ಪ್ರೀತಿಗೆ ವಿರೋಧವಿದ್ದರೆ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದ್ರೆ ಇಲ್ಲಿ ಇವರಿಬ್ಬರ ಪ್ರೀತಿಗೆ ಯಾರು ವಿರೋಧಿಸಿರಲಿಲ್ಲ. ಆದರೂ ಪ್ರೀಮಿಗಳು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಂತೆ ಇವರ ಶವ ಪತ್ತೆಯಾಗಿದೆ.
ಕಲಬುರಗಿ, (ಫೆ.16): ಪ್ರೇಮಿಗಳ ದಿನಕ್ಕೆ ಮೂರು ದಿನ ಮುಂಚೆ ಅಂದ್ರೆ ಫೆಬ್ರವರಿ 11ರಂದು ನಾಪತ್ತೆಯಾಗಿದ್ದ ಪ್ರೇಮಿಗಳು ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಕಲಬುರಗಿ ಜಿಲ್ಲೆಯ ಯಡ್ರಾಮಿ ಹೊರವಲಯದಲ್ಲಿ ಶವ ಪತ್ತೆಯಾಗಿದೆ. ಪರಶುರಾಮ ಪೂಜಾರಿ(23), ಭಾಗ್ಯಶ್ರೀ(19) ಮೃತ ಪ್ರೇಮಿಗಳು.
ಪ್ರೀತಿಸಿದ ಹುಡುಗಿಯ ದುರಂತ ಸಾವು : ಇತ್ತ ಪ್ರಿಯಕರನೂ ನೇಣಿಗೆ ಶರಣು
ಪೂಜಾರಿ ಮತ್ತು ಭಾಗ್ಯಶ್ರೀ ಯಡ್ರಾಮಿ ತಾಲೂಕಿನ ಮಾನಶಿವನಗಿ ಗ್ರಾಮದ ನಿವಾಸಿಗಳು. ಇವರಿಬ್ಬರೂ ಒಬ್ಬರನೊಬ್ಬರು ಪ್ರೀತಿಸುತ್ತಿದ್ದು ಮದುವೆ ಮಾಡುವುದಕ್ಕೆ 2 ಕುಟುಂಬಗಳು ಒಪ್ಪಿಕೊಂಡಿದ್ದವು.
ಆದ್ರೆ ಮದುವೆ ಮಾಡಲು ವಿಳಂಬವಾಗುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರೂ ಮನೆಯಿಂದ ನಾಪತ್ತೆಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಒಂದೇ ಮರಕ್ಕೆ ಇಬ್ಬರೂ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.