
ಕಾರವಾರ, ಉತ್ತರಕನ್ನಡ (ಜು.16): ಮನೆಯಲ್ಲಿ ಯಾರೂ ಇಲ್ಲದ ವೇಳೆ ತಾಯಿ-ಮಗಳು ಇಬ್ಬರೂ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಸರ್ಪನಕಟ್ಟೆ ಯಲ್ವಡಿ ಕುವರ ಗ್ರಾಪಂ ವ್ಯಾಪ್ತಿಯ ಗೋರಿಕಲ್ಲ ಮನೆಯಲ್ಲಿ ನಡೆದಿದೆ.
ತಾಯಿ ಕೃಷ್ಣಮ್ಮ ನಾರಾಯಣ ನಾಯ್ಕ್(55), ಮಗಳು ಮಾದೇವಿ ದೊಡ್ಡಯ್ಯ ನಾಯ್ಕ್(37) ಮೃತ ದುರ್ದೈವಿಗಳು. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ಮಾದೇವಿ ದೊಡ್ಡಯ್ಯ ನಾಯ್ಕ್ ಕಳೆದ 14 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ 12 ವರ್ಷಗಳಿಂದ ತನ್ನ ತಾಯಿಯ ಮನೆಯ ಸಮೀಪದಲ್ಲಿ ಇಬ್ಬರು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದರು. 8ನೇ ತರಗತಿ ಓದುತ್ತಿರುವ ಓರ್ವ ಮಗಳು, 6ನೇ ತರಗತಿ ಓದುತ್ತಿರುವ ಓರ್ವ ಮಗನಿದ್ದಾನೆ.
ವಾಲ್ಮೀಕಿ ನಿಗಮದ ಕೋಟಿ ಕೋಟಿ ಹಣ ಚುನಾವಣೆಗೆ ಬಳಕೆ; ಹಗರಣದಲ್ಲಿ ನಾನಿಲ್ಲ ಎನ್ನುತ್ತಿದ್ದ ನಾಗೇಂದ್ರ ಈಗ ಮೌನ!
ಇಂದು ಸಂಬಂಧಿಕರ ಮದುವೆ ಇದ್ದ ಕಾರಣ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗಳು ಮಾದೇವಿ ನೇಣಿಗೆ ಶರಣಾಗಿದ್ದಾರೆ. ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದು ನೋಡಿ ಆಘಾತಕ್ಕೆ ಒಳಗಾದ ತಾಯಿ ಕೂಡ ಅಲ್ಲೇ ಸಮೀಪದ ತನ್ನ ಮನೆಗೆ ತೆರಳಿ ತಾನೂ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಸ್ಥಳಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