ನೀನೇ ಬ್ಯೂಟಿ, ನಿನಗ್ಯಾಕೆ ಮತ್ತೆ ಬ್ಯೂಟಿ ಪಾರ್ಲರ್. ಬ್ಯೂಟಿ ಪಾರ್ಲರ್‌ಗೆಲ್ಲಾ ಹೋಗೋದು ಬೇಡ ಎಂದು ಗಂಡ ಹೇಳಿದ್ದೇ ತಪ್ಪಾಗಿದೆ. ಇದರಿಂದ ಬೇಸರಗೊಂಡ ಹೆಂಡತಿ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾಳೆ.
ಇಂದೋರ್ (ಏ.29): ನಿನ್ನಂಥ ಬ್ಯೂಟಿ ಮತ್ತೊಬ್ಬಳಿಲ್ಲ. ಮತ್ಯಾಕೆ ನಿನಗೆ ಬ್ಯೂಟಿ ಪಾರ್ಲರ್. ಬ್ಯೂಟಿ ಪಾರ್ಲರ್‌ಗೆಲ್ಲಾ ಹೋಗಿ ಮುಖ ಹಾಳುಮಾಡಿಕೊಳ್ಳೋದು ಬೇಡ ಎಂದು ಗಂಡ ಹೇಳಿದ್ದೇ ತಪ್ಪಾಗಿ ಹೋಗಿದೆ. ಇದರಿಂದ ಬೇಸರಗೊಂಡ ಹೆಂಡತಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಬ್ಯೂಟಿ ಪಾರ್ಲರ್‌ಗೆ ಹೋಗೋದು ಬೇಡ ಎಂದು ಹೇಳಿದ್ದ ಕಾರಣಕ್ಕೆ ಕೋಪಗೊಂಡಿದ್ದ ಪತ್ನಿ ಕೋಣೆಗೆ ಹೋಗಿ ಫ್ಯಾನ್‌ಗೆ ನೇಣು ಹಾಕಿಕೊಂಡು ಸಾವು ಕಂಡಿದ್ದಾಳೆ. ಘಟನೆ ಬಗ್ಗೆ ತಿಳಿದ ಬೆನ್ನಲ್ಲಿಯೇ ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಶವವನ್ನು ಕಸ್ಟಡಿಗೆ ತೆಗೆದುಕೊಂಡಿದ್ದು ಮಾತ್ರವಲ್ಲದೆ, ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಟ್ಟಿದ್ದಾರೆ. ಈ ಕುರಿತಾಗಿ ಹೆಚ್ಚಿನ ತನಿಖೆಯನ್ನೂ ಪೊಲೀಸರು ಆರಂಭಿಸಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಮಹಿಳೆಯ ಸಂಬಂಧಿಕರು ಶವದ ಮುಂದೆ ಕಣ್ಣೀರಿಡಲು ಆರಂಭಿಸಿದ್ದಾರೆ. ಏರೋಡ್ರೋಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮೃತ ಮಹಿಳೆ ಇಂದೋರ್ ನಿವಾಸಿ ಬಲರಾಮ್ ಅವರನ್ನು 15 ವರ್ಷಗಳ ಹಿಂದೆ ಮದುವೆಯಾಗಿದ್ದರು ಎಂದು ಹೇಳಲಾಗಿದೆ. ಆರಂಭದಲ್ಲಿ ಖುಷಿಖುಷಿಯಾಗಿದ್ದ ಅವರು, ನಂತರ ಪ್ರತಿ ದಿನ ಜಗಳವಾಡುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಮೃತರ ಪತಿ ಮನೆಯಲ್ಲಿದ್ದುಕೊಂಡು ಟೈಲರಿಂಗ್ ಕೆಲಸ ಮಾಡುತ್ತಾರೆ. ಕೊಠಡಿಯ ಗ್ರಿಲ್ ಮೂಲಕ ಇಣುಕಿ ನೋಡಿದಾಗ ಅವರು ನೇಣುಗಂಬಕ್ಕೆ ನೇತಾಡುತ್ತಿದ್ದರು ಎಂದು ಬಲರಾಮ್ ಹೇಳಿದ್ದಾರೆ.
ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಪ್ರಾಣ ಕಳೆದುಕೊಂಡ 9 ವಿದ್ಯಾರ್ಥಿಗಳು; ಮತ್ತಿಬ್ಬರಿಂದ ಆತ್ಮಹತ್ಯೆಗೆ ಯತ್ನ
ಮಧ್ಯಾಹ್ನ ಪತ್ನಿ ರೀನಾ ಬ್ಯೂಟಿ ಪಾರ್ಲರ್‌ಗೆ ಹೋಗುವ ಬಗ್ಗೆ ತನ್ನೊಂದಿಗೆ ಜಗಳವಾಡಿದ್ದರು ಎಂದು ಬಲರಾಮ್ ಯಾದವ್ ಪೊಲೀಸರಿಗೆ ತಿಳಿಸಿದ್ದಾರೆ. ನಾನು ನಿರಾಕರಿಸಿದ್ದರಿಂದ ಕೋಪಗೊಂಡ ಪತ್ನಿ ನೇಣು ಬಿಗಿದುಕೊಂಡಿದ್ದಾಳೆ. ಪತಿ-ಪತ್ನಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ಕೂಡ ಹೇಳಿದ್ದಾರೆ. ಆದರೆ ಕೇವಲ ಬ್ಯೂಟಿ ಪಾರ್ಲರ್‌ಗೆ ಹೋಗೋದು ಬೇಡ ಎಂದ ಕಾರಣಕ್ಕೆ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎನ್ನುವುದು ಯಾರಿಗೂ ನಂಬಲು ಸಾಧ್ಯವಾಗುತ್ತಿಲ್ಲ.
ಇದೇನ್ ಕಾಲ ಬಂತಪ್ಪಾ... ಸೌತೇಕಾಯಿ ಸಾಲದಲ್ಲಿ ಕಿವಿ ಕಳೆದುಕೊಂಡ ಗ್ರಾಹಕ!
ಪೊಲೀಸರಿಂದ ತನಿಖೆ: ಈ ಘಟನೆ ಮುನ್ನೆಲೆಗೆ ಬಂದ ನಂತರ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಸಣ್ಣ ವಿಚಾರಕ್ಕೆ ಪತ್ನಿ ಹಾಗೂ ಪತ್ನಿ ನಡುವೆ ಜಗಳ ನಡೆಯುತ್ತಿತ್ತು ಎನ್ನುತ್ತಾರೆ ತನಿಖಾಧಿಕಾರಿ ಉಮಾಶಂಕರ್ ಯಾದವ್. ಆದರೆ, ಇದೇ ಕಾರಣಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋದು ಅಚ್ಚರಿಗೆ ಕಾರಣವಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.