ತಿರುವುಗಳ ಮಧ್ಯೆ ಸಿಡಿ ಕೇಸ್; ದೂರೇ ಇಲ್ಲದೆ ಮೇಲೆ ತನಿಖೆ ಎಲ್ಲಿಂದ?

By Suvarna NewsFirst Published Mar 10, 2021, 7:59 PM IST
Highlights

ಆರಂಭಿಕ ಆಘಾತದಿಂದ ಮಾಜಿ ಸಚಿವ ಬಚಾವ್ ಆದ್ರಾ..? ಸದ್ಯದ ಮಟ್ಟಿಗೆ ಸಿಡಿ ಕೇಸ್ ನಲ್ಲಿ ಎಫ್ ಐ ಆರ್ ಆಗೋದೆ ಡೌಟ್..?  ದೂರುದಾರ ಕಂಪ್ಲೆಂಟ್ ಹಿಂಪಡೆದಿರೋದು ಕೇಸ್ ಗೆ ಟರ್ನಿಂಗ್ ಪಾಯಿಂಟ್/ ಎಫ್ ಐ ಆರ್ ಆಗೇ ಇಲ್ಲ, ನನ್ನ ಮೇಲೆ ದೂರೆ ಇಲ್ಲ 

ಬೆಂಗಳೂರು(ಮಾ. 10)  ರಮೇಶ್ ಜಾರಕಿಹೊಳಿ ವಿರುದ್ಧ ದೂರು ಕೊಟ್ಟಿದ್ದ ಸಾಮಾಜಿಕ ಹೋರಾಟಗಾರ ದಿನೇಶ್  ದೂರನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.  ಇನ್ನೊಂದು ಕಡೆ ರಮೇಶ್ ಜಾರಕಿಹೊಳಿ ಅವರೇ ಸುದ್ದಿಗೋಷ್ಠಿ ನಡೆಸಿ ಅನೇಕ ವಿಚಾರಗಳನ್ನು ಹೇಳಿದ್ದಾರೆ.

ಆರಂಭಿಕ ಆಘಾತದಿಂದ ಮಾಜಿ ಸಚಿವ ಬಚಾವ್  ಆದರಾ? ಸದ್ಯದ ಮಟ್ಟಿಗೆ ಸಿಡಿ ಕೇಸ್ ನಲ್ಲಿ ಎಫ್ ಐ ಆರ್ ಆಗೋದೆ ಡೌಟ್... ಹೌದು ಪ್ರಕರಣಕ್ಕೆ ಸಂಬಂಧಿಸಿ  ಈ ಮಾತು ಕೇಳಿಬರುತ್ತಿದೆ.

'ಪ್ಯಾಂಟ್ ಬಿಚ್ಚಿ ಎಂದು ಕಾಂಗ್ರೆಸ್ ನವರು ಹೇಳಿದ್ರಾ'

ದೂರುದಾರ ಕಂಪ್ಲೆಂಟ್ ಹಿಂಪಡೆದಿರೋದು  ರಮೇಶ್ ಅಬರಿಗೆ ಪ್ಲಸ್ ಆಗಿದೆ. ಎಫ್ ಐ ಆರ್ ಆಗೇ ಇಲ್ಲ, ನನ್ನ ಮೇಲೆ ದೂರೆ ಇಲ್ಲ ದೂರೆ ಇಲ್ಲ ಎಂದಾದಮೇಲೆ ತನಿಖೆ ಮಾಡಲು ಸಾಧ್ಯವಿಲ್ಲ . ವೀಡಿಯೋವನ್ನ ಸಂಪೂರ್ಣವಾಗಿ ಮಾರ್ಫಿಂಗ್  ಮಾಡಿದ್ದಾರೆ. ಯುವತಿ ಮುಂದೆ ಬಂದು ಹೇಳಿಕೆ ಕೊಟ್ಟಿಲ್ಲ. ನನ್ನ ಹೆಸರನ್ನು ಹಾಳು ಮಾಡಲು ಹೀಗೆ ಮಾಡಲಾಗಿದೆ ಎನ್ನುವುದು ರಮೇಶ್‌ ವಾದ.

ಸರ್ಕಾರಕ್ಕೆ ಮುಜುಗರವಾಗಬಾರದು ಅಂತಾ ನೈತಿಕತೆಯಿಂದ ರಾಜೀನಾಮೆ ಕೊಟ್ಟಿದ್ದೇನೆ ಎಂದಿದ್ದ  ರಮೇಶ್ ಈಗ ಆಗಿರುವ ಬದಲಾವಣೆ ಆಧಾರವಾಗಿಟ್ಟುಕೊಂಡು ಮಂತ್ರಿ ಪದವಿ ವಾಪಸ್ ಪಡೆಯಲು ಯತ್ನ ಆರಂಭಿಸಲಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಯುವತಿ ಹೇಳಿಕೆ ನೀಡುವವರೆಗೂ ಪ್ರಕರಣ ಒಂದು ನಿರ್ದಿಷ್ಟ ಹಂತಕ್ಕೆ ಬರಲು ಸಾಧ್ಯವೇ ಇಲ್ಲ. ಆದರೆ ಯುವತಿ ಮಾತ್ರ ಯಾರ ಕೈಗೂ ಸಿಕ್ಕಿಲ್ಲ. ಹಾಗಾಗಿ ಹಲವು ಪ್ರಶ್ನೆಗಳು ಹಾಗೆ ಉಳಿದುಕೊಂಡಿವೆ. 

click me!