ದಾಬಸ್‌ಪೇಟೆ: ಲಾರಿ ಚಾಲಕನಿಗೆ 25 ಸಾವಿರಕ್ಕೆ ಬೇಡಿಕೆ ಇಟ್ರಾ ಪೊಲೀಸರು?

By Kannadaprabha News  |  First Published Oct 24, 2023, 7:35 AM IST

ಪಿಎಸ್‌ಐ ದಿವ್ಯ ಮತ್ತು ಪೇದೆ ಶ್ರೀನಿವಾಸ್ ಲಾರಿ ಚಾಲಕ ನವೀದ್ ಬಳಿ ದಸರಾ ಹಬ್ಬದ ಪ್ರಯುಕ್ತ 25 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಲಾರಿ ಚಾಲಕ ನವೀದ್ ಹಣ ಇಲ್ಲವೆಂದು ತಿಳಿಸಿದ್ದಕ್ಕೆ ಪೇದೆ ಲಾಠಿಯಿಂದ ಹಲ್ಲೆ ಮಾಡಿ ಲಾರಿ ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ ನವೀದ್‌.

ದಾಬಸ್‌ಪೇಟೆ(ಅ.24): ಪಿಎಸ್‌ಐ ಮತ್ತು ಪೇದೆ ಲಾರಿಯಲ್ಲಿ ಚಪ್ಪಡಿಕಲ್ಲು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದು ಮನನೊಂದ ಲಾರಿ ಚಾಲಕ ನೆಲಮಂಗಲ ಡಿವೈಎಸ್‌ಪಿ ಕಚೇರಿಗೆ ದೂರು ನೀಡಿದ್ದಾರೆ.

ತ್ಯಾಮಗೊಂಡ್ಲು ಪೊಲೀಸ್ ಠಾಣೆಯ ಪಿಎಸ್‌ಐ ದಿವ್ಯ ಹಾಗೂ ಪೇದೆ ಶ್ರೀನಿವಾಸ್ ವಿರುದ್ಧ ದೂರು ನೀಡಲಾಗಿದೆ. ನೆಲಮಂಗಲ ತಾಲೂಕಿನ ಇಸ್ಲಾಂಪುರ ಗ್ರಾಮದ ನಿವಾಸಿ ನವೀದ್ ತನ್ನ ಲಾರಿಯಲ್ಲಿ ಕೊರಟಗೆರೆ ಬಳಿಯ ರಾಮೇನಹಳ್ಳಿಯ ರೈತರೊಬ್ಬರ ನೆಲಕ್ಕೆ ಹಾಸಲು ಚಪ್ಪಡಿ ಕಲ್ಲುಗಳನ್ನು ತ್ಯಾಮಗೊಂಡ್ಲು ಮಾರ್ಗವಾಗಿ ನೆಲಮಂಗಲಕ್ಕೆ ಸಾಗಿಸುತ್ತಿದ್ದರು. ಈ ವೇಳೆ ತ್ಯಾಮಗೊಂಡ್ಲು ಪೊಲೀಸ್ ಠಾಣೆ ಪೇದೆ ಶ್ರೀನಿವಾಸ್ ಲಾರಿ ತಡೆದು ಬಳಿಕ ಠಾಣೆ ಬಳಿ ತಂದು ನಿಲ್ಲಿಸಿದ್ದಾರೆ. ಪಿಎಸ್‌ಐ ದಿವ್ಯ ಮತ್ತು ಪೇದೆ ಶ್ರೀನಿವಾಸ್ ಲಾರಿ ಚಾಲಕ ನವೀದ್ ಬಳಿ ದಸರಾ ಹಬ್ಬದ ಪ್ರಯುಕ್ತ 25 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಲಾರಿ ಚಾಲಕ ನವೀದ್ ಹಣ ಇಲ್ಲವೆಂದು ತಿಳಿಸಿದ್ದಕ್ಕೆ ಪೇದೆ ಲಾಠಿಯಿಂದ ಹಲ್ಲೆ ಮಾಡಿ ಲಾರಿ ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ ಎಂದು ದೂರಿನಲ್ಲಿ ನವೀದ್‌ ಆರೋಪಿಸಿದ್ದಾರೆ.

