ಮುತೈದೆ ಪೂಜೆ ಹೆಸರಲ್ಲಿ ಮಾಂಗಲ್ಯ ಸರ ಕಳ್ಳತನ: ಚಿನ್ನ ಕಳ್ಕೊಂಡು ಕಂಗಾಲಾದ ಮಹಿಳೆಯರು..!

By Kannadaprabha News  |  First Published Sep 15, 2023, 5:45 AM IST

ಮಹಿಳೆಯರೇ ತಮ್ಮ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳಚಿಕೊಟ್ಟಿದ್ದಾರೆ ಎನ್ನಲಾಗಿದೆ. ಚಿನ್ನ ಕೈಗೆ ಸಿಗಿತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಕೆಲ ಸಮಯದ ನಂತರ ತಮ್ಮ ಚಿನ್ನದ ತಾಳಿಗಳನ್ನು ಕಳೆದುಕೊಂಡದ್ದು ಅರಿವಿಗೆ ಬಂದು ಮಹಿಳೆಯರಿಬ್ಬರು ಕುಟುಂಬದವರೊಂದಿಗೆ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.


ಆನೇಕಲ್(ಸೆ.15):  ಹೊಸದಾಗಿ ಬಂಗಾರದ ಅಂಗಡಿ ತೆರೆಯುತ್ತಿದ್ದು ಮುತ್ತೈದೆಯರಿಂದ ಪೂಜೆ ಸಲ್ಲಿಸಿದರೇ ಒಳಿತಾಗುತ್ತದೆ. ಹಾಗಾಗಿ ಈ ಹೂವು, ತೆಂಗಿನಕಾಯಿಗೆ ಪೂಜೆ ಮಾಡಿ 100ರ ನೋಟನ್ನು ಕಣ್ಣಿಗೊತ್ತಿಕೊಂಡು ಇರಿಸಿಕೊಳ್ಳಿ ಎಂದು ನಂಬಿಸಿ ಮುಗ್ಧ ಹೆಂಗಸರಿಬ್ಬರನ್ನು ವಂಚಿಸಿ ಅವರ ಕೊರಳಲ್ಲಿದ್ದ ಮಾಂಗಲ್ಯ ಸರ ಎಗರಿಸಿದ ಘಟನೆ ಆನೇಕಲ್‌ನ ಬನ್ನೇರುಘಟ್ಟ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬ್ಯಾಗಡದೇನಹಳ್ಳಿಯ ಮುನಿರತ್ನಮ್ಮ 45 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದರೆ, ಜಂಗಲ್ ಪಾಳ್ಯದ ವಿಜಯಮ್ಮ ಬರೋಬ್ಬರಿ 50 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳೆದುಕೊಂಡಿದ್ದಾರೆ. ಬೈಕಲ್ಲಿ ಬಂದ ಆಸಾಮಿಗಳಿಬ್ಬರು ಒಂಟಿ ಹೆಂಗಸರಿರುವ ತಾಣವನ್ನು ಗುರ್ತಿಸಿ ನಯವಾದ ಹೆಂಗಸರನ್ನು ಓಲೈಸಿ ನಂಬಿಸಿ ತಾವು ಆಗಲೇ ತಂದಿದ್ದ ಕಾಯಿಗೆ ಹೂಗಳಿಂದ ಪೂಜೆ ಮಾಡುವಂತೆ ಪ್ರೇರೇಪಿಸಿದ್ದಾರೆ. ಪೂಜೆಯ ಕಡೆಗೆ ₹100ರ ನೋಟನ್ನು ನೀಡಿ ಕಣ್ಣಿಗೆ ಒತ್ತಿಕೊಂಡು ಇರಿಸಿಕೊಳ್ಳಿ ಎಂದು ತಿಳಿಸಿದ್ದಾರೆ. ಅದರಂತೆ ಕಣ್ಣಿಗೆ ಒತ್ತಿಕೊಂಡ ಕೆಲ ಸಮಯದ ಬಳಕ ಮಂಪರು ಬಂದಂತಾಗಿ ಮಹಿಳೆಯರೇ ತಮ್ಮ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳಚಿಕೊಟ್ಟಿದ್ದಾರೆ ಎನ್ನಲಾಗಿದೆ.

Latest Videos

undefined

ಸಿಲಿಕಾನ್‌ ಸಿಟಿಯಲ್ಲಿ ಸಿನಿಮೀಯ ರೀತಿ ಘಟನೆ: 10 ಸೆಕೆಂಡ್‌ನಲ್ಲಿ ಲಕ್ಷಧೀಶನಾದ ಬೈಕ್ ಸವಾರ !

ಚಿನ್ನ ಕೈಗೆ ಸಿಗಿತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಕೆಲ ಸಮಯದ ನಂತರ ತಮ್ಮ ಚಿನ್ನದ ತಾಳಿಗಳನ್ನು ಕಳೆದುಕೊಂಡದ್ದು ಅರಿವಿಗೆ ಬಂದು ಮಹಿಳೆಯರಿಬ್ಬರು ಕುಟುಂಬದವರೊಂದಿಗೆ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.
ಘಟನೆ ಮಾಹಿತಿ ಪಡೆದ ₹100ರ ನೋಟಿಗೆ ಜ್ಞಾನ ತಪ್ಪಿಸುವ ದ್ರಾವಣವನ್ನು ಸಿಂಪಡಿಸಿರಬಹುದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನೆ ನಡೆದ ಸ್ಥಳದ ಸಮೀಪದ ಸಿಸಿ ಟಿವಿಯ ದೃಶ್ಯಾವಳಿಗಳನ್ನು ಗಮನಿಸಿರುವ ಬನ್ನೇರುಘಟ್ಟ ಪೊಲೀಸರು ಖದೀಮರ ಬಂಧನಕ್ಕೆ ಬಲೆ ಬೀಸಿದ್ದಾರೆ.

click me!