ಸಿಡಿ ಸ್ಫೋಟ; ಯಾರನ್ನೂ ಬಂಧಿಸಿಲ್ಲ, SIT ಗುರುತಿಸಿದ ನಾಲ್ವರು ಕಿಂಗ್‌ ಪಿನ್‌!

By Suvarna News  |  First Published Mar 14, 2021, 6:34 PM IST

ವಿಶೇಷ ತನಿಖಾ ತಂಡದಿಂದ ಸ್ಪಷ್ಟನೆ/ ಸಿಡಿ ಕೇಸ್ ನಲ್ಲಿ ಯಾರನ್ನೂ ಬಂಧಿಸಿಲ್ಲ/ ಮೂವರಿಗೆ  ನೋಟಿಸ್ ನೀಡಲಾಗಿದೆ/ ತನಿಖೆ ಪ್ರಗತಿಯಲ್ಲಿದೆ/ ಹೊಸದಾಗಿ ಇಬ್ಬರು ಅಧಿಕಾರಿಗಳ ಸೇರ್ಪಡೆ


ಬೆಂಗಳೂರು(ಮಾ. 14)  ಸಿಡಿ ಸ್ಫೋಟವಾದ  ನಂತರ ರಮೇಶ್ ಜಾರಕಿಹೊಳಿಯವರ ಪತ್ರದ ಆಧಾರದ ಮೇಲೆ ಸರ್ಕಾರ ವಿಶೇಷ  ತನಿಖಾ ತಂಡವನ್ನು ರಚನೆ  ಮಾಡಿತ್ತು. ತನಿಖಾ ತಂಡ ಒಟ್ಟು ಐವರನ್ನು ವಶಕ್ಕೆ ಪಡೆದಿದೆ ಎಂದು ವರದಿಗಳಾಗಿದ್ದವು. ಆದರೆ ಈಗ ಅಲ್ಲಿಂದಲೇ ಸ್ಪಷ್ಟನೆ ಸಿಕ್ಕಿದೆ.

ಇಲ್ಲಿವರೆಗೂ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲ. ನಾಪತ್ತೆಯಾಗಿರುವ ಮೂವರ ಹುಡುಕಾಟ ಮುಂದುವರಿದಿದೆ ಎಂದು ಎಸ್ ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ಸ್ಪಷ್ಟಪಡಿಸಿದ್ದಾರೆ.

Latest Videos

undefined

ಭಾನುವಾರ ಎಸ್‌ಐಟಿ ಸಭೆ ನಡೆಸಿದೆ. ಕಿಂಗ್ ಪಿನ್ ಗಳು ಕೃತ್ಯ ಇದೇ ಮೊದಲೇನಲ್ಲ ಎಂದಿರುವ  ಎಸ್‌ಐಟಿ ಮಾಸ್ಟರ್ ಮೈಂಡ್ ಗಳ ಹಿಸ್ಟರಿ ಕಲೆಕ್ಟ್ ಮಾಡಿಕೊಂಡಿದೆ.  ಈಮೇಲ್ ಮೂಲಕ ಯುವತಿ, ಸ್ನೇಹಿತ, ಕಿಂಗ್ ಪಿನ್ ಗೆ ನೋಟಿಸ್ ಕಳುಹಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ನನಗೇನೂ ಗೊತ್ತಿಲ್ಲ; ವಿಡಿಯೋದಲ್ಲಿ ಯುವತಿ ಹೇಳಿದ ಸಂಗತಿ

ಹೆಚ್ಚುವರಿಯಾಗಿ ಇಬ್ಬರು ಇನ್ಸ್ಪೆಕ್ಟರ್ ಗಳನ್ನು ಎಸ್ಐಟಿ ಟೀಂ ಕರೆಸಿಕೊಂಡಿದೆ. ಸಿಸಿಬಿಯಲ್ಲಿದ್ದ ಇಬ್ಬರು ಇನ್ಸ್ಪೆಕ್ಟರ್ ಗಳು ಎಸ್‌ಐಟಿ ಸೇರಿಕೊಂಡಿದ್ದಾರೆ. ಇನ್ಸ್ಪೆಕ್ಟರ್ ಮಾಲ್ತೇಶ್ ಬೋಳೆತ್ತೀನ್ ಹಾಗೂ ಶ್ರೀಧರ್ ಪೂಜಾರ್ ರ್ ನೇಮಕ ಎಸ್‌ಐಟಿ ತಂಡದಲ್ಲಿ  ಕೆಲಸ ಮಾಡಲಿದ್ದಾರೆ.

ಸಿಡಿ ಬಿಡುಗಡೆಯಾದನಂತರ ರಮೇಶ್ ಜಾರಕಿಹೊಳಿ ತಮ್ಮ ಮೇಲೆ ಷಡ್ಯಂತ್ರ ನಡೆಸಲಾಗಿದೆ ಎಂದು ಹೇಳಿದ್ದರು. ರಮೇಶ್ ಜಾರಕಿಹೊಳಿ ದೂರು ದಾಖಲಿಸಿದ ನಂತರ  ಪ್ರತ್ಯಕ್ಷಳಾಗಿದ್ದ ಯುವತಿ  ವಿಡಿಯೋ ಒಂದನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟು ತನಗೆ ಅನ್ಯಾಯವಾಗಿದೆ ಎಂದಿದ್ದರು.

 

click me!