
ವಿಜಯಪುರ (ಫೆ.20) ಕುಡಿದ ಮತ್ತಿನಲ್ಲಿ ಬಾರ್‌ನಲ್ಲಿದ್ದ ಲಾಬ್ರಡಾರ್ ನಾಯಿ ಕದ್ದೊಯ್ದನೆಂಬ ಕಾರಣಕ್ಕೆ ವ್ಯಕ್ತಿಯನ್ನು ಹಿಡಿದು ತಂದು ನಾಯಿ ಗೂಡಿನಲ್ಲಿಟ್ಟು ಅಮಾನವೀಯವಾಗಿ ನಡೆಸಿಕೊಂಡ ಘಟನೆ ವಿಜಯಪುರ ನಗರದ ಬಬಲೇಶ್ವರ ರಸ್ತೆಯಲ್ಲಿರುವ ಸಾಯಿ ಪ್ರಭಾತ ಬಾರ್‌ನಲ್ಲಿ ನಡೆದಿದೆ.
ಸೋಮು ಎಂಬಾತನನ್ನ ನಾಯಿ ಗೂಡಿನಲ್ಲಿ ಬಂಧಿಸಿಟ್ಟ ಬಾರ್ ಸಿಬ್ಬಂದಿ. ಕುಡಿಯಲು ಬಾರ್‌ಗೆ ಬಂದಿದ್ದ ವೇಳೆ ಬಾರ್ ಮುಂದೆ ಲ್ಯಾಬ್ರಡಾರ್ ನಾಯಿಯನ್ನು ನೋಡಿದ್ದ. ನಾಯಿ ಮುದ್ದಾಗಿ ಕಾಣಿಸಿದ್ದರಿಂದಲೋ, ಕುಡಿದ ಮತ್ತಿನಲ್ಲೋ ಒಟ್ಟಿನಲ್ಲಿ ಬಾರ್‌ಗೆ ಬಂದಿದ್ದವನು ನಾಯಿ ಕದ್ದುಕೊಂಡು ಹೋಗಿದ್ದ. ಈ ವಿಚಾರ ಬಾರ್ ಸಿಬ್ಬಂದಿಗೆ ಗೊತ್ತಾಗಿ. ಕದ್ದವನನ್ನು ಹಿಡಿದು ತಂದಿದ್ದಾರೆ. ಬಳಿಕ ಬಾರ್‌ನಲ್ಲಿ ನಾಯಿ ಕಟ್ಟುತ್ತಿದ್ದ ಸ್ಥಳದಲ್ಲೇ ವ್ಯಕ್ತಿಯನ್ನು ಕೆಲ ಕಾಲ ಕಟ್ಟಿಹಾಕಿದ್ದಾರೆ.
ಮಗನ ಅಂತ್ಯಕ್ರಿಯೆ ವೇಳೆ ಗೃಹಲಕ್ಷ್ಮಿ ಬಗ್ಗೆ ತಾಯಿ ಭಾವುಕ ಮಾತು ವೈರಲ್!
ಮಾಡಿದ ತಪ್ಪಿಗೆ ಅಸಹಾಯಕನಾಗಿ ನಾಯಿಯಂತೆ ಕುಳಿತಿರುವ ಕುಡುಕ. ಈ ದೃಶ್ಯ ನೋಡಿ ಬಾರ್‌ಗೆ ಬಂದವರಿಂದ ಆಕ್ಷೇಪ ವ್ಯಕ್ತವಾಗಿದೆ. ನಾಯಿ ಕದ್ದಿದ್ದಕ್ಕೆ ಈ ರೀತಿ ನಡೆಸಿಕೊಳ್ಳೋದಾ ಅಂತಾ ಬಾರ್ ಸಿಬ್ಬಂದಿ ವಿರುದ್ಧ ಗರಂ ಆಗಿರುವ ಜನರು. ಇದರಿಂದ ಎಚ್ಚೆತ್ತ ಸಿಬ್ಬಂದಿ ಕುಡುಕನನ್ನು ವಾಪಸ್ ಕಳಿಸಿದ ಸಿಬ್ಬಂದಿ. ಆದರೆ ಈ ವಿಚಾರವಾಗಿ ಜನರಿಂದ ಜನರಿಗೆ ತಿಳಿದು ಇದೀಗ ವ್ಯಕ್ತಿಯನ್ನು ಅಮಾನುಷವಾಗಿ ನಡೆಸಿಕೊಂಡ ಬಾರ್ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ತುಂಬು ಗರ್ಭಿಣಿ ಮೇಲೆ ಹಲ್ಲೆ ನಡೆಸಿದ ಪಾಪಿಗಳು; ಮಗು ಹೊಟ್ಟೆಯೊಳಗೇ ಸಾವು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