* ಆರ್ ಟಿ ಐ ಕಾರ್ಯಕರ್ತ ಟಿ ಶ್ರೀಧರ್ ಹತ್ಯೆ ಪ್ರಕರಣ
* ಹರಪನಹಳ್ಳಿ ಪಟ್ಟಣದಲ್ಲಿ ಜುಲೈ 15 ರಂದು ನಡೆದ ಶ್ರೀಧರ್ ಹತ್ಯೆ
* ಪ್ರಕರಣದಲ್ಲಿ ಪಿ ಟಿ ಪರಮೇಶ್ವರ್ ನಾಯ್ಕ್ ಆಪ್ತ ಹೆಚ್ ಕೆ ಹಾಲೇಶ್ ಬಂಧನ
* ಹಾಲೇಶ್ ಬಂಧನವಾಗುತ್ತಿದ್ದಂತೆ ತಲೆ ಮರೆಸಿಕೊಂಡ ಪಿಟಿಪಿ ಮಗ ಭರತ್ ನಾಯ್ಕ್
ದಾವಣಗೆರೆ(ಜು. 18) ಆರ್ ಟಿ ಐ ಕಾರ್ಯಕರ್ತ ಟಿ ಶ್ರೀಧರ್ ಹತ್ಯೆ ಪ್ರಕರಣದ ತನಿಖೆ ಚುರುಕು ಪಡೆದಿದ್ದು ಪಿ ಟಿ ಪರಮೇಶ್ವರ್ ನಾಯ್ಕ್ ಆಪ್ತ ಹೆಚ್ ಕೆ ಹಾಲೇಶ್ ಎಂಬುವರನ್ನು ಬಂಧಿಸಲಾಗಿದೆ.
ಹರಪನಹಳ್ಳಿ ಪಟ್ಟಣದಲ್ಲಿ ಜುಲೈ 15 ರಂದು ನಡೆದ ಶ್ರೀಧರ್ ಹತ್ಯೆ ನಡೆದಿತ್ತು. ಹಾಲೇಶ್ ಬಂಧನವಾಗುತ್ತಿದ್ದಂತೆ ಪರಮೇಶ್ವರ ನಾಯ್ಕ್ ಪುತ್ರ ಭರತ್ ನಾಯ್ಕ್ ತಲೆ ಮರಡಸಿಕೊಂಡಿದ್ದಾರೆ.
ರಾಡ್ ನಿಂದ ಹೊಡೆದು ಆರ್‌ಟಿಐ ಕಾರ್ಯಕರ್ತನ ಹತ್ಯೆ
ಶ್ರೀಧರ್ ಕೊಲೆಗೆ ಸಂಬಂಧಪಟ್ಟಂತೆ ಶ್ರೀಧರ್ ಶಿಲ್ಪಾ ಪಿಟಿ ಭರತ್ ವಿರುದ್ಧ ದೂರು ನೀಡಿದ್ದರು. ಪಿಟಿ ಭರತ್, ಪಿಟಿಪಿ ಆಪ್ತ ಹೆಚ್ ಕೆ ಹಾಲೇಶ್ ಇವರಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿದ್ದರು.
ಶ್ರೀಧರ್ ಪತ್ನಿ ಶಿಲ್ಪಾ ದೂರಿನ ಆಧಾರ ಹಾಲೇಶ್ ಬಂಧನವಾಗಿದೆ ಹಾಲೇಶ್ ಬಂಧನವಾಗುತ್ತಿದ್ದಂತೆ ಪರಮೇಶ್ವರ್ ನಾಯ್ಕ್ ಪುತ್ರ ಭರತ್ ಎಸ್ಕೆಪ್ ಆಗಿದ್ದು ಪೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇದುವರರೆಗೆ ಆರು ಜನರ ಬಂಧನವಾಗಿದೆ.