
ಭೋಪಾಲ್ (ನ. 28) ಈ ಕೊರೋನಾ ಲಾಕ್ ಡೌನ್ ಎಂತೆಂಥ ಅಡ್ಡ ಪರಿಣಾಮ ತಂದಿಒಟ್ಟಿದೆ ಎಂದು ಹೇಳಲು ಅಸಾಧ್ಯ. ಸಂಸಾಗಳನ್ನು ಒಡೆದು ಚೂರು ಮಾಡಿದೆ.
ಮಧ್ಯಪ್ರದೇಶದ ಭೋಪಾಲ್ ಪಮರಿಯಾ ಗ್ರಾಮದ ಘಟನೆ ಅಂಥದ್ದೆ. ರಿಂಕಿ ಮತ್ತು ಬ್ರಿಜೇಶ್ ಐದು ವರ್ಷದ ಹಿಂದೆ ವಿವಾಹವಾಗಿದ್ದರು. ಇಬ್ಬರು ಮಕ್ಕಳು ಸಹ ಇವೆ.
ಮಕ್ಕಳ ಮೊಬೈಲ್‌ಗೆ ಅಮ್ಮನ ಖಾಸಗಿ ಕ್ಷಣಗಳ ಪೋಟೋ ಕಳಿಸಿದ ಮಾಜಿ ಲವರ್!
ಲಾಕ್ ಡೌನ್ ವೇಳೆ ಬ್ರಿಜೇಶ್ ಕೆಲಸ ಹೋಗಿದೆ. ಗಂಡನನ್ನು ಪತ್ನಿ ತವರು ಮನೆಗೆ ಕರೆದುಕೊಂಡು ಹೋಗಿ ಆಶ್ರಯ ನೀಡಿದ್ದಾಳೆ. ಎರಡು ತಿಂಗಳು ತವರು ಮನೆಯಲ್ಲೆ ಇದ್ದಾರೆ. ಇದೆ ವೇಳೆ ಬ್ರಿಜೇಶ್ ಗೆ ಪತ್ನಿಯ ತಂಗಿ ಸಲಿ ಜತೆ ಸ್ನೇಹ ಹುಟ್ಟಿದೆ.
ಈ ಬಗ್ಗೆ ಕೇಳಿದಾಗ ಆಕೆ ನನ್ನ ತಂಗಿ ಎಂದು ಸಮಜಾಯಿಷಿ ಕೊಟ್ಟಿದ್ದ ಬ್ರಿಜೇಶ್ ಕಳೆದ ಶನಿವಾರ ನಾದಿನಿ ಜತೆ ಪರಾರಿಯಾಗಿದ್ದಾನೆ. ಪೊಲೀಸ್ ದೂರು ದಾಖಲಾದ ನಂತರ ಇಬ್ಬರನ್ನು ಪತ್ತೆಹಚ್ಚಿ ಮನೆಗೆ ಕಳಿಸಲಾಗಿದೆ. ಆದರೆ ನೊಂದ ನಾದಿನಿ ವಿಷ ಸೇವಿಸಿದ್ದಾಳೆ. ಪರಿಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