ಸರ್ಕಾರದ ನಡೆಯಿಂದ ಆತಂಕಗೊಂಡು ಆತ್ಮಹತ್ಯೆಗೆ ಯತ್ನಿಸಿದ KSRTC ಸಿಬ್ಬಂದಿ

By Suvarna NewsFirst Published Apr 10, 2021, 4:41 PM IST
Highlights

 ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಸಾರಿಗೆ ನಿಗಮ ಅಧಿಕಾರಿಗಳು ಮತ್ತು ಸರ್ಕಾರ ಪ್ರಯೋಗಿಸಿರುವ ವರ್ಗಾವಣೆ ಅಸ್ತ್ರಕ್ಕೆ ಆತಂಕಗೊಂಡ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮಂಡ್ಯ, (ಏ.10):6ನೇ ವೇತನ ಆಯೋಗದ ಜಾರಿಗಾಗಿ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರನ್ನು ಸರ್ಕಾರ, ವರ್ಗಾವಣೆ ಹಾಗೂ ಸೇವೆಯಿಂದ ವಜಾ ಮಾಡುತ್ತಿದೆ.

 ನಿಗಮ ಅಧಿಕಾರಿಗಳು ಮತ್ತು ಸರ್ಕಾರ ಪ್ರಯೋಗಿಸಿರುವ ವರ್ಗಾವಣೆ ಅಸ್ತ್ರಕ್ಕೆ ಆತಂಕಗೊಂಡ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.  ಈ ಘಟನೆ ಇಂದು (ಶನಿವಾರ) ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ.

ಕರ್ತವ್ಯಕ್ಕೆ ಹಾಜರಾಗಿ ಇಲ್ಲಾ ಕ್ವಾಟ್ರಸ್ ಖಾಲಿ ಮಾಡಿ; ಅಧಿಕಾರಿಗಳಿಂದ ಒತ್ತಡ ತಂತ್ರ..! 

ಮಳವಳ್ಳಿ ಕೆಎಸ್​ಆರ್​ಟಿಸಿ ಡಿಪೋದ ಚಾಲಕ ಕಂ ನಿರ್ವಾಹಕ ರವಿಶಂಕರ್(54) ಆತ್ಮಹತ್ಯೆಗೆ ಯತ್ನಿಸಿದವ. ಮಳವಳ್ಳಿ ಪಟ್ಟಣದ ಸಿದ್ಧಾರ್ಥ ನಗರದಲ್ಲಿ ವಾಸವಾಗಿದ್ದರು. 

ರವಿಶಂಕರ್ ಜತೆ ಕೆಲಸ ನಿರ್ವಹಿಸುತ್ತಿದ್ದ ನಾಲ್ವರನ್ನ ಅಧಿಕಾರಿಗಳು ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆ. ತನ್ನನ್ನೂ ವರ್ಗಾವಣೆ ಮಾಡಬಹುದು ಎಂಬ ಆತಂಕದಲ್ಲಿ ಬೆಳೆ ಔಷಧ ಸೇವಿಸಿ ರವಿಶಂಕರ್ ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

 ಕೂಡಲೇ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ. ಮಳವಳ್ಳಿ ಪಟ್ಟಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!