ಮದ್ಯದ ನಶೆ ಏನೆಲ್ಲಾ ಮಾಡಿಸುತ್ತದೆ, ಶಿವಮೊಗ್ಗದ ವ್ಯಕ್ತಿಯ ಪ್ರಾಣ ಹಾರಿಹೋಯ್ತು!

By Suvarna News  |  First Published May 4, 2020, 7:35 PM IST

ರಾಜ್ಯದಲ್ಲಿ ಮುಕ್ತ ಮದ್ಯ ಮಾರಾಟ/ ಕುಡಿದು ಬೈಕ್ ಚಲಾಯಿಸಿ ಪ್ರಾಣ ಕಳೆದುಕೊಂಡ ಯುವಕ/ ಶಿವಮೊಗ್ಗದ ಬಿಎಚ್ ರಸ್ತೆಯಲ್ಲಿ ಘಟನೆ


ಶಿವಮೊಗ್ಗ (ಮೇ. 04) ಕೊರೋನಾ ಲಾಕ್ ಡೌನ್ ನಡುವೆಯೂ ಇಂದಿನಿಂದ ಮದ್ಯ ಮಾರಾಟ ಆರಂಭವಾಗಿದ್ದು, ಪರಿಣಾಮವಾಗಿ ಮೊದಲ ಬಲಿಯಾಗಿದೆ.  ಕುಡಿದು ಬೈಕ್ ಓಡಿಸುತ್ತಿದ್ದ ಯುವಕನೋರ್ವ ಬ್ಯಾಲೆನ್ಸ್‌ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ.

ಮಲವಗೊಪ್ಪದಿಂದ ತೆರಳುತ್ತಿದ್ದ ಯುವಕನ ಬೈಕ್ ಸ್ಕಿಡ್ ಆಗಿದೆ. ಬಿದ್ದ ಯುವಕನ ತಲೆಗೆ ಪೆಟ್ಟಾಗಿದ್ದು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Latest Videos

undefined

ಒಳ್ಳೆಯದಲ್ಲ ಕುಡಿತ, ದುರಂತ ಕಾದಿದೆ ಖಚಿತ, ಯಾಕೆ?

ಲಾಕ್ ಡೌನ್ ಸಡಿಲಿಕೆ ಮಾಡಿದ್ದ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಇಡೀ ರಾಜ್ಯದಲ್ಲಿ ಬೆಳಗ್ಗೆಯಿಂದ ಮದ್ಯಪ್ರಿಯರದ್ದೇ ಸುದ್ದಿ. ಸರತಿ ಸಾಲಿನಲ್ಲಿ ನಿಂತರು, ಎಣ್ಣೆ ಕುಡಿದು ತೂರಾಡಿದರು. ಮಣಿಪಾಲದಲ್ಲಿ ಎಣ್ಣೆ ಖರೀದಿಗೆ ಯುವತಿಯರ ದಂಡು ಹೀಗೆ ಸಾಳು ಸಾಲು ಸುದ್ದಿ.

ಇದೆಲ್ಲದರ ನಡುವೆ ಶಿವಮೊಗ್ಗದಲ್ಲಿ ಅಪಘಾತವೂ ಆಗಿದ್ದು ಕುಡಿದು ಬೈಕ್ ಚಾಲನೆ ಮಾಡಿದ ಪರಿಣಾಮ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. 

 

click me!