Tap to resize

Latest Videos

undefined

ತುಮಕೂರಿನಲ್ಲಿ ರೌಡಿಶೀಟರ್ ಪೊಲಾರ್ಡ್‌ ಬರ್ಬರ ಹತ್ಯೆ

ಈ ಹಿಂದೆಯೂ ಒಮ್ಮೆ ಲಾರಿಯಲ್ಲಿ ಚಪ್ಪಡಿ ಕಲ್ಲು ಸಾಗಿತ್ತಿದ್ದಾಗ ಇದೇ ರೀತಿ ಮಾಡಿದ್ದರು. ದಸರಾ ಹಬ್ಬದ ಹೆಸರಿನಲ್ಲಿ ನಮ್ಮಂತಹ ಕೂಲಿ ಕಾರ್ಮಿಕರ ಬಳಿ ಹಣ ನೀಡುವಂತೆ ಒತ್ತಾಯ ಮಾಡುವುದು ಸರಿಯಲ್ಲ. ಹಣ ಇಲ್ಲವೆಂದಿದ್ದಕ್ಕೆ ಲಾಠಿಯಿಂದ ಹಲ್ಲೆ ಮಾಡಿ ದಮ್ಮಿ ಹಾಕುತ್ತಿದ್ದಾರೆ. ಇವರ ವಿರುದ್ದ ಕ್ರಮ ಕೈಗೊಳ್ಳುವಂತೆ ನೆಲಮಂಗಲ ಡಿವೈಎಸ್‌ಪಿ ಕಚೇರಿಗೆ ದೂರು ನೀಡಿದ್ದೇನೆ ಎಂದು ದಾಬಸ್‌ಪೇಟೆ(ಅ.24): ಪಿಎಸ್‌ಐ ಮತ್ತು ಪೇದೆ ಲಾರಿಯಲ್ಲಿ ಚಪ್ಪಡಿಕಲ್ಲು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದು ಮನನೊಂದ ಲಾರಿ ಚಾಲಕ ನೆಲಮಂಗಲ ಡಿವೈಎಸ್‌ಪಿ ಕಚೇರಿಗೆ ದೂರು ನೀಡಿದ್ದಾರೆ.
ತ್ಯಾಮಗೊಂಡ್ಲು ಪೊಲೀಸ್ ಠಾಣೆಯ ಪಿಎಸ್‌ಐ ದಿವ್ಯ ಹಾಗೂ ಪೇದೆ ಶ್ರೀನಿವಾಸ್ ವಿರುದ್ಧ ದೂರು ನೀಡಲಾಗಿದೆ. ನೆಲಮಂಗಲ ತಾಲೂಕಿನ ಇಸ್ಲಾಂಪುರ ಗ್ರಾಮದ ನಿವಾಸಿ ನವೀದ್ ತನ್ನ ಲಾರಿಯಲ್ಲಿ ಕೊರಟಗೆರೆ ಬಳಿಯ ರಾಮೇನಹಳ್ಳಿಯ ರೈತರೊಬ್ಬರ ನೆಲಕ್ಕೆ ಹಾಸಲು ಚಪ್ಪಡಿ ಕಲ್ಲುಗಳನ್ನು ತ್ಯಾಮಗೊಂಡ್ಲು ಮಾರ್ಗವಾಗಿ ನೆಲಮಂಗಲಕ್ಕೆ ಸಾಗಿಸುತ್ತಿದ್ದರು. ಈ ವೇಳೆ ತ್ಯಾಮಗೊಂಡ್ಲು ಪೊಲೀಸ್ ಠಾಣೆ ಪೇದೆ ಶ್ರೀನಿವಾಸ್ ಲಾರಿ ತಡೆದು ಬಳಿಕ ಠಾಣೆ ಬಳಿ ತಂದು ನಿಲ್ಲಿಸಿದ್ದಾರೆ. ಪಿಎಸ್‌ಐ ದಿವ್ಯ ಮತ್ತು ಪೇದೆ ಶ್ರೀನಿವಾಸ್ ಲಾರಿ ಚಾಲಕ ನವೀದ್ ಬಳಿ ದಸರಾ ಹಬ್ಬದ ಪ್ರಯುಕ್ತ 25 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಲಾರಿ ಚಾಲಕ ನವೀದ್ ಹಣ ಇಲ್ಲವೆಂದು ತಿಳಿಸಿದ್ದಕ್ಕೆ ಪೇದೆ ಲಾಠಿಯಿಂದ ಹಲ್ಲೆ ಮಾಡಿ ಲಾರಿ ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ ಎಂದು ದೂರಿನಲ್ಲಿ ನವೀದ್‌ ಆರೋಪಿಸಿದ್ದಾರೆ.

