ಬೆಳಗಾವಿಗೆ ಓದಲು ಬಂದ ಮಹಾರಾಷ್ಟ್ರದ ಅಪ್ರಾಪ್ತ, ಹಾಸ್ಟೆಲ್‌ ನಲ್ಲಿ ನೇಣಿಗೆ ಶರಣು!

By Gowthami K  |  First Published Aug 16, 2024, 9:18 PM IST

ಬೆಳಗಾವಿ ಜಿಲ್ಲೆಯ ನಿಡಸೋಸಿಯ ಪಿಯು ಕಾಲೇಜಿನ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವಿದ್ಯಾರ್ಥಿ ಮಹಾರಾಷ್ಟ್ರದ ಸಾಂಗಲಿ ಮೂಲದವನೆಂದು ಗುರುತಿಸಲಾಗಿದೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.


ಬೆಳಗಾವಿ (ಆ.16): ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿಯೊಬ್ಬ ಸಾವಿಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. ನಿಡಸೋಸಿ ಜಗದ್ಗುರು ಪಂಚಮ ನಿಜಲಿಂಗೇಶ್ವರ ಪಿಯು ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿ ಕಾಲೇಜು ಕ್ಯಾಂಪಸ್ ನಲ್ಲೇ ಇರುವ ಹಾಸ್ಟೆಲ್ ನಲ್ಲಿ ಸಾವಿಗೆ ಶರಣಾಗಿದ್ದಾನೆ.

ಮಯೂರ ಕುಂಬಾರ(17)‌ ಸಾವಿಗೆ ಕೊರಳೊಡ್ಡಿದ ಯುವಕನಾಗಿದ್ದು, ಈತ ಮಹಾರಾಷ್ಟ್ರದ ಸಾಂಗಲಿ ಮೂಲದ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಪ್ರಥಮ ಪಿಯುಸಿ ಸೈನ್ಸ್‌ ವಿಭಾಗದಲ್ಲಿ ಈತ ವ್ಯಾಸಂಗ ಮಾಡುತ್ತಿದ್ದ. ಸಂಜೆ ರೂಮ್ ನಲ್ಲಿ ಯಾರು ಇಲ್ಲದಾಗ ಬೆಡ್ ಶೀಟ್ ನಿಂದ ಪ್ಯಾನ್ ಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾನೆ. ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

Tap to resize

Latest Videos

undefined

ವೈದ್ಯರಿಲ್ಲದೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಪರದಾಟ!

ವಿದ್ಯಾರ್ಥಿ ಪೋಷಕರು ಮಹಾರಾಷ್ಟ್ರದಿಂದ ಸ್ಥಳಕ್ಕೆ ಬಂದ ಬಳಿಕ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ರವಾನೆ ಮಾಡಲಾಗುವುದು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದೋಡಾ ಕಾರ್ಯಾಚರಣೆಯಲ್ಲಿ ಹುತಾತ್ಮನಾದ ಸೈನಿಕ ತಾಯಿಗೆ ಮಾಡಿದ ಕೊನೆಯ ಕಾಲ್‌ನಲ್ಲಿ ಸುಳ್ಳು ಹೇಳಿದ್ದ!

ವಿದ್ಯಾರ್ಥಿಯ ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಸದ್ಯಕ್ಕೆ ಯಾವುದೇ ಪತ್ರಗಳು ಕೂಡ ಘಟನಾ ಸ್ಥಳದಲ್ಲಿ ಸಿಕ್ಕಿಲ್ಲ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

click me!