆ. ಆರೋಪಿ ವೃದ್ಧನನ್ನು ಜೈಲಿಗೆ ಕಳುಹಿಸುವುದಾಗಿ ಬೆದರಿಸಿ ಆತನ ಖಾತೆಗೆ 74 ಸಾವಿರ ರೂಪಾಯಿ ಹಾಕಿಸಿಕೊಂಡಿರುವ ಘಟನೆ ನಡಡೆದಿದೆ. ಸಂತ್ರಸ್ಥನಾಗಿರುವ ಅರವಿಂದ್‌ ಶರ್ಮ ಅವರನ್ನು ಆರಂಭದಲ್ಲಿ ಕ್ರಿಮಿನಲ್‌ಗಳು ಫೇಸ್‌ಬುಕ್‌ ವಿಡಿಯೊ ಮೂಲಕ ಸಂಪರ್ಕಿಸಿದ್ದರು. ಈ ವೇಳೆ ಅವರ ಖಾಸಗಿ ವಿಡಿಯೋವನ್ನು ರೆಕಾರ್ಡ್‌ ಮಾಡಿಕೊಳ್ಳಲಾಗಿತ್ತು. ಆ ಬಳಿಕ ತಕ್ಷಣವೇ ಕಡಿತಗೊಳಿಸಿದ ಕ್ರಿಮಿನಲ್‌ಗಳು, ಬಳಿಕ ನಿವೃತ್ತ ಎಡಿಜಿ ಪ್ರೇಮ್‌ ಪ್ರಕಾಶ್‌ ಅವರ ರೂಪದಲ್ಲಿ ವಾಟ್ಸ್‌ಆಪ್‌ ಕಾಲ್‌ ಸ್ವೀಕರಿಸಿದ್ದರು. ಪ್ರೇಮ್‌ ಪ್ರಕಾಶ್‌ ಅವರು ಪೊಲೀಸ್‌ ಸಮವಸ್ತ್ರ ಧರಿಸಿದ್ದ ರೂಪದಲ್ಲಿ ಡೀಪ್‌ಫೇಕ್‌ ವಿಡಿಯೋ ಮಾಡಿ ಕಾಲ್‌ ಮಾಡಿದ್ದರು. ಐಪಿಎಲ್‌ ಅಧಿಕಾರಿಯ ರೂಪದಲ್ಲಿ ನಕಲಿ ಪೊಲೀಸ್‌ ಅಧಿಕಾರಿ ಮಾತನಾಡಿದ್ದು, ತಮ್ಮ ಹಣಕಾಸಿನ ಬೇಡಿಕೆಗಳನ್ನು ಒಪ್ಪಿಕೊಳ್ಳದೇ ಇದ್ದಲ್ಲಿ ಅರವಿಂದ್ ಶರ್ಮ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿ ಜೈಲಿಗೆ ಅಟ್ಟುವುದಾಗಿ ಬೆದರಿಸಿದ್ದರು.

ತನಿಖೆ ಆರಂಭಿಸಿದ ಪೊಲೀಸರು:  ದುರುದ್ದೇಶಪೂರಿತ ಈ ವಿಡಿಯೋದಿಂದ ಆಗಲಿರುವ ಸಾರ್ವಜನಿಕ ಅವಮಾನ ಹಾಗೂ ಕಾನೂನು ಶಿಕ್ಷೆಗೆ ಹೆದರಿದ ಅರವಿಂದ್‌ ಶರ್ಮ, ಹಲವಾರು ಬಾರಿ ಹಣ ಪಾವತಿ ಮಾಡಿದ್ದಾರೆ. ಒಟ್ಟು 75 ಸಾವಿರ ರೂಪಾಯಿಯನ್ನು ಇವರು ಕಳೆದುಕೊಂಡಿದ್ದಾರೆ.  ಡೀಪ್‌ಫೇಕ್ ತಂತ್ರಜ್ಞಾನದ ಸಾಮರ್ಥ್ಯಗಳನ್ನು ದುರ್ಬಳಕೆ ಮಾಡಿಕೊಂಡು ಸೈಬರ್ ವಂಚನೆ ಹೊಸ ಆಯಾಮವನ್ನು ಪಡೆದುಕೊಂಡಿರುವ ಭಾರತದಲ್ಲಿ ಈ ಕೇಸ್‌ ನಡೆದಿರುವುದು ಇದೇ ಮೊದಲಾಗಿದೆ. ಡೀಪ್‌ಫೇಕ್‌ಗಳು ಡೀಪ್ ಲರ್ನಿಂಗ್ ಅಲ್ಗಾರಿದಮ್‌ಗಳ ಬಳಕೆಯನ್ನು ಒಳಗೊಂಡಿರುತ್ತವೆ-ಅದು ಆಡಿಯೋ, ವಿಡಿಯೋ ಅಥವಾ ಇಮೇಜ್ ಆಗಿರಬಹುದು-ಕಂಟೆಂಟ್ ಅನ್ನು ಡಿಜಿಟಲ್ ಆಗಿ ಮಾರ್ಪಡಿಸಲು ಇದು ಸಾಧ್ಯವಾಗುತ್ತದೆ. ಇದು ನಕಲಿ ಎಂದು ಗುರುತಿಸಲೂ ಕಷ್ಟವಾಗವಂಥ ವಿಡಿಯೋಗಳನ್ನು ಇವರು ಮಾಡಿರುತ್ತಾರೆ.

