40 ದಿನದಲ್ಲಿ 10 ಸಲ ವಿದ್ಯಾರ್ಥಿನಿಗೆ ಕಚ್ಚಿದ ಹಾವು ಕಡೆಗೂ ಬಿತ್ತು ಬಲೆಗೆ

Published : Sep 18, 2025, 04:37 PM IST
Snake bite

ಸಾರಾಂಶ

Snake bite: ವಿದ್ಯಾರ್ಥಿಯನ್ನು ಬೆಂಬಿಡದೆ ಕಾಡಿದ್ದ ಹಾವು ಸೆರೆಯಾಗಿದೆ. ಉರಗ ತಜ್ಞರ ನೆರವಿನಿಂದ ಹಾವನ್ನು ಸೆರೆ ಹಿಡಿಯಲಾಗಿದೆ. ಭಯದಲ್ಲೇ ದಿನ ದೂಡುತ್ತಿದ್ದ ವಿದ್ಯಾರ್ಥಿನಿ ನಿಟ್ಟುಸಿರುಬಿಡುವಂತಾಗಿದೆ. 

ಉತ್ತರ ಪ್ರದೇಶದ ವಿದ್ಯಾರ್ಥಿನಿ ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾಳೆ. ಹಾವಿ (snake)ನ ಕಾಟಕ್ಕೆ ಬೇಸತ್ತಿದ್ದ, ಹಾವಿನಿಂದ ಕಚ್ಚಿಸಿಕೊಂಡು ಭಯದಲ್ಲೇ ಕಾಲ ಕಳೆಯುತ್ತಿದ್ದ ಹುಡುಗಿಗೆ ಈಗ ನೆಮ್ಮದಿ ಸಿಕ್ಕಿದೆ. 40 ದಿನಗಳಲ್ಲಿ 10 ಬಾರಿ ವಿದ್ಯಾರ್ಥಿನಿಯನ್ನು ಕಚ್ಚಿದ್ದ ಹಾವು ಕೊನೆಗೂ ಸಿಕ್ಕಿ ಬಿದ್ದಿದೆ. ಸತತ ಐದು ಗಂಟೆಗಳ ಪ್ರಯತ್ನದ ನಂತ್ರ ರೆಸ್ಕ್ಯೂ ಟೀಂ ಹಾವನ್ನು ಹಿಡಿದಿದೆ.

40 ದಿನಗಳಲ್ಲಿ 10 ಬಾರಿ ಕಚ್ಚಿತ್ತು ಹಾವು : ಉತ್ತರ ಪ್ರದೇಶ (Uttar Pradesh)ದ ಕೌಶಂಬಿ ಜಿಲ್ಲೆಯ ಭೈಷಪ್ಪರ್ ಗ್ರಾಮದಲ್ಲಿ ಘಟನೆ ನಡೆದಿದೆ. ಹಾವು 15 ವರ್ಷದ ರಿಯಾ ಮೌರ್ಯ ಅವಳನ್ನು ಬೆನ್ನು ಹತ್ತಿತ್ತು. ರಿಯಾ ಮೌರ್ಯ, 9ನೇ ತರಗತಿ ವಿದ್ಯಾರ್ಥಿನಿ. ಜುಲೈ 22 ರಂದು ಮೊದಲ ಬಾರಿ ರಿಯಾಗೆ ಹಾವು ಕಚ್ಚಿತ್ತು. 22 ರಂದು ನಾಟಿಗೆಂದು ಭತ್ತದ ಗೆದ್ದೆಗೆ ಹೋದಾಗ ರಿಯಾ ಮೌರ್ಯಗೆ ಹಾವು ಕಚ್ಚಿತ್ತು. ತಕ್ಷಣ ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತ್ರ ಆಕೆಯನ್ನು ಮಂಜನ್ಪುರ ತೇಜ್ಮತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ರಿಯಾ ಮೌರ್ಯ ಚೇತರಿಸಿಕೊಳ್ತಿದ್ದಂತೆ ಆಕೆಯನ್ನು ಮನೆಗೆ ಕರೆತರಲಾಗಿತ್ತು. ಆದ್ರೆ ಹಾವು ಮಾತ್ರ ರಿಯಾ ಮೌರ್ಯ ನೆಮ್ಮದಿ ಕಳೆದುಕೊಳ್ಳುವಂತೆ ಮಾಡಿತ್ತು. ಆಗಸ್ಟ್ 13 ಮತ್ತು ಆಗಸ್ಟ್ 27 ರಿಂದ 30ರವರೆಗೆ ನಾಲ್ಕು ಬಾರಿ ಹಾವು ಕಚ್ಚಿತ್ತು. ಸೆಪ್ಟೆಂಬರ್ 3 ರಂದು ರಿಯಾಗೆ ಹಾವು ಕಚ್ಚಿತ್ತು. ಸ್ನಾನ ಮಾಡುವಾಗ ಇಲ್ಲ ಮನೆ ಕೆಲ್ಸ ಮಾಡುವಾಗ, ರಿಯಾ ಹಾವಿನ ಬಾಯಿಗೆ ಸಿಕ್ತಿದ್ದಳು.

