Raichur Crime: ಸ್ಕೂಟಿ ಕಲಿಸುವ ನೆಪದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ

By Kannadaprabha News  |  First Published Jun 23, 2023, 1:00 PM IST

ತಾಲೂಕಿನ ಪುನರ್‌ ವಸತಿ ಕ್ಯಾಂಪ್‌-3 (ಆರ್‌ಎಚ್‌ಕ್ಯಾಂಪ್‌)3 ರಲ್ಲಿ ಯುವಕನೋರ್ವ ಅಪ್ರಾಪ್ತ ಬಾಲಕಿಗೆ ಸ್ಕೂಟಿ ಕಲಿಸುವ ನೆಪದಲ್ಲಿ ಅತ್ಯಾಚಾರ ವೆಸಗಿದ್ದು, ಈ ಕುರಿತು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಿಂಧನೂರು (ಜೂ.23): ತಾಲೂಕಿನ ಪುನರ್‌ ವಸತಿ ಕ್ಯಾಂಪ್‌-3 (ಆರ್‌ಎಚ್‌ಕ್ಯಾಂಪ್‌)3 ರಲ್ಲಿ ಯುವಕನೋರ್ವ ಅಪ್ರಾಪ್ತ ಬಾಲಕಿಗೆ ಸ್ಕೂಟಿ ಕಲಿಸುವ ನೆಪದಲ್ಲಿ ಅತ್ಯಾಚಾರ ವೆಸಗಿದ್ದು, ಈ ಕುರಿತು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಚೆಗೆ ಆರ್‌ಎಚ್‌ ನಂ. 3ರ ಸಪನ್‌ ಮಂಡಲ್‌ ಎಂಬ 26 ವಯಸ್ಸಿನ ಯುವಕ ಅದೇ ಕ್ಯಾಂಪಿನ ನಾಲ್ಕನೇ ತರಗತಿ ಓದುತ್ತಿರುವ 11 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಗೆ ಚಾಕೊಲೇಟ್‌ ಕೊಡಿಸಿ ಕ್ಯಾಂಪಿನಿಂದ ಉದ್ಬಾಳ ರಸ್ತೆಯವರೆಗೆ ತನ್ನ ಸ್ಕೂಟಿಯಲ್ಲಿ ಕೂಡಿಸಿಕೊಂಡು ಕರೆದುಕೊಂಡು ಹೋದ. ದಾರಿಯ ಮಧ್ಯೆ ಸ್ಕೂಟಿ ಕಲಿಸುವುದಾಗಿ ಅಕೆಯನ್ನು ನಂಬಿಸಿ ಉದ್ಬಾಳ ಬಳಿ ಯಾರು ಇಲ್ಲದ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ವೆಸಗಿದ್ದಾನೆ ಎಂದು ಬಾಲಕಿಯ ತಾಯಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್‌ ಅಧಿಕಾರಿಗಳು ಆರೋಪಿ ಸಪನ್‌ ಮಂಡಲ್‌ನನ್ನು ಪತ್ತೆಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆ ಮಾಹಿತಿ ಪಡೆದ ಜಿಲ್ಲಾ ಪೊಲೀಸ್‌ ವರಿ​ಷ್ಠಾ​ಧಿ​ಕಾರಿ ನಿಖಿಲ್‌ ಬಿ. ಹಾಗೂ ಪೊಲೀಸ್‌ ಅಧಿ​ಕಾ​ರಿ​ಗಳು ಸ್ಥಳಕ್ಕೆ ಭೇಟಿ ನೀಡಿ ಪರಿ​ಶೀ​ಲನೆ ನಡೆಸಿ ಅಗತ್ಯ ಮಾಹಿ​ತಿ​ಯನ್ನು ಕಲೆ​ಹಾ​ಕಿ​ದ್ದಾ​ರೆ. ಈ ಕುರಿತು ತನಿಖೆ ನಡೆದಿದೆ ಎಂದು ಗ್ರಾಮೀಣ ಪೊಲೀಸ್‌ ಠಾಣೆಯ ಪಿಎಸ್‌ಐ ಮಣಿಕಂಠ ತಿಳಿಸಿದ್ದಾರೆ.

Latest Videos

undefined

ಶಾಲಾ ಬಾಲಕಿಯ ಮೈ ಮುಟ್ಟಿದ ಕ್ಷೇತ್ರ ಶಿಕ್ಷಣಾಧಿಕಾರಿಗೆ 5 ವರ್ಷ ಜೈಲು

ಶೋಷಿತರ ಜೀವದ ಗ್ಯಾರಂಟಿ ಘೋಷ​ಣೆಗೆ ಆಗ್ರ​ಹಿಸಿ ಪ್ರತಿಭಟನೆ

ಸಿಂಧನೂರು: ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಐದು ಗ್ಯಾರಂಟಿಗಳ ಜೊತೆಗೆ ದಲಿತ, ಅಲ್ಪಸಂಖ್ಯಾತ ಹಾಗೂ ಶೋಷಿತರ ಜೀವದ ಗ್ಯಾರಂಟಿಯನ್ನು ಘೋಷಿಸಬೇಕು ಎಂದು ಒತ್ತಾಯಿಸಿ ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟ ತಾಲೂಕು ಘಟಕದಿಂದ ಸ್ಥಳೀಯ ಮಿನಿ ವಿಧಾನಸೌಧ ಮುಂದೆ ಪ್ರತಿಭಟಿಸಲಾಯಿತು.

ಜೂನ್‌ 21, 2023 ರಂದು ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಬಳ್ಳಾರಿಯಲ್ಲಿ ನಡೆದ ಅತ್ಯಾಚಾರ ಕೊಲೆಯನ್ನು ಖಂಡಿಸಿ, ತಪ್ಪಿತಸ್ಥರನ್ನು ಬಂಧಿಸಿ, ಉಗ್ರ ಶಿಕ್ಷೆಗೊಳಪಡಿಸಿ, ಮೃತರ ಕುಟುಂಬಗಳಿಗೆ ಸರ್ಕಾರ ತಲಾ ರು. 1 ಕೋಟಿ ಪರಿಹಾರ ಅಥವಾ ಸರ್ಕಾರಿ ಉದ್ಯೋಗ ನೀಡಬೇಕು. ಒಂದು ವೇಳೆ ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ಮುಂದೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಹಿಳೆಗೆ ಚಿಕಿತ್ಸೆ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ನಕಲಿ ವೈದ್ಯ: ಕಾಮುಕನನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದ ಪತಿ

ಒಕ್ಕೂಟದ ಸಂಚಾಲಕರಾದ ಎಂ. ಗಂಗಾಧರ, ಮಾಬುಸಾಬ ಬೆಳ್ಳಟ್ಟಿ, ಶ್ಯಾಮಣ್ಣ ಸಿಂದೋಳ್ಳು, ಯಲ್ಲಪ್ಪ ಜವಳಗೇರಾ, ಎಚ್‌.ಆರ್‌. ಹೊಸಮನಿ, ಹುಲುಗಪ್ಪ ಬಳ್ಳಾರಿ, ರಾಮು ಕೂಡ್ಲಿಗಿ, ತಿಮ್ಮಣ್ಣ ಯಾದವ, ಗೌಸಖಾನ್‌ ಕಲಮಂಗಿ, ಖಾಜಾಸಾಬ, ಬುಡ್ಡಸಾಬ ಜಾಲವಾಡ್ಗಿ, ನಾಗೇಶ, ಲಕ್ಷ್ಮಣ ಜವಳಗೇರಾ, ರಂಜಾನ್‌ ಸಾಬ ಇದ್ದರು.

click me!