ಶರ್ಮಾ ಅವರ ಪುತ್ರಿ ಮೋನಿಕಾ ಈ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದರ. ಎಫ್‌ಐಆರ್ ದಾಖಲಾಗಿದ್ದು, ಸೈಬರ್ ಸೆಲ್ ಸೇರಿದಂತೆ ತನಿಖಾ ತಂಡವು ಪ್ರಕರಣವನ್ನು ಪರಿಶೀಲಿಸುತ್ತಿದೆ. ವೀಡಿಯೊಗಳು ಮತ್ತು ಬ್ಯಾಂಕ್ ವಹಿವಾಟುಗಳಂತಹ ವಿವರಗಳು ಪರಿಶೀಲನೆಯಲ್ಲಿವೆ. ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ನ ಮಾತೃ ಸಂಸ್ಥೆಯಾದ ಮೆಟಾ ಸಹಯೋಗದಲ್ಲಿ, ಅಪರಾಧಿಗಳ ಖಾತೆಯನ್ನು ಪತ್ತೆಹಚ್ಚಲು ಪೊಲೀಸರು ಕೆಲಸ ಮಾಡುತ್ತಿದ್ದಾರೆ.

Latest Videos

ಶುಭ್‌ಮನ್‌ ಗಿಲ್‌ ಜೊತೆ ಡೀಪ್‌ಫೇಕ್‌ ಫೋಟೋ, ಮೌನ ಮುರಿದ ಸಾರಾ ತೆಂಡುಲ್ಕರ್‌!

ಈ ಅಪರಾಧದಲ್ಲಿ ಬಳಸಲಾದ ಡೀಪ್‌ಫೇಕ್ ಮಾಜಿ ಎಡಿಜಿ ಪ್ರೇಮ್ ಪ್ರಕಾಶ್ ಅವರನ್ನು ಒಳಗೊಂಡಿದ್ದು, ಅವರ ಮುಖ ಮತ್ತು ಧ್ವನಿಯನ್ನು ಅಪರಾಧ ಮಾಡಲು ಬಳಸಲಾಗಿದೆ. ಘಟನೆಯ ಬಗ್ಗೆ ತಿಳಿದ ಪ್ರಕಾಶ್, ಸೈಬರ್ ಕ್ರೈಮ್ ಸಂತ್ರಸ್ತರಿಗೆ ಇಂತಹ ಘಟನೆಗಳ ಬಗ್ಗೆ ಪೊಲೀಸರಿಗೆ ತಿಳಿಸುವಂತೆ ಒತ್ತಾಯಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ಡೀಪ್‌ಫೇಕ್‌ಗಳು ಮತ್ತು ತಪ್ಪು ಮಾಹಿತಿಗಳನ್ನು ಪರಿಹರಿಸುವ ನಿಯಮಗಳನ್ನು ರೂಪಿಸಲು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರ ಬದ್ಧತೆಗೆ ಈ ಪ್ರಕರಣವು ಹೊಂದಿಕೆಯಾಗುತ್ತದೆ.

ಡೀಪ್‌ಫೇಕ್‌ ತಡೆಗೆ ಶೀಘ್ರದಲ್ಲೇ ಕಠಿಣ ನಿಯಮ: ಕೇಂದ್ರ

ಈ ತಿಂಗಳ ಆರಂಭದಲ್ಲಿ G20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, AI ನ ಋಣಾತ್ಮಕ ಪರಿಣಾಮಗಳನ್ನು ಒತ್ತಿಹೇಳಿದರು ಮತ್ತು ಜಾಗತಿಕ ಸಹಕಾರವನ್ನು ಪ್ರತಿಪಾದಿಸಿದ ಘಟನೆಯು ಡೀಪ್‌ಫೇಕ್ ತಂತ್ರಜ್ಞಾನದ ದುರುಪಯೋಗವನ್ನು ತಡೆಯಲು ನಿಯಂತ್ರಕ ಕ್ರಮಗಳ ತುರ್ತು ಅಗತ್ಯವನ್ನು ಒತ್ತಿಹೇಳುತ್ತದೆ, ವ್ಯಕ್ತಿಗಳಿಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ ಮತ್ತು ಪ್ರತಿಷ್ಠೆಗೆ ಹಾನಿಯುಂಟುಮಾಡುತ್ತದೆ ಎಂದು ಹೇಳಿದ್ದರು.
 

click me!