ಕಂಗಾಲಾಗಿದ್ದ ಮನೆಯವರು : ರಿಯಾ ಮಾತ್ರವಲ್ಲದೆ ಇಡೀ ಕುಟುಂಬ ಹಾವಿನ ಕಾಟಕ್ಕೆ ಭಯಗೊಂಡಿತ್ತು. ರಿಯಾ ಮೌರ್ಯ ತಂದೆ ರಾಜೇಂದ್ರ ಮೌರ್ಯ ಒಂದ್ಕಡೆ ಮಗಳಿಗೆ ವೈದ್ಯರಿಂದ ಚಿಕಿತ್ಸೆ ಕೊಡ್ತಿದ್ದರೆ ಇನ್ನೊಂದು ಕಡೆ ಭೂತೋಚ್ಚಾಟನೆಗೂ ಮುಂದಾಗಿದ್ರು. ಏನೇ ಮಾಡಿದ್ರೂ ಹಾವು ಮಾತ್ರ ರಿಯಾಳನ್ನು ಬಿಟ್ಟಿರಲಿಲ್ಲ.

ಜೋಗುಳ ಹಾಡಿ ಮಲಗಿಸಿದವಳೇ 3 ವರ್ಷದ ಮಗಳ ಉಸಿರು ನಿಲ್ಲಿಸಿದಳು: ಪ್ರೇಮಿಗಾಗಿ ಕಂದನ ಕೊಲೆ

ಪೊರೆ ಬಿಟ್ಟಿದ್ದ ಹಾವು : ಹಾವಿನಿಂದ ರಿಯಾಳನ್ನು ಬಚಾವ್ ಮಾಡಲು ಮುಂದಾದ ಮನೆಯವರು ರಿಯಾ ವಾಸದ ಜಾಗ ಬದಲಿಸಿದ್ದರು. ಆಕೆಯನ್ನು ಸಂಬಂಧಿಕರ ಮನೆಯಲ್ಲಿ ಬಿಡಲಾಗಿತ್ತು. ಕುಟುಂಬಸ್ಥರು ಕೂಡ ಮನೆ ಖಾಲಿ ಬಿಟ್ಟಿದ್ದರು. ನಿನ್ನೆ ರಿಯಾ ತಂದೆ ರಾಜೇಂದ್ರ ಮೌರ್ಯ ಕೆಲ್ಸದ ಮೇಲೆ ಮನೆಗೆ ಬಂದಿದ್ದರು. ಈ ವೇಳೆ ಫ್ರಿಡ್ಜ್ ಬಳಿ ಹಾವಿನ ಪೊರೆ ಕಂಡಿದೆ. ಹಾವು ಮನೆಯಲ್ಲೇ ಎಲ್ಲೋ ಇದೆ ಎನ್ನುವ ಅನುಮಾನ ಬಂದಿದೆ. ತಕ್ಷಣ ಹಾಔು ಹಿಡಿಯುವವರನ್ನು ಕರೆಸಿದ್ದಾರೆ.

ಐದು ಗಂಟೆ ಪರಿಶ್ರಮದ ನಂತ್ರ ಸಿಕ್ಕಬಿದ್ದ ಹಾವು : ರಾಜೇಂದ್ರ ಮೌರ್ಯ ಮನೆಗೆ ಬಂದ ಉರುಗ ತಜ್ಞರು ಕೊನೆಗೂ ಹಾವನ್ನು ಹಿಡಿದಿದ್ದಾರೆ. ಮನೆಯ ಗೋಡೆ ಅಗೆದು, ಹಾವನ್ನು ಹಿಡಿಯಲಾಗಿದೆ. ಇದ್ರಿಂದ ರಿಯಾ ಕುಟುಂಬ ನೆಮ್ಮದಿಯಾಗಿದೆ. ರಿಯಾಗೆ ಕಚ್ಚುತ್ತಿದ್ದ ಹಾವು ಇದೇ ಎಂದು ಕುಟುಂಬಸ್ಥರು ಹೇಳಿದ್ದಾರೆ. ಆದ್ರೆ ಸ್ಥಳೀಯರ ಪ್ರಕಾರ ಎರಡು ಹಾವಿದ್ದು, ಒಂದನ್ನು ಮಾತ್ರ ಹಿಡಿಯಲಾಗಿದೆ. ಇನ್ನೊಂದು ತಪ್ಪಿಸಿಕೊಂಡಿದೆಯಂತೆ.

ವೃದ್ಧಾಪ್ಯದಲ್ಲಿ NRIಗಳ ಲವ್‌ ಅಫೇರ್‌: 75ರ ಅಜ್ಜನ ಮದ್ವೆಯಾಗಲು ಭಾರತಕ್ಕೆ ಬಂದು ಶವವಾದ 71ರ ಅಜ್ಜಿ

ರಿಯಾ ಮೌರ್ಯ ಮೇಲೆ ಸೇಡು ತೀರಿಸಿಕೊಳ್ತಿತ್ತಾ ಹಾವು? : ಆಸ್ಪತ್ರೆಯಿಂದ ರಿಯಾ ಮನೆಗೆ ವಾಪಸ್ ಬರ್ತಿದ್ದಂತೆ ಹಾವು ಸೇಡು ತೀರಿಸಿಕೊಳ್ಳುವಂತೆ ಆಕೆಗೆ ಕಚ್ಚುತ್ತಿತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ. ರಿಯಾ ಕಾಲು ಸುತ್ತಿಕೊಂಡು ಕಚ್ಚುತ್ತಿತ್ತಂತೆ. ಕಚ್ಚಿದ ಹಾವು ಕಪ್ಪು ನಾಗರ ಎನ್ನಲಾಗ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!