ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ನವರತನ್ ಜ್ಯುವೆಲ್ಲರಿ ಅಂಗಡಿ ಮಾಲೀಕರಿಗೆ ವಂಚನೆ| ಆರೋಪಿಯಿಂದ 1 ಕೋಟಿ ಮೌಲ್ಯದ 1.5 ಕೆ.ಜಿ ಚಿನ್ನಾಭರಣ ಜಪ್ತಿ| ಆಭರಣ ದೋಚಿ ತನ್ನೂರಿಗೆ ಪರಾರಿಯಾಗಿದ್ದ ಆರೋಪಿ|
ಬೆಂಗಳೂರು(ನ.06): ತಾನು ಕೆಲಸ ಮಾಡುತ್ತಿದ್ದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಲ್ಲೇ ದಾಖಲೆ ತಿದ್ದಿ 1 ಕೋಟಿ ಮೌಲ್ಯದ ಆಭರಣ ದೋಚಿದ್ದ ನೌಕರನೊಬ್ಬ ಕಬ್ಬನ್ ಪಾರ್ಕ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಒಡಿಶಾ ಮೂಲದ ಲಂಬೋದರ ಬಿಸ್ವಾಲ್ ಬಂಧಿತನಾಗಿದ್ದು, ಆರೋಪಿಯಿಂದ 1 ಕೋಟಿ ಮೌಲ್ಯದ 1.5 ಕೆ.ಜಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಎಂ.ಜಿ.ರಸ್ತೆಯಲ್ಲಿರುವ ನವರತನ್ ಜ್ಯುವೆಲ್ಲರಿ ಅಂಗಡಿ ಮಾಲೀಕರಿಗೆ ಬಿಸ್ವಾಲ್ ವಂಚಿಸಿದ್ದ. ಆಭರಣ ದೋಚಿ ತನ್ನೂರಿಗೆ ಪರಾರಿಯಾಗಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಸೆರೆ ಹಿಡಿದು ಕರೆ ತರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
undefined
ಮೋಜಿನ ಜೀವನಕ್ಕೆ ಅಡ್ಡ ದಾರಿ: ಅಂತಾರಾಜ್ಯ ಖದೀಮ ಸೆರೆ, 1 ಕೇಜಿ ಚಿನ್ನಾಭರಣ ವಶ
6 ವರ್ಷಗಳಿಂದ ಎಂ.ಜಿ.ರಸ್ತೆ ನವರತನ್ ಜ್ಯುವೆಲ್ಲರಿ ಅಂಗಡಿಯಲ್ಲಿ ಬಿಸ್ವಾಲ್ ಕೆಲಸ ಮಾಡುತ್ತಿದ್ದ. ಬಳಿಕ ಮಳಿಗೆಯನ್ನು ವ್ಯಾಪಾರವನ್ನು ಸಂಪೂರ್ಣ ಕಂಪ್ಯೂಟರಿಕರಣಗೊಳಿಸಿದ್ದರು. ಆಗ ಕಂಪ್ಯೂಟರ್ ಅಪರೇಟರ್ ಮಾಡಲು ಆತನನ್ನು ಮಾಲಿಕರು ನೇಮಿಸಿದ್ದರು. ಈ ವೇಳೆ ಅಂಗಡಿ ಮಾಲೀಕರಿಗೆ ಗೊತ್ತಾಗದಂತೆ ಕಂಪ್ಯೂಟರ್‌ನಲ್ಲಿ ಚಿನ್ನದ ದಾಖಲೆಗಳನ್ನು ತಿದ್ದಿ, ಎಡಿಟ್ ಮಾಡಿ ಮಾಲೀಕರಿಗೆ ವಂಚಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.