ಮುಸ್ಲಿಂ ಹೆಸರು ಬಳಸಿ ಭೂವಂಚನೆ: ಪುಡಿಗಾಸಿಗೆ ಭೂಮಿ ಖರೀದಿಸಿ ರೈತರಿಗೆ ಮೋಸ

Published : Oct 30, 2022, 09:51 AM IST
 ಮುಸ್ಲಿಂ ಹೆಸರು ಬಳಸಿ ಭೂವಂಚನೆ: ಪುಡಿಗಾಸಿಗೆ ಭೂಮಿ ಖರೀದಿಸಿ ರೈತರಿಗೆ ಮೋಸ

ಸಾರಾಂಶ

ಮೂಲತಃ ಹಿಂದೂ ಸಂಸ್ಥೆ ಆಗಿದ್ದರೂ, ಮುಸ್ಲಿಮರ ಹೆಸರಿನಲ್ಲಿ ಆಗಮಿಸಿ ಬಡ ಹಿಂದೂ ರೈತರಲ್ಲಿ ಭೀತಿ ಹುಟ್ಟಿಸಿ ಒಟ್ಟು 200 ಎಕರೆ ಜಮೀನು ಲಪಟಾಯಿಸಿದ ಪ್ರಕರಣ ಮಧ್ಯಪ್ರದೇಶದ ಖರ್ಗೋನ್‌ನಲ್ಲಿ ನಡೆದಿದೆ.

ಖರ್ಗೋನ್‌: ಮೂಲತಃ ಹಿಂದೂ ಸಂಸ್ಥೆ ಆಗಿದ್ದರೂ, ಮುಸ್ಲಿಮರ ಹೆಸರಿನಲ್ಲಿ ಆಗಮಿಸಿ ಬಡ ಹಿಂದೂ ರೈತರಲ್ಲಿ ಭೀತಿ ಹುಟ್ಟಿಸಿ ಒಟ್ಟು 200 ಎಕರೆ ಜಮೀನು ಲಪಟಾಯಿಸಿದ ಪ್ರಕರಣ ಮಧ್ಯಪ್ರದೇಶದ ಖರ್ಗೋನ್‌ನಲ್ಲಿ ನಡೆದಿದೆ.

2000ನೇ ಸಾಲಿನಲ್ಲಿ ಖರ್ಗೋನ್‌ ಪಟ್ಟಣದ (Khargone town) ಹೊರವಲಯದಲ್ಲಿರುವ ಸಣ್ಣ ರೈತರಿಂದ ಭೂಮಿಯನ್ನು ಖರೀದಿಸಲಾಗಿತ್ತು. ಅಲ್ಲಿದ್ದ ಹಿಂದೂ (Hindu) ಸಣ್ಣ ರೈತರಿಗೆ, ‘ಈ ಜಾಗದಲ್ಲಿ ಮುಸ್ಲಿಮರು (Muslim) ಶೀಘ್ರವೇ ಬಂದು ನೆಲೆಸಲಿದ್ದಾರೆ. ಕಸಾಯಿ ಖಾನೆಗಳು ಬರಲಿವೆ’ ಎಂದು ಜಾಕೀರ್‌ ಖಾನ್‌ (Zakir Khan) ಹೆಸರಿನ ವಕ್ತಿಯೊಬ್ಬ ಹೇಳಿದ್ದ. ಅಲ್ಲದೆ, ‘ನಮ್ಮದು‘ತಂಜೀಮ್‌-ಇ-ಝರ್ಕೇಕ್‌’ ಹೆಸರಿನ ಮುಸ್ಲಿಂ ಸಂಸ್ಥೆ ಆಗಿದ್ದು ಹಜ್‌ ಸಮಿತಿ ಹಾಗೂ ಮುಸ್ಲಿಮರಿಗಾಗಿ ಸ್ಮಶಾನ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದ. ಕಸಾಯಿಖಾನೆಗಳು ಬರಲಿವೆ ಎಂಬ ಸುದ್ದಿ ಕೇಳಿ ಚಿಂತೆಗೀಡಾದ ಜನರು ಪುಡಿಗಾಸಿಗೆ ತಮ್ಮ ಜಮೀನನ್ನು ‘ತಂಜೀಮ್‌-ಇ-ಝರ್ಕೇಕ್‌’ (Tanjeem-e-Zarkeq) ಸಂಘಟನೆಗೆ ಮಾರಾಟ ಮಾಡಿದ್ದರು.

ಆದರೆ ಜಾಗ ಖರೀದಿ ಮುಗಿಸಿದ್ದೇ ತಡ, ಸಂಘಟನೆಯ ಹೆಸರನ್ನು 2007ರಲ್ಲಿ ‘ಪ್ರೊಫೆಸರ್‌ ಪಿ.ಸಿ. ಮಹಾಜನ್  ಫೌಂಡೇಶನ್‌’ ಎಂದು ಬದಲಾಯಿಸಲಾಗಿದೆ. ಬಿಜೆಪಿ ನಾಯಕ ರಣಜೀತ್‌ ಸಿಂಗ್‌ ದಂಡಿರ್‌ (Ranjeet Singh Dandir) ಈ ಸಂಘಟನೆಯ ಮುಖ್ಯಸ್ಥನಾಗಿದ್ದಾರೆ. ಈ ಸ್ಥಳದಲ್ಲಿ ಈಗ ಟೌನ್‌ಶಿಪ್‌ ನಿರ್ಮಾಣ ಆಗುತ್ತಿದೆ. ಇದು ತಿಳಿದ ಕೂಡಲೇ, ತಾವು ಮೋಸ ಹೋದೆವು ಎಂದು ರೈತರು ಪೊಲೀಸರಿಗೆ ದೂರಿದ್ದಾರೆ. ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ, ಈ ಜಾಗವನ್ನು ಸದುದ್ದೇಶಕ್ಕಾಗಿ ಬಳಸಲಾಗುತ್ತಿದ್ದು, ವಸತಿ ಸಂಕೀರ್ಣ ಹಾಗೂ ಗೋಶಾಲೆಯನ್ನು ಇಲ್ಲಿ ನಿರ್ಮಿಸಲಾಗುವುದು ಎಂದು ರಣಜೀತ್‌ ಹೇಳಿದ್ದಾರೆ.

ಜಮ್ಮು - ಕಾಶ್ಮೀರದಲ್ಲಿ ಎಲ್ಲಾ ಭಾರತೀಯರಿಗೆ ಭೂಮಿ ಖರೀದಿಗೆ ಅವಕಾಶ, ಕೇಂದ್ರದ ಮಹತ್ವದ ಹೆಜ್ಜೆ!

ಕಾರ್ಪೊರೇಟ್‌ ಕೃಷಿ ಉದ್ಯಮಕ್ಕೆ ಪ್ರವೇಶಿಸುವುದಿಲ್ಲ: ರಿಲಯನ್ಸ್‌!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು