ರಾಜ್ಯ ರಾಜಕಾರಣದಲ್ಲಿ ಭಾರೀ ಸುದ್ದು ಮಾಡುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದ ಕಿಂಗ್ಪಿನ್ ಬಗ್ಗೆ ಅಚ್ಚರಿಯ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು, (ಮಾ.13): ರಮೇಶ್ ಜಾರಕಿಹೊಳಿ ಸೆಕ್ಟ್ ಸಿ.ಡಿ. ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಆರಂಭಿಸಿದ್ದು, ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಿದೆ.
ಅದರಲ್ಲೂ ಸೆಕ್ಸ್ ಸಿಡಿ ಪ್ರಕರಣದಲ್ಲಿ ಕಿಂಗ್ ಪಿನ್ ಬಗ್ಗೆ ಅಚ್ಚರಿಯ ಮಾಹಿತಿ ಲಭ್ಯವಾಗಿದೆ ಎನ್ನಲಾಗುತ್ತಿದೆ. ಈ ಕೇಸ್ನ ಕಿಂಗ್ಪಿನ್ ಎನ್ನಲಾದ ವ್ಯಕ್ತಿ, ಯಶವಂತಪುರದಲ್ಲಿ ಬರೋಬ್ಬರಿ 44 ಲಕ್ಷ ರೂ. ನಗದು ಕೊಟ್ಟು ಫಾರ್ಚುನರ್ ಕಾರು ಖರೀದಿಗೆ ಹೋಗಿದ್ದನಂತೆ ಎನ್ನುವ ಮಾಹಿತಿ ಸಿಕ್ಕಿದೆ.
ರಾಸಲೀಲೆ ಸಿ.ಡಿ.: ಕೊನೆಗೂ ದೂರು ನೀಡಿದ ರಮೇಶ್ ಜಾರಕಿಹೊಳಿ
ಈ ಕಿಂಗ್ಪಿನ್ಗೆ ಸಿಡಿ ಕೇಸಲ್ಲಿ ಕೋಟ್ಯಂತರ ಹಣ ಟ್ರಾನ್ಸಕ್ಷನ್ ಶಂಕೆ ವ್ಯಕ್ತವಾಗಿದೆ. ಇದೇ ಹಣದಿಂದ ಫುಲ್ ಕ್ಯಾಶ್ ಕೊಟ್ಟು ಶಂಕಿತ ಕಿಂಗ್ಪಿನ್ ಐಷಾರಾಮಿ ಕಾರು ಖರೀದಿಗೆ ಮುಂದಾಗಿದ್ದ. ಆದರೆ, 2 ಲಕ್ಷ ರೂ. ಮಾತ್ರ ಕ್ಯಾಶ್ ಕೊಟ್ಟು, ಉಳಿದ ಹಣವನ್ನು ಅಕೌಂಟ್ಗೆ ಜಮೆ ಮಾಡುವಂತೆ ಶೋ ರೂಂ ಸಿಬ್ಬಂದಿ ಸಲಹೆ ನೀಡಿದ್ದರಂತೆ.
ಹಾಗಾಗಿ ಕಾರು ಖರೀದಿಯಿಂದ ಆತ ಹಿಂದೆ ಸರಿದಿದ್ದ ಎಂದು ಮಾಹಿತಿ ಲಭ್ಯವಾಗಿದೆ. ಸದ್ಯ ಶಂಕಿತ ಆರೋಪಿಗಳ ಬ್ಯಾಂಕ್ ಖಾತೆ ವಿವರವನ್ನ ಎಸ್‌ಐಟಿ ಅಧಿಕಾರಿಗಳು ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.