ಈ ಹಿಂದೆಯೂ ಒಮ್ಮೆ ಲಾರಿಯಲ್ಲಿ ಚಪ್ಪಡಿ ಕಲ್ಲು ಸಾಗಿತ್ತಿದ್ದಾಗ ಇದೇ ರೀತಿ ಮಾಡಿದ್ದರು. ದಸರಾ ಹಬ್ಬದ ಹೆಸರಿನಲ್ಲಿ ನಮ್ಮಂತಹ ಕೂಲಿ ಕಾರ್ಮಿಕರ ಬಳಿ ಹಣ ನೀಡುವಂತೆ ಒತ್ತಾಯ ಮಾಡುವುದು ಸರಿಯಲ್ಲ. ಹಣ ಇಲ್ಲವೆಂದಿದ್ದಕ್ಕೆ ಲಾಠಿಯಿಂದ ಹಲ್ಲೆ ಮಾಡಿ ದಮ್ಮಿ ಹಾಕುತ್ತಿದ್ದಾರೆ. ಇವರ ವಿರುದ್ದ ಕ್ರಮ ಕೈಗೊಳ್ಳುವಂತೆ ನೆಲಮಂಗಲ ಡಿವೈಎಸ್‌ಪಿ ಕಚೇರಿಗೆ ದೂರು ನೀಡಿದ್ದೇನೆ ಎಂದು ಲಾರಿ ಚಾಲಕ ನವೀದ್ ತಿಳಿಸಿದ್ದಾರೆ. 

ಹಿಂದೂ ದೇವರನ್ನ ನಿಂದಿಸಿದವನ ಬಣ್ಣ ಬಯಲು ಮಾಡಿದ್ದ ಯುವಕ ಆತ್ಮಹತ್ಯೆ: ಡೆತ್ ನೋಟ್ ಬಯಲು ಮಾಡ್ತು ಸಾವಿನ ಸೀಕ್ರೆಟ್..!

ಈ ಪ್ರಕರಣ ಈಗಾಗಲೇ ನನ್ನ ಗಮನಕ್ಕೆ ಬಂದಿದ್ದು ನೆಲಮಂಗಲ ಉಪವಿಭಾಗದ ಡಿವೈಎಸ್‌ಪಿ ಜಗದೀಶ್ ನೇತೃತ್ವದಲ್ಲಿ ವಿಚಾರಣೆ ಮಾಡುವಂತೆ ನಿರ್ದೇಶನ ನೀಡಲಾಗಿದೆ. ವಿಚಾರಣೆ ಬಳಿಕ ತಪ್ಪಿದ್ದಲ್ಲಿ ಶಿಸ್ತುಕ್ರಮ ಕೈಗೊಳ್ಳುತ್ತೇನೆ ಎಂದು ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ತಿಳಿಸಿದ್ದಾರೆ.  

click me!