ಕ್ಷಯರೋಗದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಗುವಿನ ತಂದೆಯೊಂದಿಗೆ ತನ್ನ ಇತರ ಮಕ್ಕಳೊಂದಿಗೆ ತಾಯಿ ಆಸ್ಪತ್ರೆಯಲ್ಲಿದ್ದಾಗ ಈ ದುರ್ಘಟನೆ ನಡೆದಿದೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿಗಳು ಕೂಡ ವಾರ್ಡ್‌ನಲ್ಲಿಲ್ಲದಿರುವುದು ಹಾಗೂ ಕಾವಲುಗಾರ ಕೂಡ ಬೇರೊಂದು ವಾರ್ಡ್ ಬಳಿ ತೆರಳಿದ್ದು ದುರದೃಷ್ಟ.
ಜೈಪುರ (ಮಾರ್ಚ್ 1, 2023): ಆಸ್ಪತ್ರೆಯ ವಾರ್ಡ್‌ನಲ್ಲಿ ತಾಯಿಯ ಪಕ್ಕ ಮಲಗಿದ್ದ ಒಂದು ತಿಂಗಳ ಮಗುವನ್ನು ಬೀದಿ ನಾಯಿಗಳು ಹೊತ್ತೊಯ್ದು ಮಗುವನ್ನು ಕಚ್ಚಿ ಸಾಯಿಸಿರುವ ಹೃದಯವಿದ್ರಾವಕ ಘಟನೆ ಸೋಮವಾರ ರಾತ್ರಿ ರಾಜಸ್ಥಾನದ ಸಿರೋಹಿಯಲ್ಲಿ ನಡೆದಿದೆ. ಬಳಿಕ ಮಗುವಿನ ದೇಹ ಆಸ್ಪತ್ರೆಯ ವಾರ್ಡ್‌ನ ಹೊರಗೆ ಸಿಕ್ಕಿದೆ. ಎರಡು ನಾಯಿಗಳು ಆಸ್ಪತ್ರೆಯ ವಾರ್ಡ್ ಒಳಹೊಕ್ಕಿವೆ. ಈ ಪೈಕಿ ಹಿಂದಿರುಗುವಾಗ ಒಂದು ನಾಯಿ ಮಗುವನ್ನು ಬಾಯಲ್ಲಿ ಕಚ್ಚಿ ಹಿಡಿದುಕೊಂಡು ಬಂದಿರುವುದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಷಯರೋಗದ ಚಿಕಿತ್ಸೆಗಾಗಿ (Treatment) ಆಸ್ಪತ್ರೆಗೆ (Hospital) ದಾಖಲಾಗಿದ್ದ ಮಗುವಿನ ತಂದೆಯೊಂದಿಗೆ (Babys Father) ತನ್ನ ಇತರ ಮಕ್ಕಳೊಂದಿಗೆ ತಾಯಿ ಆಸ್ಪತ್ರೆಯಲ್ಲಿದ್ದಾಗ ಈ ದುರ್ಘಟನೆ ನಡೆದಿದೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿಗಳು ಕೂಡ ವಾರ್ಡ್‌ನಲ್ಲಿಲ್ಲದಿರುವುದು ಹಾಗೂ ಕಾವಲುಗಾರ ಕೂಡ ಬೇರೊಂದು ವಾರ್ಡ್ ಬಳಿ ತೆರಳಿದ್ದು ದುರದೃಷ್ಟ. ಈ ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನು ಓದಿ: ಭಾರತೀಯ ಮೂಲದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಅಸ್ಟ್ರೇಲಿಯಾ ಪೊಲೀಸರು..!
