
ಮಂಗಳೂರು(ಫೆ. 11) ರ‍್ಯಾಗಿಂಗ್ ಪ್ರಕರಣದಲ್ಲಿ ಕಣಚೂರು ಸಂಸ್ಥೆಯ 11 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಮಂಗಳೂರು ಹೊರವಲಯದ ದೇರಳಕಟ್ಟೆಯ ಕಣಚೂರು ಪಿಸಿಯೋಥೆರಪಿ ಮತ್ತು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳ ಬಂಧನವಾಗಿದೆ.
ಕಿರಿಯ ವಿದ್ಯಾರ್ಥಿಗಳಿಗೆ ಕೆಲ ಸೀನಿಯರ್ ವಿದ್ಯಾರ್ಥಿಗಳಿಂದ ರ‍್ಯಾಗಿಂಗ್ ಮಾಡುತ್ತಿದ್ದಾರೆ ಬಗ್ಗೆ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಕೆಲ ವಿದ್ಯಾರ್ಥಿಗಳಿಂದ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಗೂ ದೂರು ಸಲ್ಲಿಕೆಯಾಗಿತ್ತು.
ಅಂದು ವಿದ್ಯಾರ್ಥಿನಿಯರು..ಇಂದು ಮಹಿಳೆಯರು... ಮಾಡಿದ ಕೆಲಸಕ್ಕೆ ಶಿಕ್ಷೆ ತಪ್ಪಲಿಲ್ಲ
ಉಳ್ಳಾಲ ಪೊಲೀಸ್ ಠಾಣೆಗೆ ಒಟ್ಟು 18 ವಿದ್ಯಾರ್ಥಿಗಳ ವಿರುದ್ದ ಕಾಲೇಜು ಆಡಳಿತವೇ ದೂರು ನೀಡಿತ್ತು ಸದ್ಯ ಕೇರಳ ಮೂಲದ 11 ವಿದ್ಯಾರ್ಥಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಮಹಮ್ಮದ್ ಶಮ್ಮಸ್, ರಾಬಿನ್ ಬಿಜು, ಆಲ್ವಿನ್, ಜಾಬಿನ್, ಸಿರಿಲ್, ರಾಯ್ಚನ್, ಮಹಮ್ಮದ್ ಸೂರಜ್, ಅಶಿನ್ ಬಾಬು, ಅಬ್ದುಲ್ ಬಾಸಿತ್, ಅಬ್ದುಲ್ ಅನಾಸ್, ಅಕ್ಷಯ್ ಬಂಧಿತ ವಿದ್ಯಾರ್ಥಿಗಳು .
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