ಇನ್ನು, ಸಿಲಿಕೋಸಿಸ್ ಚಿಕಿತ್ಸೆಗಾಗಿ ಮಗುವಿನ ತಂದೆ ಮಹೇಂದ್ರ ಮೀನಾ (Mahendra Meena) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಸೀತಾರಾಮ್ (Sitaram) ಹೇಳಿದ್ದಾರೆ. ತನ್ನ ಮೂವರು ಮಕ್ಕಳೊಂದಿಗೆ ರೋಗಿಯನ್ನು ಉಪಚರಿಸುತ್ತಿದ್ದ ಮಗುವಿನ ತಾಯಿ ರೇಖಾ ಸಹ ಈ ವೇಳೆ ನಿದ್ರೆಗೆ ಜಾರಿದ್ದರು ಎಂದು ಅವರು ಹೇಳಿದರು. ಘಟನೆಯ ಸಮಯದಲ್ಲಿ ಆಸ್ಪತ್ರೆಯ ಸಿಬ್ಬಂದಿ ಕೂಡ ವಾರ್ಡ್‌ನಲ್ಲಿ ಇರಲಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ. ವೈದ್ಯಕೀಯ ಮಂಡಳಿಯಿಂದ ಮರಣೋತ್ತರ ಪರೀಕ್ಷೆ (Post - mortem) ನಡೆಸಲಾಗಿದ್ದು, ಹೆಚ್ಚಿನ ತನಿಖೆಯ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.
ಈ ಮಧ್ಯೆ, ತನ್ನ ಹೆಂಡತಿ (Wife) ಬಳಿ ಆಸ್ಪತ್ರೆ ಅಧಿಕಾರಿಗಳು ಮತ್ತು ಪೊಲೀಸರು ಒತ್ತಾಯಪೂರ್ವಕವಾಗಿ ಖಾಲಿ ಪೇಪರ್‌ಗಳಿಗೆ ಸಹಿ ಹಾಕಿ ತನ್ನ ಮಗುವಿನ ಅಂತಿಮ ಸಂಸ್ಕಾರವನ್ನು ಮಾಡಿದ್ದಾರೆ. ಈ ಬಗ್ಗೆ ತನಗೆ ತಿಳಿಸಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ನಾಯಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಗು ಸಾವು
‘’ಸೋಮವಾರ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಾರ್ಡ್‌ನೊಳಗೆ ನಾಯಿಗಳು ಬರುತ್ತಿದ್ದವು ಮತ್ತು ನಾನು ಅವುಗಳನ್ನು ಓಡಿಸಿದೆ, ನನ್ನ ಹೆಂಡತಿ ರಾತ್ರಿ 2 ಗಂಟೆಗೆ ಎಚ್ಚರಗೊಂಡು ನಮ್ಮ ಮಗುವನ್ನು ನಾಯಿಗಳು ಕಚ್ಚುತ್ತಿರುವುದನ್ನು ನೋಡಿದರು. ಆದರೆ, ಇಂದು ಆಸ್ಪತ್ರೆಯ ಅಧಿಕಾರಿಗಳು ಮತ್ತು ಪೊಲೀಸರು ಖಾಲಿ ಕಾಗದದ ಮೇಲೆ ನನ್ನ ಹೆಂಡತಿಯ ಸಹಿ ತೆಗೆದುಕೊಂಡಿದ್ದು, ಮತ್ತು ನನಗೆ ತಿಳಿಸದೆ ನನ್ನ ಮಗನ ಅಂತಿಮ ಸಂಸ್ಕಾರವನ್ನು ಮಾಡಲಾಯಿತು. ಕೊನೆಯ ಬಾರಿಗೆ ನನ್ನ ಮಗುವಿನ ಮುಖವನ್ನು ಸಹ ನೋಡಲಾಗಲಿಲ್ಲ" ಎಂದೂ ಮಹೇಂದ್ರ ಮೀನಾ ಹೇಳಿದ್ದಾರೆ.
ಇನ್ನೊಂದೆಡೆ, ಆಸ್ಪತ್ರೆ ಆಡಳಿತ ಕೂಡ ಈ ಘಟನೆ ಬಗ್ಗೆ ತನಿಖೆ ಆರಂಭಿಸಿದೆ.
ಇದನ್ನೂ ಓದಿ: Chikkaballapur News: ನಾಯಿ ಕಡಿತಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಬಾಲಕ ಸಾವು!